ಜೂನ್ ತಿಂಗಳ ಪಡಿತರ ಆಹಾರಧಾನ್ಯ ಕಳಪೆ ತಹಶೀಲ್ದಾರ್ ಗೆ ಭಾರತ ಕಮ್ಯುನಿಸ್ಟ್ ಪಕ್ಷದಿಂದ ದೂರು

ದಾವಣಗೆರೆ: ಪಡಿತರ ಚೀಟಿದಾರರಿಗೆ ಜೂನ್ ತಿಂಗಳಲ್ಲಿ ವಿತರಿಸಿರುವ ಕಳಪೆ ಆಹಾರಧಾನ್ಯ ವಿತರಣೆಯ ವಿರುದ್ಧ ತಹಶೀಲ್ದಾರ್ ಗೆ ಭಾರತ ಕಮ್ಯುನಿಸ್ಟ್ ಪಕ್ಷದ ವತಿಯಿಂದ ದೂರು ಸಲ್ಲಿಸಲಾಗಿದೆ.

ಮಹಾನಗರ ಪಾಲಿಕೆ ವ್ಯಾಪ್ತಿಯ ಆವರಗೆರೆ ನ್ಯಾಯಬೆಲೆ ಅಂಗಡಿ ಯೊಂದರಲ್ಲಿ ಪಡಿತರ ಚೀಟಿದಾರರಿಗೆ ವಿತರಿಸುತ್ತಿದ್ದ ಕಳಪೆ ಅಕ್ಕಿ ಮತ್ತು ಕಳಪೆ ರಾಗಿಯ ಸ್ಯಾಂಪಲ್ ನೊಂದಿಗೆ ದಾವಣಗೆರೆ ತಹಸಿಲ್ದಾರ್ ಅವರ ಕಚೇರಿಗೆ ತೆರಳಿ, ಕಳಪೆ ಆಹಾರ ಧಾನ್ಯವಾದ ಕಳಪೆ ಅಕ್ಕಿಯೊಂದಿಗೆ ಕಸಕಡ್ಡಿ ಇರುವುದನ್ನು ಮತ್ತು ರಾಗಿಯಲ್ಲಿ ತೌಡು ಮತ್ತು ಮಣ್ಣು ಇರುವ ಸ್ಯಾಂಪಲ್ ನೊಂದಿಗೆ ಅಧಿಕಾರಿಗಳಿಗೆ ಇದನ್ನು ಸರಿಪಡಿಸಲು ಮನವಿ ಸಲ್ಲಿಸಲಾಯಿತು ಎಂದು ಸಿ ಪಿ ಐ ಜಿಲ್ಲಾ ಕಾರ್ಯದರ್ಶಿ ಕಾಂ. ಆವರಗೆರೆ ಚಂದ್ರು ತಿಳಿಸಿದ್ದಾರೆ.

ಪಡಿತರ ಚೀಟಿದಾರರಿಗೆ ಆಹಾರಧಾನ್ಯ ಪೂರೈಸುವ ಟೆಂಡರ್ ದಾರರು ಇಲಾಖೆಗೆ ಒಳ್ಳೆಯ ಆಹಾರಧಾನ್ಯದ ಸ್ಯಾಂಪಲ್ ಕೊಡುತ್ತಾರೆ. ನಂತರ ಆಹಾರ ಧಾನ್ಯ ಪೂರೈಕೆ ಸಂದರ್ಭದಲ್ಲಿ ನ್ಯಾಯಬೆಲೆ ಅಂಗಡಿಗಳಿಗೆ ಪೂರೈಸುವ ಆಹಾರ ಧಾನ್ಯದಲ್ಲಿ ಬಹುತೇಕ ಅರ್ಧದಷ್ಟು ಕಸಕಡ್ಡಿಗಳ ಮಿಶ್ರಣ ಇರುತ್ತದೆ, ಇದು ಜಿಲ್ಲೆಯ ಬಹುತೇಕ ನ್ಯಾಯಬೆಲೆ ಅಂಗಡಿಗಳಿಗೆ ಪೂರೈಕೆ ಮಾಡುತ್ತಾ ಬಂದಿರುತ್ತಾರೆ  ಮುಂದಿನ ದಿನಗಳಲ್ಲಿ ಉತ್ತಮ ಆಹಾರ ಧಾನ್ಯಗಳನ್ನು ನೀಡುವಂತೆ ಆಗ್ರಹಿಸಲಾಯಿತು.

ಮುಂದಿನ ದಿನಗಳಲ್ಲಿ ಇದು ಪುನರಾವರ್ತನೆಯಾದರೆ ತಹಶೀಲ್ದಾರ್ ಕಚೇರಿ ಮುಂದೆ, ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಪ್ರತಿಭಟನೆ ನಡೆಸಲಾಗುವುದು ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕಾಂ. ಆವರಗೆರೆ ಚಂದ್ರು ಮತ್ತು ಪಕ್ಷದ ಮುಖಂಡ ಕಾಂ. ನರೇಗಾ ರಂಗನಾಥ್ ಎಚ್ಚರಿಕೆ‌ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!