ಚನ್ನಗಿರಿ ಶಾಸಕರೇ, ನಿಮಗೆ ಮತ ಹಾಕಿ ಜೂಜಾಟ ಆಡಲು ಬಿಟ್ಟಿಲ್ಲ: ಹೊದಿಗೆರೆ ರಮೇಶ್ ಆರೋಪ

ಚನ್ನಗಿರಿ, ಅ.18: ಚನ್ನಗಿರಿ (Channagiri) ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳು ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಶಾಸಕ ಇಂದು ಕಣ್ಮರೆಯಾಗಿ ಪ್ರವಾಸವನ್ನು ಕೈಗೊಂಡಿರುವುದು ನಮ್ಮ ಚನ್ನಗಿರಿ ತಾಲೂಕಿನ ದೌರ್ಭಾಗ್ಯವಾಗಿದೆ ಎಂದು ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಹೊದಿಗೆರೆ ರಮೇಶ್ ಹೇಳಿದರು.

ಗುರುವಾರ ಪಟ್ಟಣದ ಬೀರೂರು ವೃತ್ತದಲ್ಲಿ ಕಳೆದ 8 ದಿನಗಳಿಂದ ಮಹರ್ಷಿ ವಾಲ್ಮೀಕಿ ಪುತ್ತಳಿ ನಿರ್ಮಾಣಕ್ಕಾಗಿ ಚನ್ನಗಿರಿ ತಾಲೂಕು ವಾಲ್ಮೀಕಿ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಹೋರಾತ್ರಿ ಧರಣಿ ಕಾರ್ಯಕ್ರಮದಲ್ಲಿ ಚನ್ನಗಿರಿ ತಾಲೂಕಿನ ಹರೋಸಾಗರ ಮತ್ತು ಬಸವಾಪಟ್ಟಣದಿಂದ ಬಂದ ಪಾದಯಾತ್ರಿಗಳನ್ನು ಮತ್ತು ಬೈಕ್ ರ್ಯಾಲಿಯಲ್ಲಿ ಬಂದ ಯುವಕರನ್ನು ಸ್ವಾಗತಿಸಿ ಮಾತನಾಡಿ ಇಂದು ಶಾಸಕನಾಗಲು ನಾಯಕ ಸಮಾಜದ ಕೊಡುಗೆ ಅಪಾರವಾಗಿದೆ. ಆದರೆ ಅದನ್ನು ಮರೆತಿರುವ ಶಾಸಕ ಸೌಜನ್ಯಕ್ಕಾದರೂ ಒಂದು ದಿನವೂ ಬಂದು ಸಮಾಜದ ಜನರ ಸಮಸ್ಯೆಯನ್ನು ಕೇಳಲು ಸಮಯವಿಲ್ಲದಂತಾಗಿದೆ.

assault; ರೈತರ ಮೇಲೆ ಹಲ್ಲೆ ನಡೆಸಿದ ಪಿಎಸ್’ಐ: ವಿಡಿಯೋ ವೈರಲ್

ಶೋಷಿತ ಸಮುದಾಯಗಳು ಮತಹಾಕಿ ಕುದುರೆ ತರಹ ಓಡಲು ಬಿಡುವುದಿಲ್ಲ, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಹೊತ್ತು ತಾಲೂಕಿನ ಅಭಿವೃದ್ದಿಯ ಕನಸನ್ನು ಹೊತ್ತು ನಿನಗೆ ಮತಹಾಕಿದ್ದೇವೆ. ಶೋಷಿತ ಸಮುದಾಯದ ಮತಗಳು ಉಚಿತವಲ್ಲ. ಮತ್ತು ಅಹಿಂದ ವರ್ಗದ ಮತಗಳು ಮತ ಬ್ಯಾಂಕ್‌ಗಳಲ್ಲ. ಅದನ್ನು ತಲೆಯಿಂದ ಮೊದಲು ತೆಗೆದುಹಾಕು. ನಿನ್ನ ಬೆಂಬಲ ನಮಗೆ ಅವಶ್ಯಕತೆ ಇಲ್ಲ. ಮುಂದಿನ ದಿನದಲ್ಲಿ ಇಲ್ಲಿಗೆ ಬಂದರೂ ನಾವು ಬಹಿಷ್ಕರಿಸುತ್ತೇವೆ. ನಮಗೆ ಹೋರಾಟ ಅನಿವಾರ್ಯ ಮತ್ತು ನಿರಂತರ ವಾಗಿದ್ದು ಕಾನೂನಿಗೆ ನಾವು ನೀಡುವ ಗೌರವವನ್ನು ನಮ್ಮ ಬಲಹೀನತೆ ಎಂದು ತಿಳಿದುಕೊಳ್ಳಬೇಡಿ. ನಮ್ಮನ್ನು ಕಾನೂನು ವಿರೋಧಿ ಚಟುವಟಿಕೆ ಮಾಡುವ ಪ್ರಚೋದನೆ ಮಾಡಬಾರದು. ತಾಲೂಕಿನ ಅಧಿಕಾರಿಗಳು ಬಂಡವಾಳ ಹಾಕಿಕೊಂಡು ಬಂದಿದ್ದು ವರ್ಗಾವಣೆ ಮಾಡುತ್ತಾರೆ ಎಂಬ ಭಯವನ್ನು ಬಿಟ್ಟು ಜನರಿಗೆ ನ್ಯಾಯವನ್ನು ಕೊಡಿ. ಚನ್ನಗಿರಿಯ ಎಲ್ಲಾ ಸಮಾಜಗಳು ಇಲ್ಲಿ ವಾಲ್ಮೀಕಿ ಪುತ್ತಳಿಯನ್ನು ಇಡಲು ಪ್ರತಿದಿನವೂ ಸಹಕಾರ ನೀಡುತ್ತಿದ್ದು ೨೧ರಂದು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಲಿದ್ದು ಎಲ್ಲಾ ಸದಸ್ಯರು ಈ ವೃತ್ತಕ್ಕೆ ಮಹರ್ಷಿ ವಾಲ್ಮೀಕಿ ವೃತ್ತ ಎಂದು ಸೂಚಿಸುವ ವಿಶ್ವಾಸವಿದೆ ಎಂದರು.

