ರಾಜ್ಯ ಸರ್ಕಾರ ಕೋವಿಡ್-19 ನಿಯಂತ್ರಣ ಮಾಡುವಲ್ಲಿ ವಿಫಲ,ರಾಷ್ಟಪತಿ ಆಳ್ವಿಕೆಗೆ ಮನವಿ – ವಕೀಲ ಅನೀಸ್ ಪಾಷ

ದಾವಣಗೆರೆ:ರಾಜ್ಯದಲ್ಲಿ ಈ ವರ್ಷ ಕೋವಿಡ್-19 ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾವು-ನೋವು ಸಂಭವಿಸುತ್ತಿದ್ದು, ಸರ್ಕಾರವು ಇದನ್ನು ನಿಯಂತ್ರಣ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇಂತಹ ವಿಷಮಸ್ಥಿತಿಯನ್ನು ನಿಯಂತ್ರಿಸಲು ಸರ್ಕಾರಕ್ಕೆ ಆಗುತ್ತಿಲ್ಲ. ಹಾಗಾಗಿ ಸರ್ಕಾರವನ್ನು ರದ್ದುಗೊಳಿಸಿ ರಾಷ್ಟçಪತಿ ಆಳ್ವಿಕೆಯನ್ನು ಹೇರಬೇಕೆಂದು ವಕೀಲರಾದ ಅನೀಸ್ ಪಾಷರವರು ಮಾನ್ಯ ರಾಜ್ಯಪಾಲರಿಗೆ ಕಳಕಳಿಯ ಮನವಿ ಮಾಡಿಕೊಂಡಿದ್ದಾರೆ.

ಆಮ್ಲಜನಕ ಕೊರತೆಯಿಂದ ಮೊನ್ನೆ ಚಾಮರಾಜನಗರದಲ್ಲಿ 24 ಮತ್ತು ಕಲ್ಬುರ್ಗಿಯಲ್ಲಿ 2 ನಿನ್ನೆ ರಾಜ್ಯದಲ್ಲಿ 9 ಜನ ಕೋವಿಡ್-19 ರೋಗಿಗಳು ಸತ್ತಿದ್ದು, ಅವರ ಸಾವಿಗೆ ರಾಜ್ಯ ಸರ್ಕಾರವು ನೇರಹೊಣೆಯಾಗಿದೆ. ರಾಜ್ಯದ ಜನತೆಯ ಹಿತವನ್ನು ಕಾಪಾಡಬೇಕಾಗಿದ್ದ ರಾಜ್ಯ ಸರ್ಕಾರವು ಚಿಕಿತ್ಸೆಗೆ ಬಂದಿದ್ದ ಕೋವಿಡ್-19 ರೋಗಿಗಳಿಗೆ ಆಮ್ಲಜನಕವನ್ನು ಒದಗಿಸದೆ ಕತ್ತುಹಿಸುಕಿ ಉಸಿರುಗಟ್ಟಿಸಿ ಸಾಯಿಸಿದಂತಾಗಿದೆ. ಇವರ ಸಾವಿಗೆ ರಾಜ್ಯ ಸರ್ಕಾರವು ನೇರಹೊಣೆಯಾಗಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರವು ಜನತೆಯ ಆರೋಗ್ಯದ ಕಡೆಗೆ ಹೆಚ್ಚು ಒತ್ತು ನೀಡಿ ಸಾವು-ನೋವು ಸಂಭವಿಸದAತೆ ಎಚ್ಚರವಹಿಸಬೇಕಾಗಿತ್ತು. ಈ ರೀತಿ ಸಾವು-ನೋವು ಸಂಭವಿಸಿರುವುದನ್ನು ಗಮನಿಸಿದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್-19 ಅನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಹಾಗಾಗಿ ಮುಖ್ಯ ಮಂತ್ರಿಗಳು ನೈತಿಕ ಹೊಣೆ ಹೊತ್ತು ತಕ್ಷಣ ರಾಜಿನಾಮೆಯನ್ನು ನೀಡಬೇಕು.

