ಹಾವೇರಿ ನಗರಸಭೆಯಲ್ಲಿ 2022-23 ನೇ ಸಾಲಿನ ಬಜೆಟ್ ಪೂರ್ವ ಭಾವಿ ಸಭೆ
ಹಾವೇರಿ : ನಗರಸಭೆ ಕಾರ್ಯಾಲಯದಲ್ಲಿ ನಗರಸಭೆಯ 2022-23 ನೇ ಸಾಲಿನ ಬಜೆಟನ್ ಪೂರ್ವ ಭಾವಿ ಸಭೆ ಜರುಗಿತು.
ಆಡಳಿತ ಮಂಡಳಿಯವರು, ಮತ್ತು ವಿವಿಧ ಸರ್ಕಾರೇತರ ಸಂಸ್ಥೆಗಳು, ಸಹಕಾರಿ ಪತ್ತಿನ ಬ್ಯಾಂಕುಗಳು, ಸ್ವಸಹಾಯ ಸಂಘದ ಸದಸ್ಯರು ಹಲಾವರು ವಿಷಯದ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.
2022-23 ನೇ ಸಾಲಿನ ಒಟ್ಟು ಆಯ-ವ್ಯಯದ ಸಂಕ್ಷಿಪ್ತ ವಿವರಣೆ ಬಗ್ಗೆ,ಆಸ್ತಿ ತೆರಿಗೆ,ನೀರಿನ ತೆರಿಗೆ,
ಮಳಿಗೆ ಬಾಡಿಗೆ,ಅಭಿವೃದ್ಧಿ ಕರದಿಂದ,ಸಂತೆ ಶುಲ್ಕದಿಂದ,ಲೈಸನ್ಸ್ ಫೀ,ವೇತನ ಅನುದಾನ,ವಿದ್ಯುತ್ ಶಕ್ತಿ ಅನುದಾನ, ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ, ಮಾನ್ಯ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ, ನಲ್ಮ ಯೋಜನೆ,ಬರ ಪರಿಹಾರ/ ಅತಿವೃಷ್ಟಿ ಅನುದಾನ,ಸ್ವಚ್ಛ ಭಾರತ ಮಿಷನ್ ಯೋಜನೆ ಅನುದಾನ,15 ನೇ ಹಣಕಾಸು ಯೋಜನೆ ಅನುದಾನ,ಎಸ್ ಎಫ್ ಸಿ ಅನುದಾನ ರಾಜ್ಯ ಹಣಕಾಸು ಆಯೋಗದ ಅನುದಾನ, ಅಸಾಮಾನ್ಯ ಆದಾಯ,ಅಮಾನತ ಖಾತೆ ಮತ್ತು ಇತರೆ ಆದಾಯದ ಬಗ್ಗೆ ಚರ್ಚಿಸಲಾಯಿತು.ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಸಂಜೀವಕುಮಾರ ನೀರಲಗಿ ಅವರು ನಗರ ಸಭೆ.
ಉಪಾಧ್ಯಕ್ಷರಾದ ಶ್ರೀಮತಿ ಜಾಹೀದಾಬಾನು ಅಬ್ದುಲರಜಾಕ ಜಮಾದಾರ ಅವರು ನಗರಸಭೆ ಪೌರಾಯುಕ್ತರಾದ ಪಿ ಎಂ ಚಲವಾದಿ ಹಾಗೂ ನಗರಸಭೆ ಸದಸ್ಯರು ಮತ್ತು ನಗರ ಸಭೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.