“ಸೋಮೇಶ್ವರೋತ್ಸವ- 2023” ಸಮಾರಂಭ. “ಸೋಮೇಶ್ವರ ಸಾಧನ ಸಿರಿ” ಪ್ರಶಸ್ತಿ ಪ್ರದಾ‌ನ ಸಮಾರಂಭ

"Someshwarotsava- 2023" ceremony. "Someshwara Sadhana Siri" Award Ceremony

ದಾವಣಗೆರೆ:

“ವಿದ್ಯಾರ್ಥಿಗಳ ಆಬಿರುಚಿಗೆ ತಕ್ಕಂತೆ ಪ್ರೋತ್ಸಾಹ ನೀಡಿ ಬೆಳೆಸಬೇಕು…”
ಶಿವಾನಂದ ಕಾಪಶಿ, ಜಿಲ್ಲಾಧಿಕಾರಿಗಳು

“ವಚನಗಳ ಉಪದೇಶಕ್ಕಿಂತ ಆಚರಣೆ ಮುಖ್ಯ…”
ಶ್ರೀ ಚಂದ್ರಶೇಖರ ಶಿವಾಚಾರ್ಯ

ವಿದ್ಯಾರ್ಥಿಗಳ ಅಭಿರುಚಿಗೆ ತಕ್ಕಂತೆ ಪ್ರೋತ್ಸಾಹ, ಸೂಕ್ತ ಮಾರ್ಗದರ್ಶನ ನೀಡಿ ಅವರನ್ನು ಬೆಳೆಸುವುದರ ಮೂಲಕ ಸಮಾಜದ ಆಸ್ತಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಹಾಗೂ ಪೋಷಕರು ಕೆಲಸ ಮಾಡಬೇಕು ಎಂದು ದಾವಣಗೆರೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು. ಅವರು ದಾವಣಗೆರೆ ತಾಲೂಕಿನ ಗೋಣಿವಾಡದ ಶ್ರೀ ಸೋಮೇಶ್ವರ ವಸತಿಯುತ ವಿದ್ಯಾಲಯದ ಶಾಲಾ ವಾರ್ಷಿಕೋತ್ಸವ “ಸೋಮೇಶ್ವರೋತ್ಸವ-2023” ಸಮಾರಂಭ ಉದ್ಥಾಟಿಸಿ ಮಾತನಾಡುತ್ತಿದ್ದರು. ಇಂದಿನ ದಿನಮಾನದಲ್ಲಿ ಬಹುತೇಕ ಪೋಷಕರು ತಮ್ಮ ಮಗು ಇಂಜಿನಿಯರ್ ಆಗಲಿ, ಹೆಚ್ಚು ಹಣ ಗಳಿಸಲಿ ಎಂಬ ಅಭಿಲಾಷೆಯನ್ನು ಹೊಂದಿರುತ್ತಾರೆ. ಆದರೆ ಮಗುವಿನ ಅಭಿರುಚಿ, ಸಾಮರ್ಥ್ಯದ ಬಗ್ಗೆ ಚಿಂತಿಸುವುದಿಲ್ಲ. ಪೂರ್ವ ಪ್ರಾಥಮಿಕ ಶಿಕ್ಷಣದ ಹಂತದಲ್ಲೇ ಶಿಕ್ಷಕರು ಮಾತ್ರ ಮಗುವಿನಲ್ಲಿರುವ ಸುಪ್ತ ಪ್ರತಿಭೆಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಾರೆ. ಆದ್ದರಿಂದ ಶಿಕ್ಷಕರು ಮತ್ತು ಪೋಷಕರು ಪರಸ್ಪರ ಸಮಾಲೋಚನೆ ಮಾಡಿ ಮಗುವಿನ ಅಭಿರುಚಿ ತಕ್ಕನಾಗಿ ಬೆಳೆಸಿ ದೇಶದ, ವಿಶ್ವದ ಆಸ್ತಿಯನ್ನಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಶ್ರೀ ಸೋಮೇಶ್ವರ ವಸತಿಯುತ ವಿದ್ಯಾಲಯವು ಮಕ್ಕಳಿಗೆ ಶಿಕ್ಷಣದ ಜೊತೆಗೆ ಅವರಲ್ಲಿರುವ ಪ್ರತಿಭೆಗೆ ಪೂರಕವಾಗಿ ಶುಕ್ಷಣ ನೀಡುವಂತಹ ಕೆಲಸ ಮಾಡುತ್ತಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿಯವರು ಶ್ಲಾಘಿಸಿದರು.

ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಿರೇಮಠದ ಶ್ರೀ ಷII ಬ್ರII ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ವಿನಯವಂತಿಕೆ, ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬೆಳೆಯಬೇಕು. ವಚನಗಳನ್ನು ಹೇಳುವುದು, ಅವುಗಳ ಅರ್ಥವನ್ನು ಉಪದೇಶಿಸುವುದಕ್ಕಿಂತ ಅವುಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮ ಜೀವನ ಸುಂದರವಾಗುತ್ತದೆ ಹಾಗೂ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ. ಎಷ್ಟೇ ಉನ್ನತ ಶಿಕ್ಷಣ ಪಡೆದರೂ ಕನ್ನಡತನ, ಸಾತ್ವಿಕತೆಯನ್ನು ಬಿಡಬೇಡಿ ಎಂದು ಮಹಾಸ್ವಾಮಿಗಳು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಶ್ರೀ ಸೋಮೇಶ್ವರ ವಸತಿಯುತ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ 2021-22 ರ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ 98.72 ಅಂಕ ಪಡೆದು ಸಾಧನೆಗೈದ ವಿದ್ಯಾರ್ಥಿನಿ ಜಿ.ಬಿ.ಜೀವಿತಾ ಅವರಿಗೆ ರೂ‌.25000 ಬಹುಮಾನದ ಜೊತೆಗೆ ‘ಸೋಮೇಶ್ವರ ಸಾಧನ ಸಿರಿ ” ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಹಾಗೆಯೇ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನೂ ಗೌರವಿಸಿ ಅಭಿನಂದಿಸಲಾಯಿತು.

ಮೈಸೂರಿನ ಖ್ಯಾತ ವಾಗ್ಮಿಗಳಾದ ಪ್ರೊ. ಎಂ.ಕೃಷ್ಣೇ ಗೌಡ್ರು ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪೋಷಕರ ಪಾತ್ರದ ಕುರಿತು ಉಪನ್ಯಾಸ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಸೋಮೇಶ್ವರ ವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಹೆಚ್.ಆರ್‌.ಅಶೋಕ ರೆಡ್ಡಿ ವಹಿಸಿದ್ದರು‌. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಎ.ಹೆಚ್‌.ಶಿವಯೋಗಿ ಸ್ವಾಮಿ, ದಾವಣಗೆರೆ ಮಹಾನಗರಪಾಲಿಕೆಯ ಮಾಜಿ ಮಹಾಪೌರ ಬಿ.ಜಿ.ಅಜಯಕುಮಾರ್, ದಾವಣಗೆರೆ-ಹರಿಹರ ಅರ್ಬನ್ ಕೊ-ಅಪರೇಟಿವ್ ಬ್ಯಾಂಕಿನ ನಿರ್ದೇಶಕ ಕಂಚಿಕೇರಿ ಮಹೇಶ್ ಉಪಸ್ಥಿತರಿದ್ದರು. ವಿದ್ಯಾಲಯದ ಸಂಸ್ಥಾಪಕ ಕೆ.ಎಂ.ಸುರೇಶ್, ಪ್ರಾಚಾರ್ಯೆ ವೀಣಾ ಸುರೇಶ್ ವೇದಿಕೆಯಲ್ಲಿದ್ದರು. 3 ನೇ ತರಗತಿಯ ವಿದ್ಯಾರ್ಥಿನಿ ಮಂಜೂಷಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆ ಕಾರ್ಯಕ್ರಮದ ತರುವಾಯ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಸಮಾರಂಭದಲ್ಲಿ ಕೆಎಸ್‌ಎಸ್ ಕಾಲೇಜಿನ ಹೆಚ್.ಕೆ.ಬಸವರಾಜ್, ಸರ್ ಎಮ್‌ವಿ ಕಾಲೇಜಿನ ಶ್ರೀಧರ್, ಮಹಾನಗರ ಪಾಲಿಕೆ ಸದಸ್ಯ ಕೆ.ಎಂ.ವೀರೇಶ್, ದಾವಣಗೆರೆಯ ಶ್ರೀ ಸೋಮೇಶ್ವರ ವಿದ್ಯಾಲಯದ ಪ್ರಾಚಾರ್ಯೆ ಪ್ರಭಾವತಿ, ಕೆನರಾ ಬ್ಯಾಂಕ್ ವಿಶ್ರಾಂತ ಪ್ರಬಂಧಕ ಕಾಶೀನಾಥ್ ಹಾಗೂ ಶಾಲಾ ಪೋಷಕ ವರ್ಗ ಉಪಸ್ಥಿತರಿದ್ದರು.
ಧನ್ಯವಾದಗಳೊಂದಿಗೆ

ಕೆ.ಎಮ್. ಸುರೇಶ್
ಸಂಸ್ಥಾಪಕರು ಹಾಗೂ ಗೌರವ ಕಾರ್ಯದರ್ಶಿಗಳು
ಶ್ರೀ ಸೋಮೇಶ್ವರ ಶಿಕ್ಷಣ ಸಂಸ್ಥೆಗಳು, ದಾವಣಗೆರೆ
ಮೊ: 9844422633, 9686748362
ಮೈಲ್ ಐಡಿ: sureshkarignur@gmail.com

ವರದಿ:
ಕೆ.ರಾಘವೇಂದ್ರ ನಾಯರಿ
ದಾವಣಗೆರೆ

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!