ಆಸ್ಪತ್ರೆಗಳಲ್ಲಿ ಬೆಡ್‌ಗಳಿಗಾಗಿ ಸರತಿ ಕಾಯಬೇಕು, ಕಾಯಿಲೆ ಉಲ್ಬಣವಾದರೆ ಆಮ್ಲಜನಕ್ಕಾಗಿ ಸರತಿಯಲ್ಲಿರಬೇಕು. ಚಿಕಿತ್ಸೆ ಫಲಕಾರಿಯಾಗದೆ ಸತ್ತರೆ ಅಂತ್ಯಕ್ರಿಯೆ ನೇರವೇರಿಸಲು ಕೂಡ 20 ಗಂಟೆಗಳಕಾಲ ಸರತಿಯಲ್ಲಿ ಕಾಯಬೇಕು. ಕೆಲವು ಚಿತಾಗಾರದಲ್ಲಿ ಹೌಸ್‌ಪುಲ್ ಎಂದು ಫಲಕಗಳನ್ನು ಹಾಕಿರುವುದು ನೋಡಿದೆವು ಇಂತಹ ಮನ ಕುಲಕುವ ವಿಷಯಗಳಿಂದ ಜನಸಾಮಾನ್ಯರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇದನ್ನು ಗಮನಿಸಿದರೆ ನಮ್ಮ ರಾಜ್ಯದ ಸಂವಿಧಾನ ಬದ್ಧ ಸಂಸ್ಥೆ  ಯಾಗಿರುವ ಸರ್ಕಾರ ಸಂವಿಧಾನ ಬದ್ಧವಾಗಿ ಕಾರ್ಯನಿರ್ವಹಿಸುವಲ್ಲಿ ವಿಫಲವಾಗಿದೆ.ರಾಜ್ಯ ಸರ್ಕಾರದ ನಿರ್ಲಕ್ಷತನದಿಂದ ಸಾವು ಸಂಭವಿಸಿದ್ದು, ತನ್ನ ತಪ್ಪಿಗೆ ರಾಜ್ಯ ಸರ್ಕಾರವು ಪರಿಹಾರವನ್ನು ನೀಡಲು ಬಾದ್ಯಸ್ತವಾಗಿದೆ. ಹಾಗಾಗಿ ಪ್ರತಿಯೊಬ್ಬ ಮೃತರ ಕುಟುಂಬಕ್ಕೆ ರೂ.25,00,000/- ಪರಿಹಾರವನ್ನು ಸರ್ಕಾರ ನೀಡಬೇಕೆಂದು ಒತ್ತಾಯಿಸಿದರು.

