ರಾಮ ಮಂದಿರ ನಿರ್ಮಾಣಕ್ಕೆ ಒಂದು ನಯ ಪೈಸೆ ನೀಡದೆ, ಈಗ ಲೆಕ್ಕ ಕೊಡಿ ಎಂದರೆ ಹೇಗೆ, ಎಚ್ ಡಿಕೆ ವಿರುದ್ದ ಈಶ್ಚರಪ್ಪ ಆಕ್ರೋಶ

ಶಿವಮೊಗ್ಗ: ಮಾಜಿ ಸಿಎಂ ಕುಮಾರ ಸ್ವಾಮಿ ವಿರುದ್ದ ಗ್ರಾಮೀಣಾಭಿವೃದ್ದಿ ಸಚಿವ ಈಶ್ವರಪ್ಪ ಗುಡುಗಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ ರಾಮಮಂದಿರ ನಿರ್ಮಾಣದ ಬಗ್ಗೆ ಪಾರದರ್ಶಕತೆ ಇದ್ದರೆ ಬಿಜೆಪಿಯವರಿಗೆ ಲೆಕ್ಕ ಕೊಡಲು ಏನು ಸಮಸ್ಯೆ ಎಂದು ಭದ್ರಾವತಿಯಲ್ಲಿ ಹೇಳಿಕೆ ನೀಡಿದ್ದರು. ಇದಕ್ಕೆ ಶಿವಮೊಗ್ಗದಲ್ಲಿ ಇಂದು ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಕುಮಾರ ಸ್ವಾಮಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಮಮಂದಿರ ನಿರ್ಮಾಣದ ಲೆಕ್ಕ ಕೇಳುವ ಅಧಿಕಾರ ಕುಮಾರಸ್ವಾಮಿ ಅವರಿಗೆ ಇಲ್ಲ ಕಿಡಿಕಾರಿದ್ದಾರೆ.

ಯಾರು ರಾಮಮಂದಿರ ನಿರ್ಮಾಣಕ್ಕೆ ದುಡ್ಡು ಕೊಟ್ಟಿದ್ದಾರೋ ಅವರಿಗೆ ಲೆಕ್ಕ ಕೇಳುವ ಅಧಿಕಾರ ಇದೆ. ಇವರಿಗೇನು ಅಧಿಕಾರ ಇದೆ ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.

 

ಮಂದಿರ ನಿರ್ಮಾಣಕ್ಕೆ ಒಂದು ಪೈಸೆಯನ್ನು ನೀಡದೆ ಈಗ ಲೆಕ್ಕ ಕೊಡಿ ಎಂದರೆ ಹೇಗೆ. ಅವರೆನಾದರೂ ಹಣ ಕೊಟ್ಟಿದ್ದರೆ ಲೆಕ್ಕ ಕೇಳಲಿ, ಆಗ ಸಂತೋಷ ಆಗುತ್ತೆ ಅದನ್ನು ಬಿಟ್ಟು ಒಂದು ರೂಪಾಯಿ ದುಡ್ಡು ಕೊಡದೆ ಪುಕ್ಸಟ್ಟೆ ರಾಮಮಂದಿರದ ಲೆಕ್ಕ ಕೊಡಿ ಎಂದರು ಕೇಳಲು ಇವರ್ಯಾರು ಎಂದು‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ರಾಜ್ಯದಲ್ಲಿ‌ ನಡೆಯುತ್ತಿರುವ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂಬ ವಿಶ್ವಾಸವನ್ನು‌ ವ್ಯಕ್ತ ಪಡಿಸಿದರು.

 

ಎರಡೂ ಉಪ ಚುನಾವಣೆಯಲ್ಲಿ‌ ಬಿಜೆಪಿ ಗೆಲ್ಲುತ್ತೆ ‌ಅದರಲ್ಲಿ‌ ಯಾವುದೇ ಅನುಮಾನ ಬೇಡ. ಈ ಹಿಂದೆ ನಡೆದ ಎಲ್ಲಾ ಉಪ ಚುನಾವಣೆಯಲ್ಲಿ ಸಹ ನಾವು ಗೆದ್ದಿದ್ದೇವೆ ಈಗಲು ಗೆಲ್ಲುತ್ತೇವೆ ಎಂದು‌ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!