ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರು ವಿವಿಧ ಠಾಣಾ ವ್ಯಾಪ್ತಿಯಿಂದ ಕಾಣೆಯಾಗಿದ್ದಾರೆ: ಪತ್ತೆಗಾಗಿ ಮನವಿ

ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರು ವಿವಿಧ ಠಾಣಾ ವ್ಯಾಪ್ತಿಯಿಂದ ಕಾಣೆಯಾಗಿದ್ದಾರೆ: ಪತ್ತೆಗಾಗಿ ಮನವಿ

ದಾವಣಗೆರೆ; ಮಹಾರಾಷ್ಟ್ರ ರಾಜ್ಯದ ಚಂದ್ರಾಪುರ ಜಿಲ್ಲೆಯ ನಾಗಭೀರ್ ಟೌನ್,(ವಾರ್ಡ್ ನಂ.4) ರ ನಿವಾಸಿಯಾದ ಬೇಲ್ದಾರ್ ಜನಾಂಗದ 32 ವರ್ಷ ವಯಸ್ಸಿನ ಸಾಗರ್ ವಾರುಲ್ದಾರ್ ಎಂಬ ವ್ಯಕ್ತಿ ಕಾಣೆಯಾಗಿದ್ದು, ಪತ್ತೆಗೆ ಸಹಕರಿಸಲು ಗಾಂಧಿ ನಗರ  ಪೋಲೀಸ್   ಠಾಣೆ ಪಿ.ಎಸ್.ಐ  ಮನವಿ ಮಾಡಿದ್ದಾರೆ.

ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಷಾ ಇನ್ ಫ್ರಾ ಟವರ್ಸ್ ಪ್ರೈವೆಟ್ ಲಿ. ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, 7 ಜನವರಿ 2022 ರಂದು ಕೆಲಸಕ್ಕೆ ಹೋಗದೆ ಅಂದು ಮಧ್ಯಾಹ್ನ 1 ಗಂಟೆಗೆ ತನ್ನ ಊರಿಗೆ ಹೋಗುವುದಾಗಿ ಹೇಳಿ ಅಲ್ಲಿಂದ ಹೊರಟಿದ್ದು, ಇಂದಿನವರೆಗೂ ಮರಳಿ ಬಂದಿರುವುದಿಲ್ಲ ಎಂದು ದೂರು ದಾಖಲಾಗಿರುತ್ತದೆ.  ಚೆಹರೆ ವಿವರ; 5.4 ಅಡಿ ಎತ್ತರ, ದುಂಡು ಮುಖ, ಸಾಧಾರಣ ಹಾಗೂ ಎಣ್ಣೆಗೆಂಪು ಬಣ್ಣ ಹೊಂದಿದ್ದು, ಹೊರಹೋಗುವಾಗ ಬಿಳಿ ಬಣ್ಣದ ಟೀಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ ಹಿಂದಿ ಮತ್ತು ಮರಾಠಿ ಭಾಷೆ ಮಾತನಾಡುತ್ತಾರೆ.
ಈ ವ್ಯಕ್ತಿ ಸುಳಿವು ಅಥವಾ ಮಾಹಿತಿ ದೊರೆತಲ್ಲಿ ನಗರದ ಗಾಂಧೀ ನಗರ  ಪೋಲೀಸ್   ಠಾಣೆ ಅಥವಾ ದೂ.ಸಂ. 08192-272011, ಗಾಂಧೀ ನಗರ ಪೋಲೀಸ್   ಠಾಣೆ ಪಿ.ಎಸ್.ಐ ದೂ. ಸಂ-9480803247 ಮತ್ತು  ಆಜಾದ್ ನಗರ ಪೋಲೀಸ್ ವೃತ್ತ ನಿರೀಕ್ಷಕರ ದೂ.ಸಂ. 9480803233, ದಾವಣಗೆರೆ ಕಂಟ್ರೋಲ್ ರೂಂ. ದೂ. ಸಂ-08192-253100 ಗೆ ಕರೆಮಾಡಿ ಮಾಹಿತಿ ನೀಡಲು ಆಜಾದ್ ನಗರ ಪೋಲೀಸ್ ವೃತ್ತ ನಿರೀಕ್ಷಕ ಗಜೇಂದ್ರಪ್ಪ ಕೆ.ಎನ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಯರಗುಂಟೆ ವಾಸಿ ರತ್ನಮ್ಮ:
ಯರಗುಂಟೆ ಗ್ರಾಮದ ವಾಸಿಯಾದ 64 ವರ್ಷ ವಯಸ್ಸಿನ ರತ್ನಮ್ಮ ಎಂಬ ವ್ಯಕ್ತಿ ಕಾಣೆಯಾಗಿದ್ದು, ಪತ್ತೆಗೆ ಸಹಕರಿಸಲು ಅಜಾದ್ ನಗರ ಪೆÇಲೀಸ್ ಠಾಣೆಯ ಆರಕ್ಷಕ ವೃತ್ತ ನಿರೀಕ್ಷಕರು ಮನವಿ ಮಾಡಿದ್ದಾರೆ.ಯರಗುಂಟೆ ಗ್ರಾಮದ ರತ್ನಮ್ಮ 2022 ಆಗಸ್ಟ್ 9ರಂದು ಮನೆ ಬಿಟ್ಟು ಹೋದವರು ಇಂದಿನವರೆಗೂ ಮರಳಿ ಬಂದಿರುವುದಿಲ್ಲ ಹಾಗೂ ಎಲ್ಲಾ ಕಡೆ ಹುಡುಕಾಡಿದರು ಪತೆಯಾಗಿರುವುದಿಲ್ಲ ಎಂದು ದೂರು ದಾಖಲಾಗಿರುತ್ತದೆ. ಚೆಹರೆ ವಿವರ; 5 ಅಡಿ ಎತ್ತರ, ಕೋಲು ಮುಖ ಹಾಗೂ ಎಣ್ಣೆಗೆಂಪು ಮೈಬಣ್ಣ, ಕಪ್ಪು, ಬಿಳಿ ಮಿಶ್ರಿತ ತಲೆ ಕೂದಲು ಹೊಂದಿದ್ದು, ಮನೆಯಿಂದ ಹೊರಹೋಗುವಾಗ ಕಿತ್ತಳೆ ಬಣ್ಣದ ಸೀರೆ, ಹಸಿರು ಬಣ್ಣದ ರವಿಕೆ ಧರಿಸಿರುತ್ತಾರೆ, ಕನ್ನಡ ಮಾತನಾಡುತ್ತಾರೆ.

