ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಪ್ರಾರಂಭಕ್ಕೆ 3 ಕೋಟಿ ಅನುದಾನ!
ದಾವಣಗೆರೆ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿಯಲ್ಲಿ 2022-23ನೇ ಸಾಲಿನಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಪ್ರಾರಂಭಿಸುವ ಸಲುವಾಗಿ 3 ಕೋಟಿ ರೂಗಳ ಅನುದಾನಕ್ಕೆ ಅನುಮೋದನೆ ನೀಡಿ ಬಿಡುಗಡೆಗೊಳಿಸಿದೆ.
ಸಂಗೊಳ್ಳಿಯಲ್ಲಿ ಸೈನಿಕ ಶಾಲೆ ಪ್ರಾರಂಭಕ್ಕೆ ಯೋಜನೆ ರೂಪಿಸಲಾಗಿದ್ದು, ಮೊದಲನೇ ಹಂತದಲ್ಲಿ 6 ತರಗತಿಯ ಎರಡು ವಿಭಾಗಗಳಿಗೆ ತಲಾ 40 ವಿದ್ಯಾರ್ಥಿಗಳಂತೆ 80 ವಿದ್ಯಾರ್ಥಿಗಳಿಗೆ ದಾಖಝಲಾತಿ ಮಾಡಿಕೊಳ್ಳುವ ಮೂಲಕ ಪ್ರಾರಂಭಿಸಲು ಶಾಲೆಗೆ ಪ್ರಸ್ತುತ ಅವಶ್ಯವಿರುವ ಶಾಲೆಯ ನಿರ್ವಹಣೆ, ಪೀಠೋಪಕರಣ ಮತ್ತು ಮೂಲಭೂತ ಸಾಕರ್ಯಕ್ಕೆ 3 ಕೋಟಿ ರೂಗಳ ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. ಕೇಂದ್ರ ರಕ್ಷಣಾ ಮಂತ್ರಾಲಯದಲ್ಲಿನ ಸೈನಿಕ ಸ್ಕೂಲ್ ಸೊಸೈಟಿ ಸಹಯೋಗದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯನ್ನು ಪ್ರಾರಂಭಿಸಲು ಅಗತ್ಯವಿರುವ 8 ಬೋಧಕ ಮತ್ತು 13 ಬೋಧಕೇತರ ಹುದ್ದೆಗಳನ್ನು ಸೃಜಿಸಿ ಜೂನ್ 13ರಂದು ಆದೇಶ ಹೊರಡಿಸಲಾಗಿದೆ.
ಅಷ್ಟೇಅಲ್ಲದೆ ಕೆ.ಎ. ದಯಾನಂದ ಭಾ.ಆ.ಸೇ ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ವತಿಯಿಂದ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯನ್ನು ಪ್ರಾರಂಭಿಸಲು ಸೂಕ್ತ ಮೂಲಭೂತ ಸೌಕರ್ಯ, ನೇಮಕಾತಿ ಮತ್ತು ದಾಖಲಾತಿ ಹಾಗೂ ಇತರ ಅಗತ್ಯ ಪೂರ್ವ ಸಿದ್ದತೆಗಳನ್ನು ಶೀಘ್ರಗತಿಯಲ್ಲಿ ಹಾಗೂ ಕಾಲಮಿತಿಯಲ್ಲಿ ಮಾಡುವ ಉದ್ದೇಶದಿಂದ ನೋಡಲಾ ಅಧಿಕಾರಿಯನ್ನಾಗಿ ನೇಮಿಸಿ ಆದೇಶಿಸಲಾಗಿತ್ತು.
garudavoice21@gmail.com 9740365719