ಬಡ ಕೂಲಿ ಕಾರ್ಮಿಕರಿಗೆ ದಾವಣಗೆರೆ ಯುವ ಕಾಂಗ್ರೆಸ್ ಧನಸಹಾಯ
![Rahul_Gandhi_birthday_youth_congress_cash_help_labourers[1]](https://garudavoice.com/wp-content/uploads/2021/06/Rahul_Gandhi_birthday_youth_congress_cash_help_labourers1.jpg)
ದಾವಣಗೆರೆ.: ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರು,ಸಂಸದರಾದ ರಾಹುಲ್ ಗಾಂಧಿ ಅವರ ಜನ್ಮದಿನದ ಪ್ರಯುಕ್ತವಾಗಿ ನ್ಯಾಯ ಎಂಬ ಘೋಷಣೆಯೊಂದಿಗೆ ಒಂದು ದಿನದ ಕೂಲಿಯ ಹಣವನ್ನ ಕೂಲಿ ಕಾರ್ಮಿಕರಿಗೆ ವಿತರಣೆ ಮಾಡಲಾಯಿತು.
ನಗರದ ಪೂಜಾ ಹೋಟೆಲ್ ಹಿಂಭಾಗದಲ್ಲಿ ವಾಸಿಸುತ್ತಿರುವ ಕೂಲಿ ಕಾರ್ಮಿಕರಿಗೆ ಧನ ಸಹಾಯ ನೀಡುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಭಾರತೀಯುವ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ವಕ್ತಾರ ಮೈನುದ್ದೀನ್ ಹೆಚ್ ಜೆ. ಚಾಲನೆ ನೀಡಿದರು.
ಈ ವೇಳೆ ಜಿಲ್ಲಾ ಉಪಾಧ್ಯಕ್ಷ ಸಾಗರ್.ಎಲ್.ಹೆಚ್, ಮಹಮ್ಮದ್ ಸಾದಿಕ್ ಸದ್ದಾಂ,ಮಹಮ್ಮದ್ ವಾಜಿದ್, ಸೈಯದ್ ಇರ್ಫಾನ್ ,ಮಹಮ್ಮದ್ ರಫೀಕ್ ಇತರರಿದ್ದರು.