ರಾಜ್ಯ ಬಜೆಟ್‌ನಲ್ಲಿ ಅನ್ನದಾತರಿಗೆ ಬಂಪರ್.. 5 ಲಕ್ಷ ರೂ.ವರೆಗೂ ಬಡ್ಡಿರಹಿತ ಕೃಷಿ ಸಾಲ ಘೋಷಣೆ

ಅನ್ನದಾತರಿಗೆ ಬಂಪರ್.. 5 ಲಕ್ಷ ರೂ.ವರೆಗೂ ಬಡ್ಡಿರಹಿತ ಕೃಷಿ ಸಾಲ

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿಂದು ಬಜೆಟ್ ಮಂಡಿಸಿದ್ದಾರೆ. ಈ ವಿಧಾನಸಭಾ ಅವಧಿಯ ಅಂತಿಮ ಬಜೆಟ್ ಇದಾಗಿದ್ದು, ಚುನಾವಣೆಗೆ ತಯಾರಿ ನಡೆದಿರುವಾಗಲೇ ಮಂಡನೆಯಾಗಿರುವ ಈ ಬಜೆಟ್‌ನಲ್ಲಿ ಭರವಸೆಯ ಮಹಾಮಳೆಯನ್ನೇ ಬಿಜೆಪಿ ಸರ್ಕಾರ ಹರಿಸಿದೆ.
ಈ ಬಾರಿಯ ಬಜೆಟ್‌ನಲ್ಲಿ ಅನ್ನದಾತರಿಗಾಗಿ ಕೊಡುಗೆ ಪ್ರಕಟಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿಯವರು ಕೃಷಿಕರಿಗೆ ಕೊಡುತ್ತಿದ್ದ ಬಡ್ಡಿ ರಹಿತ ಸಾಲ‌ 3 ರಿಂದ 5 ಲಕ್ಷಕ್ಕೆ ಏರಿಕೆ ಮಾಡಿರುವುದಾಗಿ ಘೋಷಿಸಿದ್ದಾರೆ. ಅನ್ನದಾತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷದವರೆಗೂ ಸಾಲ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!