electricity; ವಿದ್ಯುತ್ ಪೂರೈಸುವಂತೆ ಸರ್ಕಾರದ ವಿರುದ್ಧ ಯುವಕರ ಆಗ್ರಹ

ನಾಯಕ ಸಮಾಜದ ಮುಖಂಡ ಲೋಹಿತ್‌ಕುಮಾರ್ ಮಾತನಾಡಿ ಹರೋಸಾಗರದಿಂದ ಸುಮಾರು 40 ಜನ ಪಾದಯಾತ್ರೆ ಮೂಲಕ ಚನ್ನಗಿರಿಗೆ ಬಂದು ನಮ್ಮ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದರೆ. ಮತ್ತು ಇಂದು ಹೊನ್ನಾಳಿ, ಅಜ್ಜಂಪುರ, ಹೊಸದುರ್ಗ ಎಲ್ಲಾ ಜಾತಿವರ್ಗದವರು ಕಡೆಗಳಿಂದ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ನಾವು ಇಲ್ಲಿ 11 ದಿನಗಳಿಂದ ಹೋರಾಟ ಮಾಡುತ್ತಿದ್ದರೂ ಯಾವ ತಾಲೂಕು ಮಟ್ಟದ ಅಧಿಕಾರಿಗಳು ಬಂದು ಕೇಳುತ್ತಿಲ್ಲ. ಈ ತಾಲೂಕಿಗೆ ರಾಜಕೀಯವಾಗಿ ಸಮಾಜದ ಕೊಡುಗೆ ಅಪಾರವಾಗಿದೆ. ಸಮ ಸಮಾಜದ ನಿರ್ಮಾಣ ನಮ್ಮ ಉದ್ದೇಶ ಎಂದು ಹೇಳಿಕೆಗೆ ಮಾತ್ರ ಹೇಳುತ್ತಾರೆ. ಇಲ್ಲಿ ಅವಕಾಶ ಕೊಡಬೇಡಿ ಎಂದು ಯಾರು ಹೇಳಿದ್ದಾರೆ. ಕಿಡಿಗೇಡಿಗಳು ಈ ಕೆಲಸ ಮಾಡುತ್ತಿದ್ದು ಎಲ್ಲಾ ವರ್ಗದ ಜನರ ಜೊತೆ ಪ್ರೀತಿ ವಿಶ್ವಾಸದಿಂದ ಇದ್ದೇವೆ ಎಂದರು. ನಮ್ಮ ಸಮಾಜದ ಯುವಕರ ಮೇಲೆ ಕೇಸುಗಳನ್ನು ಹಾಕುತ್ತಿದ್ದಾರೆ.

ಈ ಸಂದರ್ಭದಲ್ಲಿ ಬುಳಸಾಗರದ ನಾಗರಾಜಣ್ಣ, ಜೆಡಿಎಸ್ ತಾಲೂಕು ಅಧ್ಯಕ್ಷ ಗಾದ್ರಿರಾಜು, ಬಿಜೆಪಿ ಮುಖಂಡ ಪಿ.ಬಿ.ನಾಯಕ್, ಹೊನ್ನಾಳಿ ತಾಲೂಕಿನ ನಾಯಕ ಸಮಾಜದ ಅಧ್ಯಕ್ಷ , ಸಂತೆಬೆನ್ನೂರು ಕೃಷ್ಣಮೂರ್ತಿ, ವಕೀಲರಾದ ರಾಮಚಂದ್ರಮೂರ್ತಿ, ರಂಗನಾಥ್, ಚನ್ನಗಿರಿ ನವೀನ್ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!