ಜನವರಿ 9ಕ್ಕೆ ಬಲಿಜ ಸಮಾಜದಿಂದ ಮೀಸಲಾರಿಗೆ ಬೆಂಗಳೂರಿನಲ್ಲಿ ಧರಣಿ

On January 9, a sit-in by the Balija Samaj for Meesalari in Bengaluru

ದಾವಣಗೆರೆ: ಬಲಿಜ ಸಮಾಜವನ್ನು ಹಿಂದುಳಿದ 2ಎ ಪ್ರವರ್ಗದಿಂದ 3ಎ ಮೀಸಲಾತಿಗೆ ಬದಲಾಯಿಸಿರುವುದನ್ನು ಖಂಡಿಸಿ ಹಾಗೂ ಪೂರ್ವ ಪ್ರಮಾಣದ 2ಎ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಜನರಿಗೆ 9ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಎಸ್.ನರಸಿಂಹಮೂರ್ತಿ ಹೇಳಿದರು.
ಸುದ್ದಿಗೋಷ್ಠಯಲ್ಲಿ ಮಾತನಾಡಿದ ಅವರು , ಈ ಮೊದಲು ವಿದ್ಯಾಭ್ಯಾಸಕ್ಕೆ 2ಎ ಮೀಸಲಾತಿ ಹಾಗೂ ಉದ್ಯೋಗಕ್ಕೆ 3ಎ ಮೀಸಲಾತಿ ನೀಡಲಾಗಿತ್ತು. ಆದರೆ ಇದೀಗ ಸರ್ಕಾರ 3ಎ ಪ್ರವರ್ಗಕ್ಕೆ ಬದಲಾಯಿಸಿರುವುದು ಖಂಡನೀಯ. ಬಲಿಜ ಜನಾಂಗಕ್ಕೆ ಕೇವಲ ವಿದ್ಯಾಬ್ಯಾಸಕ್ಕೆ 2ಎ ಮೀಡಲಾತಿ ಇದೆ. ಆದರೆ ಸರ್ಕಾರಿ ಉದ್ಯೋಗ ಹಾಗೂ ರಾಜಕೀಯ ಮೀಸಲಾತಿಯಿಂದ ವಂಚನೆಗೊಳಗಾಗಿದ್ದಾರೆ ಎಂದರು.
ಬಲಿಜ ಜನಾಂಗ ರಾಜ್ಯಾದ್ಯಂತ ಅನೇಕ ಹೋರಾಟಗಳನ್ನು ಮಾಡಿದ್ದರ ಫಲವಾಗಿ ಬಲಿಜ ಜನಾಂಗಕ್ಕೆ 2011 ಆಗಸ್ಟ್ 16ರಲ್ಲಿ ಶಿಕ್ಷಣಕ್ಕೆ ಮಾತ್ರ 2ಎ ಪ್ರವರ್ಗಕ್ಕೆ ಸೇರಿಸಲಾಗಿತ್ತು. ಆದರೆ ಇದೀಗ 3ಎ ಪ್ರವರ್ಗಕ್ಕೆ ಬದಲಾಯಿಸಿರುವುದರಿಂದ ನಮಗೆ ಅನ್ಯಾಯವಾಗಿದೆ. ಬಲಿಜ ಸಮಾಜಕ್ಕೆ ಪೂರ್ವ ಪ್ರಮಾಣದ 2ಎ ಮೀಸಲಾತಿ ನೀಡಬೇಕೆಂದು ಹಲವಾರು ಬಾರಿ ಮನವಿ ಸಲ್ಲಿಸಿದ್ದರು ಯಾವುದೇ ಸ್ಪಂದನೆ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಹೋರಾಟ ರೂಪಿಸಲಾಗಿದೆ ಎಂದರು. ಒಂದು ವೇಳೆ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!