ಪಿಯುಸಿ, ಪದವಿ ಪ್ರವೇಶಕ್ಕೆ ಶುಲ್ಕವೇ ಇಲ್ಲ.. ವಿದ್ಯಾರ್ಥಿಗಳಿಗೆಂದೇ ‘ಮಕ್ಕಳ ಬಸ್’.. ಇದು ಬಜೆಟ್ ಕೊಡುಗೆ..
ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿಂದು ಬಜೆಟ್ ಮಂಡಿಸಿದ್ದಾರೆ. ಈ ವಿಧಾನಸಭಾ ಅವಧಿಯ ಅಂತಿಮ ಬಜೆಟ್ ಇದಾಗಿದ್ದು, ಚುನಾವಣೆಗೆ ತಯಾರಿ ನಡೆದಿರುವಾಗಲೇ ಮಂಡನೆಯಾಗಿರುವ ಈ ಬಜೆಟ್ನಲ್ಲಿ ಭರವಸೆಯ ಮಹಾಮಳೆಯನ್ನೇ ಸರ್ಕಾರ ಹರಿಸಿದೆ.
ಈ ಬಾರಿಯ ಬಜೆಟ್ನಲ್ಲಿ ವಿದ್ಯಾರ್ಥಿ ಸಮುದಾಯಕ್ಕೆ ಕೊಡುಗೆ ಪ್ರಕಟಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿಯವರು, ವಿದ್ಯಾರ್ಥಿಗಳು ಕಾಲೇಜು ಪ್ರವೇಶಕ್ಕೆ ಶುಲ್ಕ ವಿನಾಯಿತಿಯ ಹೊಸ ಯೋಜನೆಯನ್ನು ಘೋಷಿಸದ್ದಾರೆ. ‘ಮುಖ್ಯಮಂತ್ರಿ ವಿದ್ಯಾಶಕ್ತಿ’ ಯೋಜನೆ ಇದಾಗಿದೆ.
ಎಲ್ಲಾ ಫ್ರೌಢ ಶಾಲಾ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಹೊಂದಲು ಅವಕಾಶ ಕಲ್ಪಿಸುವ ಸಂಬಂಧ ‘ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆ’ ಪ್ರಾರಂಭಿಸಲಾಗುತ್ತಿದೆ ಎಂದು ಸಿಎಂ ಅವರು ಬಜೆಟ್ನಲ್ಲಿ ಹೇಳಿದ್ದಾರೆ.
ಸರ್ಕಾರಿ ಪದವಿ ಪೂರ್ವ, ಸರ್ಕಾರಿ ಪದವಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಈ ಯೋಜನೆಯಿಂದಾಗಿ ಪೂರ್ಣ ಶುಲ್ಕ ವಿನಾಯತಿ ಸಿಗಲಿದೆ. ಬರೋಬ್ವರಿ 8 ಲಕ್ಷ ವಿದ್ಯಾರ್ಥಿಗಳುಲಿಗೆ ಈ ಯೋಜನೆ ಅನುಕೂಲವಾಗಲಿದೆ ಎಂಬುದು ಸಿಎಂ ಬೊಮ್ಮಾಯಿ ಅವರ ಲೆಕ್ಕಾಚಾರ.
ಮಕ್ಕಳ ಬಸ್ಸು ಹೊಸ ಯೋಜನೆ ಆರಂಭ
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ‘ಮಕ್ಕಳ ಬಸ್ಸು’ ಎಂಬ ಹೊಸ ಯೋಜನೆಯನ್ನು ಸಿಎಂ ಅವರು ಈ ಬಾರಿಯ ಬಜೆಟ್ನಲ್ಲಿ ಘೋಷಿಸಿದ್ದಾರೆ. ಸರ್ಕಾರಿ ಸಾರಿಗೆ ನಿಗಮಗಳ ಮೂಲಕ 100 ಕೋಟಿ ರೂಪಾಯಿ ವೆಚ್ಚದಲ್ಲಿ 1000 ಹೊಸ ಬಸ್ಗಳ ಕಾರ್ಯಾಚರಣೆ ನಡೆಯಲಿದೆ. ಈಗಾಗಲೇ 19 ಲಕ್ಷ ವಿದ್ಯಾರ್ಥಿಗಳು ಈಗಾಗಾಲೇ ಈ ರೀತಿಯ ವ್ಯವಸ್ಥೆಯನ್ನು ಅವಲಂಭಿಸಿದ್ದರೆ, ಹೆಚ್ಚುವರಿಯಾಗಿ 2 ಲಕ್ಷ ಹೊಸ ವಿದ್ಯಾರ್ಥಿಗಳಿಗೆ ಈ ‘ಮಕ್ಕಳ ಬಸ್’ ಯೋಜನೆ ಅನುಕೂಲವಾಗಲಿದೆ.