ಅಭಿಮಾನಿ ಮದುವೆಗೆ ಬಂದ ಡಾ.ಪ್ರಭಾ ಮಲ್ಲಿಕಾರ್ಜುನ; ಆಕೆ ಪ್ರಭಾ ಅವರ ಕಟ್ಟಾ ಅಭಿಮಾನಿ
ದಾವಣಗೆರೆ; ಅಭಿಮಾನಿ ಮದುವೆಗೆ ಖುಷಿಯಿಂದ ಬಂದ್ರು ಪ್ರಭಾ ಮೇಡಂ,ಆ ಯುವತಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಅಭಿಮಾನಿ.
ಇಂದು ಆಕೆಯ ಮದುವೆ, ಡಾ.ಪ್ರಬಾ ಅವರು ಬಂದಾಗ ಅವರಿಗಾದ ಖುಷಿ ಅಷ್ಟಿಷ್ಟಲ್ಲ.
ಅಂದು ಎಂದಿನಂತೆ ತಮ್ಮ ಮನೆಯ ಮುಂಭಾಗ ಸಾರ್ವಜನಿಕರ ಸಮಸ್ಯೆ ಆಲಿಸುತ್ತಿದ್ದ ಡಾ. ಪ್ರಭಾ ಮಲ್ಲಿಕಾರ್ಜುನ್, ನೂರಾರು ಸಾರ್ವಜನಿಕರ ನಡುವೆ ಒಬ್ಬ ಯುವಕ ಮದುವೆ ಆಮಂತ್ರಣ ಪತ್ರಿಕೆಯನ್ನು ಹಿಡಿದುಕೊಂಡು ಮುಂದೆ ಬಂದ. ಅತನೇ ಆ ಯುವತಿಯ ಅಣ್ಣ.
ಆತ ಪಕ್ಷದ ಕಾರ್ಯಕರ್ತ ಅಲ್ಲ, ಪಕ್ಷದ ಮುಖಂಡರ ಕುಟುಂಬವಲ್ಲ, ಪಕ್ಷದ ಮುಖಂಡರ ಜೊತೆ ಬಂದಿರಲಿಲ್ಲ. ಆತ ಡಾ. ಪ್ರಭಾ ಮಲ್ಲಿಕಾರ್ಜುನ್ ರವರ ಕೈಗೆ ಮದುವೆ ಆಮಂತ್ರಣ ಪತ್ರಿಕೆಯನ್ನು ಕೊಟ್ಟು ತಂಗಿಯ ಮದುವೆಗೆ ಅಮಂತ್ರಿಸಿದ ರೀತಿ ಮಾತ್ರ ವಿಶೇಷವಾಗಿತ್ತು.
ನನ್ನ ತಂಗಿ ನಿಮ್ಮ ದೊಡ್ಡ ಅಭಿಮಾನಿ, ಅವಳ ಮದುವೆಗೆ ನಿಮ್ಮನ್ನು ಕರೆಸಬೇಕು ಎನ್ನುವುದು ಅವಳ ಆಸೆ, ತಾವು ದಯವಿಟ್ಟು ಅವಳ ಮದುವೆಗೆ ಬರಬೇಕು ಎಂದು ತಂಗಿಯ ಮದುವೆಗೆ ಕರೆದ ಅಣ್ಣ
ಇಂದು ಅ ಅಣ್ಣನ ತಂಗಿಯ ಮದುವೆ… ಮದುವೆ ದಿನ ನೆನಪಿಟ್ಟುಕೊಂಡು ಮದುವೆಗೆ ಹೋಗಿ ಡಾ.ಪ್ರಭಾ ಅವರು ಶುಭ ಹಾರೈಸಿದರು. ವಧುವಿನ ಸಂತಸಕ್ಕೆ ಪಾರವೇ ಇರಲಿಲ್ಲ.