ಚನ್ನಗಿರಿಯ ಸೋಮಶೆಟ್ಟಿಹಳ್ಳಿ-ಸಿದ್ದಾಪುರ ರಸ್ತೆಗೆ ಇಂದಿನಿ0ದ ಪ್ಯಾಚ್‌ವರ್ಕ್!

ದಾವಣಗೆರೆ : ರಸ್ತೆ ಕಾಮಗಾರಿ ಕೈಗೊಂಡ ನಂತರ 15 ದಿನಗಳ ಕಾಲ ಬಾಳಿಕೆ ಬರಲಿಲ್ಲವೆಂಬ ಆರೋಪ ಹೊತ್ತಿದ್ದ ಚನ್ನಗಿರಿ ತಾಲೂಕಿನ ಸೋಮಶೆಟ್ಟಿಹಳ್ಳಿ-ಸಿದ್ದಾಪುರ ಗ್ರಾಮದ ರಸ್ತೆಗೆ ಇಂದು ಕೆ.ಆರ್.ಐ.ಡಿ.ಎಲ್. ನಿಂದ ಪ್ಯಾಚ್ ವರ್ಕ್ ಕೈಗೊಳ್ಳಲಾಗಿದೆ.

ಕೆ.ಆರ್.ಐ.ಡಿ.ಎಲ್ ನಿಂದ ರಸ್ತೆ ಕಾಮಗಾರಿ ಕೈಗೊಂಡು ಪೂರ್ಣಗೊಳಿಸಿ 15 ದಿನಗಳ ಕಾಲ ಬಾಳಿಕೆ ಬರಲಿಲ್ಲವೆಂಬ ಆರೋಪ ಹೊತ್ತಿದ್ದ ಈ ರಸ್ತೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಷ್ಟೇಅಲ್ಲದೆ ಗರುಡವಾಯ್ಸ್ ಕೂಡ ಸುದ್ದಿ ಬಿತ್ತರಿಸಿತ್ತು. ಹಣಕ್ಕಾಗಿ ಕಳಪೆ ಕಾಮಗಾರಿ ಕೈಗೊಳ್ಳಲಾಗಿದೆ. ಇದನ್ನು ಸರಿಪಡಿಸಬೇಕು ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತ್ತು.

ಇದೀಗ ಈ ರಸ್ತೆ ನಿರ್ಮಾಣಕ್ಕೆ ಕೆ.ಆರ್.ಐ.ಡಿ.ಎಲ್. ಮುಂದಾಗಿದ್ದು, ಇಂದು ಜೆಸಿಬಿ ಮೂಲಕ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ. ಈ ಹಿಂದೆ ರಸ್ತೆ ಕಾಮಗಾರಿಗೆ ಬಿಡುಗಡೆಯಾದ ಅನುದಾನದಲ್ಲೇ ಈ ರಸ್ತೆಗೆ ಪ್ಯಾಚ್ ವರ್ಕ್ ಕೈಗೊಳ್ಳಲಾಗುತ್ತಿದೆ. ಸದ್ಯಕ್ಕೆ ಪ್ಯಾಚ್ ವರ್ಕ್ ಮಾಡಿ, ಜಲ್ಲಿ, ಮಣ್ಣುಗಳಿಂದ ರಸ್ತೆ ಹೈಟ್ ಮಾಡಲಾಗುತ್ತದೆ. ಈ ರಸ್ತೆಯನ್ನು ಡಾಂಬರೀಕರಣ ಮಾಡಿ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಡುವುದಾಗಿ ಹೊರಗುತ್ತಿಗೆ ಇಂಜಿನಿಯರ್ ಮಂಜುನಾಥ್ ಗರುಡವಾಯ್ಸ್ ಗೆ ಮಾಹಿತಿ ನೀಡಿದರು.

 

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!