raksha bandhan; ರಕ್ಷಣೆಯ ಶಪಥದ ದಿನ- ಕಾಟೇಶ್ ಸಿ, ವಿದ್ಯಾರ್ಥಿ

ರಕ್ಷಾ ಬಂಧನ (raksha Bandhan)

ತಂಗಿಯ ಕಷ್ಟವ ತಿಳಿಯಲು ಎಂದು
ಅಕ್ಕನ ದುಃಖವ ಇಳಿಸಲು ಎಂದು
ಭಾಂದವ್ಯ ಮರೆಯದಿರಲೆಂದು
ಆ ಬೆಳಕಿನ ಹುಣ್ಣಿಮೆಯ ದಿನವೂ…
ಆ ಬೆಳಕಿನ ಹುಣ್ಣಿಮೆಯ ದಿನವೂ….

ದೂರವಿದ್ದರೂ ಮರೆಯದಿರಲೀ ಎಂದು
ಅತ್ತಿಗೆ ಬಂದರು ನೆನಪಿರಲೆಂದು
ರಕ್ಷೆಯ ಶಪಥದ ನೂಲನು ಕಟ್ಟುವ ನಾನು
ಎಂದೆಂದೂ ನನ್ನ ಶ್ರೀರಕ್ಷೆಯಾಗಿ ಬಾಳು ನೀನು
ದೇವರು ರುಜು ಮಾಡಿದ ದಿನವೂ …
ಆ ಬೆಳಕಿನ ಹುಣ್ಣಿಮೆಯ ದಿನವೂ ….

ಬೆಳಕಿನ ದಿನದಲ್ಲಿ ಶಪಥ ಮಾಡುವನೆಂದು
ನಿನ್ನನ್ನು ಅಪಾಯಗಳಿಂದ ರಕ್ಷಿಸುವೆನೆಂದು
ಅಣ್ಣ ತಂಗಿಯ ಬಂಧನ ದಿನದಲ್ಲಿ ಊರಿಗೆ ಬಂದು
ನೀ ಕಟ್ಟುವ ನೂಲಲ್ಲಿ ಪ್ರಾಣವ ತಂದು
ದೇವರು ರುಜು ಮಾಡಿದ ದಿನವು…
ಆ ಬೆಳಕಿನ ಹುಣ್ಣಿಮೆಯ ದಿನವು…

ಕಂಚಿನ ಹಣೆಗೆ ತಿಲಕವನ್ನಿಟ್ಟು
ಅಣ್ಣನ ಕಾಲಿಗೆ ವಂದನೆಗಳನ್ನು ಇಟ್ಟು
ಮಂಗಳಾರತಿಯ ತಟ್ಟೆಯ ನೆತ್ತಿ
ಶುಭವಾಗಲಿ ನಿನಗೊಂದು ಬೆಳಗಿದ ದಿನವೂ
ದೇವರು ರುಜು ಮಾಡಿದ ದಿನವೂ ….
ಆ ಬೆಳಕಿನ ಹುಣ್ಣಿಮೆಯ ದಿನವು….

ಕಾಟೇಶ್ ಸಿ
ದಾವಣಗೆರೆ ವಿಶ್ವವಿದ್ಯಾನಿಲಯ
ದಾವಣಗೆರೆ

Leave a Reply

Your email address will not be published. Required fields are marked *

error: Content is protected !!