ದಾವಣಗೆರೆಯಲ್ಲಿ ಬಿಜೆಪಿ ಬಂಡಾಯ ಶಮನಗೊಳಿಸಿದ ರಾಜಾಹುಲಿ; ರೇಣುಕಾಚಾರ್ಯ ಟೀಮ್ ಸೈಲೆಂಟ್

ದಾವಣಗೆರೆ; ಕಮಲ ಪಾಳದಲ್ಲಿ ಭಿನ್ನಮತದ ಹೊಗೆ. ಶಮನ ಮಾಡಲು ರಾಜ್ಯನಾಯಕರ ಯತ್ನ. ಕುಟುಂಬ ರಾಜಕಾರಣಕ್ಕೆ ಮಣೆ ಹಾಕದಂತೆ ಭಿನ್ನಮತಿಯರ ಒತ್ತಾಯ. ಮಾಜಿ ಸಚಿವರು, ಶಾಸಕರಿಂದ ಸಂಧಾನಸಭೆಯಲ್ಲಿ ಅಸಮಾಧಾನ ವ್ಯಕ್ತ. ಅಂತಮವಾಗಿ ಭಿನ್ನಮತ ಶಮನ ಮಾಡುವಲ್ಲಿ ಯಶಸ್ವಿಯಾದ ರಾಜಾಹುಲಿ. ಇದು ಬೆಣ್ಣೆನಗರಿ ದಾವಣಗೆರೆಯಲ್ಲಿ ನಡೆದ ಭಿನ್ನಮತಿಯರ ಸಭೆಯ.

ಕಳೆದ ಹಲವು ತಿಂಗಳಿಂದ ದಾವಣಗೆರೆ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಜೋರಾಗಿತ್ತು. ರಾಜ್ಯ ನಾಯಕರು ಮನವೊಲಿಸಲು ಯತ್ನಿಸಿದರು ಬಗೆ ಹರಿಯಲಿಲ್ಲ ಭಿನ್ನಮತ. ಕೊನೆಗೆ ರಾಜಾಹುಲಿಯೇ ಬರಬೇಕಾಯಿತು, ಅಸಮಾಧಾನಿಕರನ್ನ ಸಮಾಧಾನಪಡಿಸಲು. ಹೌದು ಬಿಜೆಪಿಯಿಂದ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಭಿನ್ನಮತೋರಾಗಿತ್. ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಪತ್ನಿಗೆ ಟಿಕೆಟ್ ನೀಡಿದ್ದ ಕಾರಣ ಭಿನ್ನಮತ ಮತ್ತಷ್ಟು ಸ್ಫೋಟವಾಗಿತ್ತು. ಬೆಂಗಳೂರಿನಲ್ಲಿ ಅಸಮಾಧಾನ ಶಮನಕ್ಕೆ ಪ್ರಯತ್ನಪಟ್ಟರು ಸಾದ್ಯವಾಗಿರಲಿಲ್ಲ. ನಂತರ ದಾವಣಗೆರೆಯಲ್ಲಿ ಸಭೆಡ ಮಾಡಿದ ವಿರೋಧಿ ಬಣ ಬಂಡಾಯ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧಾರ ಮಾಡಿದರು. ಈ ಬೆನ್ನಲ್ಲೇ ಮಾಜಿ ಸಿಎಂ ಯಡಿಯೂರಪ್ಪ ಕೊನೆಗೆ ದಾವಣಗೆರೆಗೆ ಆಗಮಿಸಬೇಕಾಯಿತು. ಇಂದು ನಗರದ ಅಪೂರ್ವ ಹೋಟೆಲ್‍ನಲ್ಲಿ ಸಭೆ ಮಾಡಲಾಯಿತು. ಲೋಕಸಭಾ ಚುನಾವಣೆ ಗೆಲ್ಲುವ ಹಿನ್ನೆಲೆ ಭಿನ್ನಮತಿ ನಾಯಕರೊಂದಿಗೆ ಸಭೆ ಮಾಡಲಾಯಿತು.ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹತ್ವದ ವಿಚಾರಗಳನ್ನ ಚರ್ಚೆ ಮಾಡಲಾಯಿತು.

ಒಟ್ಟಾರೆ ಲೋಕಸಭಾ ಚುನಾವಣೆ ಮುನ್ನಾ ಎದ್ದಿದ್ದ ಬಿಜೆಪಿಯಲ್ಲಿನ ಭಿನ್ನಮತ ಕೊನೆಗೂ ಒಂದು ಹಂತಕ್ಕೆ ಬಂದು ಶಮನವಾದಂತಾಗಿದೆ. ಜಿಎಂ ಕುಟುಂಬಕ್ಕೆ ಇದ್ದ ತಲೆನೋವು ದೂರವಾಗಿದೆ. ಇದೀಗ ಬಂಡಾಯ ನಾಯಕರು ಈ ಬಾರಿ ಚುನಾವಣೆಯಲ್ಲಿ ಎಲ್ಲಾ ಮರೆತು ಒಂದಾಗಿದ್ದೇವೆ ಎಂದು ಹೇಳುವ ಮೂಲಕ ಶಕ್ತಿ ತೋರಿದ್ದಾರೆ.

Leave a Reply

Your email address will not be published. Required fields are marked *

error: Content is protected !!