ಈ ವ್ಯಕ್ತಿ ಸುಳಿವು ಅಥವಾ ಮಾಹಿತಿ ದೊರೆತಲ್ಲಿ ದಾವಣಗೆರೆ ಅಜಾದ್ ನಗರ ಪೆÇಲೀಸ್ ಠಾಣೆ, ಗಾಂಧಿ ನಗರ ಪೋಲೀಸ್ ಠಾಣೆ  ದೂ. ಸಂ-08192253400, 9480803233, 08192272011 ಅಥವಾ ದಾವಣಗೆರೆ  ಕಂಟ್ರೋಲ್ ರೂಂ. ದೂ. ಸಂ-08192-253100 ಗೆ ಕರೆಮಾಡಿ ಮಾಹಿತಿ ನೀಡಲು  ತಿಳಿಸಲಾಗಿದೆ.
ಅವರಗೆರೆ ಬಡಾವಣೆ ನಿವಾಸಿ ಲಿಂಗರಾಜು:
ದಾವಣಗೆರೆ ನಗರದ ಆವರಗೆರೆ ಬಡಾವಣೆಯ ವಾಸಿಯಾದ 43 ವರ್ಷ ವಯಸ್ಸಿನ ಲಿಂಗರಾಜು ಎಂಬ ವ್ಯಕ್ತಿ ಕಾಣೆಯಾಗಿದ್ದು, ಪತ್ತೆಗೆ ಸಹಕರಿಸಲು ಅಜಾದ್ ನಗರ  ಪೋಲೀಸ್   ಠಾಣೆಯ ಆರಕ್ಷಕ ವೃತ್ತ ನಿರೀಕ್ಷಕರು ಮನವಿ ಮಾಡಿದ್ದಾರೆ. ಅವರಗೆರೆ ಬಡಾವಣೆಯ ಲಿಂಗರಾಜು 2020 ಡಿಸೆಂಬರ್ 4ರಂದು ಮನೆ ಬಿಟ್ಟು ಹೋದವರು ಇಂದಿನವರೆಗೂ ಮರಳಿ ಬಂದಿರುವುದಿಲ್ಲ ಹಾಗೂ ಎಲ್ಲಾ ಕಡೆ ಹುಡುಕಾಡಿದರು ಪತ್ತೆಯಾಗಿರುವುದಿಲ್ಲ ಎಂದು ದೂರು ದಾಖಲಾಗಿರುತ್ತದೆ. ಚೆಹರೆ ವಿವರ; 5.2 ಅಡಿ ಎತ್ತರ, ದುಂಡು ಮುಖ ಹಾಗೂ ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ಗದ್ದದ ಬಳಿ ಹಳೆ ಗಾಯದ ಗುರುತು ಇರುತ್ತದೆ, ಮನೆಯಿಂದ ಹೊರಹೋಗುವಾಗ ಬಿಳಿ ಬಣ್ಣದ ಅಂಗಿ, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ, ಕನ್ನಡ ಮತ್ತು ಹಿಂದಿ ಮಾತನಾಡುತ್ತಾರೆ.
ಈ ವ್ಯಕ್ತಿ ಸುಳಿವು ಅಥವಾ ಮಾಹಿತಿ ದೊರೆತಲ್ಲಿ ದಾವಣಗೆರೆ ಸಿ.ಪಿ.ಐ ಅಜಾದ್ ನಗರ  ಪೋಲೀಸ್   ಠಾಣೆ, ಆರ್.ಎಂ.ಸಿ. ಯಾರ್ಡ್ ಪೋಲೀಸ್ ಠಾಣೆ  ದೂ. ಸಂ-9480803233, 9480803248, , 08192272008ಗೆ ಕರೆಮಾಡಿ ಮಾಹಿತಿ ನೀಡಲು  ತಿಳಿಸಲಾಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!