“ಪೊಲೀಸ್ ಇಲಾಖಾ ವಿಚಾರಣೆಯ ಕಿರುಹೊತ್ತಿಗೆ” ಪುಸ್ತಕಕ್ಕೆ ಪೊಲೀಸ್ ಮಹಾನಿರ್ದೇಶಕರಿಂದ ಪ್ರಶಂಸೆ!
ದಾವಣಗೆರೆ: ಪೊಲೀಸ್ ಇಲಾಖೆ ವಿಚಾರಣೆ ಕುರಿತಾಗಿ ಮಂಜುನಾಥ ಎ ಲಿಂಗಾರೆಡ್ಡಿಯವರು “ ಪೊಲೀಸ್ ಇಲಾಖಾ ವಿಚಾರಣೆಯ ಕಿರುಹೊತ್ತಿಗೆ” ಎಂಬ ಹೆಸರಿನಲ್ಲಿ ಪುಸ್ತಕವೊಂದನ್ನು ಬರೆದಿದ್ದು, ಪೊಲೀಸ್ ಮಹಾ ನಿರ್ದೇಶಕರು ಕಿರುಹೊತ್ತಿಗೆ ಹಾಗೂ ಮಂಜುನಾಥ ಎ ಲಿಂಗಾರೆಡ್ಡಿ ಅವರ ಕುರಿತು ಪ್ರಶಂಸೆ ವ್ಯಕ್ತಪಡಿಸಿ ಪ್ರಶಂಸನಾ ಪತ್ರ ಬರೆದಿದ್ದಾರೆ.
ಪೊಲೀಸ್ ಇಲಾಖೆಯು ತುರ್ತು, ಅಗತ್ಯ ಹಾಗೂ ನಿರಂತರ ಸೇವೆಯಾಗಿರುತ್ತದೆ. ಈ ಇಲಾಖೆಯಲ್ಲಿ ಕರ್ತವ್ಯದೊಂದಿಗೆ ಅಲ್ಪ ಸಮಯವನ್ನು ಉಪಯೋಗಿಸಿಕೊಂಡು, ತಮ್ಮಲ್ಲಿರುವ ಜ್ಞಾನವನ್ನು ಕಿರುಹೊತ್ತಿಗೆ ರೂಪದಲ್ಲಿ ಹೊರಡಿಸಿರುವುದು ಶ್ಲಾಘನೀಯವೇ ಸರಿ ಎಂದಿದ್ದಾರೆ ಪೊಲೀಸ್ ಮಹಾನಿರ್ದೇಶಕ ಡಾ. ಪಿ. ರವೀಂದ್ರನಾಥ್, ಐಪಿಎಸ್.
ತಮ್ಮ ಕರ್ತವ್ಯ ನಿಷ್ಠೆ, ಕಲಿಕೆಯ ಹವ್ಯಾಸ ಹಾಗೂ ನೈಪುಣ್ಯತೆಯನ್ನು ಈ ಕಿರು ಹೊತ್ತಿಗೆಯ ಮೂಲಕ ಪ್ರದರ್ಶಿಸಿದ್ದು, ಪೊಲೀಸ್ ಇಲಾಖೆಯ ಅಧಿಕಾರಿ/ಸಿಬ್ಬಂದಿ ಹಾಗೂ ಲಿಪಿಕ ವರ್ಗದವರಿಗೂ ಉಪಯುಕ್ತವಾಗುವ ಕಾರಣ ನಿಮ್ಮ ಕಾರ್ಯಕ್ಷಮತೆಯನ್ನು ಮೆಚ್ಚಿ ಪ್ರಶಂಸನಾ ಪತ್ರವನ್ನು ನೀಡಲಾಗಿದೆ ಎಂದಿದ್ದಾರೆ.
ಮ0ಜುನಾಥ ಎ ಲಿಂಗಾರೆಡ್ಡಿ ಇವರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಐಮಂಗಲದ ಪೊಲೀಸ್ ತರಬೇತಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇವರ ಈ ಕಿರುಹೊತ್ತಿಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ
garudavoice21@gmail.com 9740365719