ಕೋವಿಡ್-19 ಬಂದಾಗಿನಿAದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದರ ಬಗ್ಗೆ ಸೂಕ್ತ ಸಂಶೋಧನೆ ನಡೆಸಿ ವಿಜ್ಞಾನಿಗಳು ನೀಡಿದ ಮಾರ್ಗದರ್ಶನದಂತೆ ಕ್ರಮ ತೆಗೆದುಕೊಳ್ಳಬೇಕಾಗಿತ್ತು. ಕಳೆದ ಮಾರ್ಚ್ ತಿಂಗಳಿನಲ್ಲಿ ಭಾರತ ದೇಶದ ಉನ್ನತ ಮಟ್ಟದ ವಿಜ್ಞಾನಿಗಳು ಕೇಂದ್ರ ಸರ್ಕಾರಕ್ಕೆ ಕೋವಿಡ್-19 ರ 2ನೇ ಅಲೆಯ ಬಗ್ಗೆ ಸೂಕ್ತ ಮಾಹಿತಿ ನೀಡಿ ಎಚ್ಚರಿಕೆ ನೀಡಿದರೂ ಕೂಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್-19 ನಿಯಂತ್ರಿಸುವ ಪ್ರಯತ್ನ ಮಾಡಲಿಲ್ಲ. ಕೊನೇಯಪಕ್ಷ ಈ ಕಾಯಿಲೆ ಹೆಚ್ಚಾದರೆ, ನಿಯಂತ್ರಿಸಲು ಯಾವ-ಯಾವ ನಿಯಮ ಪಾಲಿಸಬೇಕು ಎಂದು ಮುನ್ನೆಚರಿಕೆ ಕ್ರಮ ತೆಗೆದುಕೊಳ್ಳದೆ ಮೈಮರೆತು ನಿರ್ಲಕ್ಷತನವನ್ನು ತೋರಿಸಿದೆ. ಆಮ್ಲಜನಕ ಕೊರತೆಯಿಂದ ಕೇವಲ 3 ಜನ ಕೋವಿಡ್-19 ರೋಗಿಗಳು ಸತ್ತಿದ್ದಾರೆ ಉಳಿದವರು ಬೇರೆ-ಬೇರೆ ಕಾರಣಗಳಿಂದ ಸತ್ತಿದ್ದಾರೆಂದು ವೃತ್ತಿಯಿಂದ ಒಬ್ಬ ವೈದ್ಯರಾಗಿರುವ ಆರೋಗ್ಯ ಸಚಿವರು ಉಡಾಫೆ ಮಾತುಗಳನ್ನಾಡಿದ್ದಾರೆ. ಇದರಿಂದ ಇಡೀ ರಾಜ್ಯದ ಜನತೆಯು ಸರ್ಕಾರಕ್ಕೆ ಶಾಪ ಹಾಕುತ್ತಿದೆ. ಸರ್ಕಾರವು ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆಯನ್ನು ನೀಡಿ ರಾಜ್ಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಸಾವು-ನೋವುಗಳನ್ನು ತಡೆಹಿಡಿಯಬಹುದಾಗಿತ್ತು. ದಾವಣಗೆರೆಯ ಸಂಸದರಾದ ಜಿ.ಎಂ ಸಿದ್ದೇಶ್‌ರವರು ಕೂಡ ಹೇಳಿಕೆಯನ್ನು ನೀಡಿ ಸೊಂಕು ಹೆಚ್ಚಾಗಲು ಜನರೇ ಕಾರಣ ಎಂದು ತಮ್ಮ ತಪ್ಪುಗಳನ್ನು ಸಾಮಾನ್ಯ ಜನರ ಮೇಲೆ ಹೊತ್ತುಹಾಕುವ ಪ್ರಯತ್ನವನ್ನು ಮಾಡಿದ್ದಾರೆ. ಚುನಾವಣೆ ನಡೆಸಿ ಚನಾವಣಾ ಪ್ರಚಾರದಲ್ಲಿ ಭಾಗಿಯಾದ ಬಿ.ಜೆ.ಪಿ, ಕಾಂಗ್ರೆಸ್, ಜೆ.ಡಿ.ಎ.ಸ್ ಪಕ್ಷಗಳ ನಾಯಕರೇ ಕೋವಿಡ್-19 ಸೊಂಕು ಹರಡಿದ್ದಾರೆ. ಅವರಿಂದಲೇ ಜನ ಸಾಮಾನ್ಯರಿಗೆ ಬಂದಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯವೈಖರಿ ಬಗ್ಗೆ ಅಥವಾ ಆಮ್ಲಜನಕದ ಕೊರತೆ ಬಗ್ಗೆ ಅಥವಾ ತುರ್ತು ನೆರವು ಬೇಕಾಗಿದೆ ಎಂದು ಯಾರಾದರೂ ಪ್ರಶ್ನಿಸಿದರೆ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನುಗಳನ್ನು ಬಳಸಿ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಅವರ ಧ್ವನಿಯನ್ನು ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದೆ. ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯವು ಸರ್ಕಾರದ ಇಂತಹ ಧೋರಣೆಯನ್ನು ಖಂಡಿಸಿ ಬಹಳಷ್ಷು ತೀರ್ಪುಗಳನ್ನು ನೀಡಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನ್ಯಾಯಾಲಯಗಳ ತೀರ್ಪುಗಳನ್ನು ಸಹ ಗಾಳಿಗೆ ತೂರಿ ತನ್ನ ದಬ್ಬಾಳಿಕೆಯಲ್ಲಿ ಮೆರೆಯುತ್ತಿದ್ದಾರೆ. ಇದು ತೀವ್ರ ಆತಂಕಕಾರಿ ಬೆಳವಣಿಗೆಯಾಗಿದೆ. ರಾಜ್ಯ ಸರ್ಕಾರವು ರಾಜ್ಯದ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳನ್ನು ತಕ್ಷಣ ನಿಯಂತ್ರಣಕ್ಕೆ ತೆಗೆದುಕೊಂಡು ಈ ಸಮಸ್ಯೆಗೆ ಯಾವ-ಯಾವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬಹುದೆಂದು ಸಂಶೋಧನೆ ಮೂಲಕ ರೋಗಿಗಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡುವ ಪ್ರಯತ್ನ ಕೂಡ ಮಾಡಬಹುದಾಗಿದೆ. ಮನುಷ್ಯನ ಒಂದೊAದು ಜೀವ ತುಂಬಾ ಅಮೂಲ್ಯವಾಗಿದೆ. ಮನುಷ್ಯನನ್ನು ಕ್ರಿಮಿ ಕೀಟಗಳಂತೆ ಸಾಯಲು ಬಿಡಬೇಡಿ ಇದು ಸರ್ಕಾರದ ಸಂವಿಧಾನ ಬದ್ಧ ಮೂಲಭೂತ ಕರ್ತವ್ಯ ಕೂಡ ಆಗಿದೆ.

ಹಾಗಾಗಿ ಇಂತಹ ಒಂದು ತುರ್ತು ಪರಿಸ್ಥಿಯಲ್ಲಿ ಮಾನ್ಯ ರಾಜ್ಯಪಾಲರು ಈ ತಕ್ಷಣ ರಾಜ್ಯ ಸರ್ಕಾರದ ವಿರುದ್ಧ ಕ್ರಮ ತೆಗೆದುಕೊಂಡು ಸರ್ಕಾರವನ್ನು ರದ್ದುಗೊಳಿಸಿ ರಾಷ್ಟçಪತಿ ಆಳ್ವಿಕೆಯನ್ನು ಹೇರಿ ರಾಜ್ಯದ ಜನತೆಯ ಜೀವಗಳನ್ನು ಕಾಪಾಡಲು ಸಹಕಾರಿಯಾಗಬೇಕೆಂದು ಮಾನ್ಯ ರಾಜ್ಯಪಾಲರಿಗೆ ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!