ಉತ್ತಮ ಸಾಧನೆಗೈದ ಹಳೇ ಕುಂದುವಾಡ ಪಿಯುಸಿ ವಿದ್ಯಾರ್ಥಿಗಳು.. ಸರ್ಕಾರಿ ಕಾಲೇಜ್ ವಿದ್ಯಾರ್ಥಿಗಳಿಗೆ ಗ್ರಾಮಸ್ಥರ ಮೆಚ್ಚುಗೆ ಮಹಾಪೂರ

ಉತ್ತಮ ಸಾಧನೆಗೈದ ಹಳೇ ಕುಂದುವಾಡ ಪಿಯುಸಿ ವಿದ್ಯಾರ್ಥಿಗಳು.. ಸರ್ಕಾರಿ ಕಾಲೇಜ್ ವಿದ್ಯಾರ್ಥಿಗಳಿಗೆ ಗ್ರಾಮಸ್ಥರ ಮೆಚ್ಚುಗೆ ಮಹಾಪೂರ

ದಾವಣಗೆರೆ : ದ್ವಿತೀಪಿಯುಸಿ ಫಲಿತಾಂಶದಲ್ಲಿ ನಗರದ ಹಳೇ ಕುಂದುವಾಡ ಪದವಿ ಪೂರ್ವ ಕಾಲೇಜು, ಅತ್ಯುತ್ತಮ ಸಾಧನೆ ಮಾಡಿದ್ದು ಐವರು ವಿದ್ಯಾರ್ಥಿಗಳು ಯ ಡಿಸ್ಟಿಂಗ್ಷನ್ ಪಡೆದಿದ್ದಾರೆ..

ಪರೀಕ್ಷೆ ಬರೆದ 45 ವಿದ್ಯಾರ್ಥಿಗಳಲ್ಲಿ 40 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಸರಾಸರಿ 90% ಫಲಿತಾಂಶ ಬಂದಿದೆ. ಈ ಪೈಕಿ ಎಸ್ ಜಿ ಪಲ್ಲವಿ 559(93.17), ಭರತ್ ಜಿ, 553(ಶೇ. 92.17), ಕನಕ ಬಿಎಸ್ 543(ಶೇ90.50), ವಿದ್ಯಾ ಎಸ್536(ಶೇ.89.33), ಯಶೋಧ ಬಿ.517(ಶೇ.86.17) ಅಂಕ ಗಳಿಸುವ ಡಿಸ್ಟಿಂಗ್ಷನ್ ಗಳಿಸಿದ್ದಾರೆ..

ಇನ್ನೂ 22 ವಿದ್ಯಾರ್ಥಿಗಳ ಫಸ್ಟ್ ಕ್ಲಾಸ್, ನಾಲ್ವರು ಸೆಕೆಂಡ್ ಕ್ಲಾಸ್, 9 ಮಂದಿ 3rd ಕ್ಲಾಸ್ ಸೇರಿದಂತೆ ಪರೀಕ್ಷೆ ಬರೆದ 45 ವಿದ್ಯಾರ್ಥಿಗಳಲ್ಲಿ 40 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ..
ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕ ವೃಂದ ಸೇರಿದಂತೆ ಹಳೇ ಕುಂದುವಾಡ ಗ್ರಾಮಸ್ಥರು ಶುಭಕೋರಿದ್ದಾರೆ..

ತರಗತಿ ಪ್ರವೇಶ ಪ್ರಾರಂಭ..

ಹಳೇ ಕುಂದುವಾಡ ಸರ್ಕಾರಿ ಪಿಯುಸಿ ಕಾಲೇಜ್ ಪ್ರತಿ ವರ್ಷವು ಉತ್ತಮ ಫಲಿತಾಂಶ ಪಡೆಯುತ್ತಿದ್ದು, ಡಿಜಿಟಲ್ ಲೈಬ್ರರಿ, ಸ್ಮಾರ್ಟ್ ಕ್ಲಾಸ್, ಸುಸಜ್ಜಿತ ಕಂಪ್ಯೂಟರ್ ಲ್ಯಾಬ್, ಉತ್ತಮ ಭೋಧನೆ, ಆಟದ ಮೈದಾನ, ಸುಸಜ್ಜಿತ ಕಟ್ಟಡ ಒಳಗೊಂಡಿದ್ದು 2023-2024 ಸಾಲಿನ ಪ್ರಥಮ, ದ್ವಿತೀಯ ಪಿಯುಸಿ ಕಲಾ ವಿಭಾಗ, ವಾಣಿಜ್ಯ ವಿಭಾಗದ ತರಗತಿಗಳ ಪ್ರವೇಶಗಳು ಪ್ರಾರಂಭಗೊಂಡಿದೆ..

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!