Pothole; ಎಸ್ ಎಸ್ ಆಸ್ಪತ್ರೆಗೆ ಹೋಗುವ ರಸ್ತೆಯಲ್ಲಿ ಗುಂಡಿ.! ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸುವರ್ಣ ಕರ್ನಾಟಕ ವೇದಿಕೆ ಆಕ್ರೋಶ

pothole near ss hospital road

ದಾವಣಗೆರೆ:(POTHOLE) ದಾವಣಗೆರೆ ನಗರ ಸರಸ್ವತಿ ನಗರದ ಎಸ್ ಎಸ್ ಹಾಸ್ಪಿಟಲ್ ರಸ್ತೆ ಹೋಗುವ ಮಾರ್ಗ ಮಧ್ಯದಲ್ಲಿ ಚರಂಡಿ ಗುಂಡಿ ಬಿದ್ದಿದ್ದು, ಕಳೆದ 20 ದಿನಗಳಿಂದ ಈ ಅವ್ಯವಸ್ಥೆ ಕಂಡು ಬಂದರು ಅಲ್ಲಿಯ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಈ ಕಡೆ ಗಮನಹರಿಸಿರುವುದಿಲ್ಲ.

ದಿನನಿತ್ಯ ನೂರಾರು ವಾಹನಗಳು ಸಂಚರಿಸಲು ಮತ್ತು ಶಾಲಾ ಮಕ್ಕಳು ಸಾರ್ವಜನಿಕರು ಓಡಾಡಲು ತೊಂದರೆ ಆಗುತ್ತಿದ್ದು, ಇದರ ಬಗ್ಗೆ ಆ ಭಾಗದ ಜನಪ್ರತಿನಿಧಿಗಳ ಗಮನಕ್ಕೆ ತಂದರು ನಿರ್ಲಕ್ಷ್ಯ ವಹಿಸಿರುತ್ತಾರೆ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಎಚ್ಚೆತ್ತು ಪರಿಶೀಲಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕೆಂದು ಸುವರ್ಣ ಕರ್ನಾಟಕ ವೇದಿಕೆಯಿಂದ ಪ್ರತಿಭಟನೆ ಮಾಡಿ, ಸಾರ್ವಜನಿಕರ ಪರವಾಗಿ ಒತ್ತಾಯಿಸಲಾಯಿತು.

ಈ ಪ್ರತಿಭಟನೆಯಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಸಂತೋಷ್ ಕುಮಾರ್. ಆರ್., ರಾಜ್ಯ ಸಂಚಾಲಕರಾದ ಶಾಂತಕುಮಾರ್ ದೊಡ್ಡಮನಿ, ರಾಜ್ಯ ಉಪಾಧ್ಯಕ್ಷರು ಶಿವಕುಮಾರ್ ಸುಂಕಾಪುರ್, ಜಿಲ್ಲಾ ಉಪಾಧ್ಯಕ್ಷರಾದ ರವಿಕುಮಾರ್, ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!