50 ಮಕ್ಕಳು ಸೇರಿದಂತೆ ದಾವಣಗೆರೆ ಜಿಲ್ಲೆಯಲ್ಲಿ ಇಂದು 257 ಜನರಿಗೆ ಸೋಂಕು.! 57 ಸೊಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ.! ಓರ್ವ ವೃದ್ದೆ ಸಾವು

ದಾವಣಗೆರೆ: ಮಂಗಳವಾರ ಜಿಲ್ಲೆಯಲ್ಲಿ 257 ಜನರಿಗೆ ಕರೋನಾ ದೃಢಪಟ್ಟಿದ್ದು, 126 ಜನರು ಗುಣಮುಖರಾಗಿದ್ದಾರೆ. ದಾವಣಗೆರೆ ತಾಲ್ಲೂಕಿನಲ್ಲಿ ಅತಿ ಹೆಚ್ಚು 146 ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ 0-18 ರ ವಯೋಮಾನದ 50 ಶಾಲಾ ಕಾಲೇಜು ಮಕ್ಕಳು ಕೊವಿಡ್ ಪ್ರಕರಣ‌ ದೃಢಪಟ್ಟಿದೆ.

ಇನ್ನೂ ಚನ್ನಗಿರಿ‌ 29 ಜಗಳೂರು 20 ಹರಿಹರ 40 ಹೊನ್ನಾಳಿ 22, ಹೊರ ಜಿಲ್ಲೆ 0 ಸೋಂಕು ದೃಢಗೊಂಡಿದ್ದು, ಒಟ್ಟು 257 ಜನರಿಗೆ ಸೋಂಕು ತಗುಲಿರುವುದು ವರದಿಯಾಗಿದೆ‌.

ಶಾಲಾ ಕಾಲೇಜು ಮಕ್ಕಳು 18-01-2022 ರವರೆಗೆ:
18 ವರ್ಷದ ಒಳಗಿನ ಶಾಲಾ/ಕಾಲೇಜು ಮಕ್ಕಳ ಸಂಖ್ಯೆ : 281 (ಈ ದಿನ – 50)

0-5 ಮಕ್ಕಳ ಸಂಖ್ಯೆ : 7 (ಈ ದಿನ 1, ಹೊರಜಿಲ್ಲೆಯ ಮಗು)

ಈ ದಿನದವರೆಗೆ ಆಸ್ಪತ್ರೆಯಲ್ಲಿ = 57
ಸರ್ಕಾರಿ ಆಸ್ಪತ್ರೆಗಳಲ್ಲಿ = 39
ಖಾಸಗಿ ಆಸ್ಪತ್ರೆಗಳಲ್ಲಿ = 18
ಮನೆಯಲ್ಲಿ ಪ್ರತ್ಯೇಕತೆ = 979 ಸೊಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!