ಎಸ್.ಓ.ಜಿ. ಕಾಲೋನಿಯ ದುರ್ಗಾಂಭಿಕಾ ದೇವಿ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭ
ದಾವಣಗೆರೆ : ಎಸ್.ಓ.ಜಿ. ಕಾಲೋನಿಯ ನಾಗರೀಕರು, ಯುವ ಮಿತ್ರರು ಹಾಗೂ ಜಾತ್ರಾ ಕಮಿಟಿಯವರ ಪ್ರೋತ್ಸಾಹದಿಂದ ಶ್ರೀ ದುರ್ಗಾಂಭಿಕಾ ದೇವಿಯ ಜಾತ್ರಾ ಮಹೋತ್ಸವವು ಐದು ದಿನಗಳ ಕಾಲ ಬಹಳ ಸುಸೂತ್ರವಾಗಿ ಜರುಗಿರುವುದಕ್ಕೆ ತುಂಬಾ ಸಂತೋಷವಾಗತ್ತಿದೆ ಎಂದು ಟಿ. ಬಸವರಾಜ್ ಹೇಳಿದರು. ನಗರದ ಎಸ್.ಓ.ಜಿ. ಕಾಲೋನಿಯ ದುರ್ಗಾಂಭಿಕಾ ದೇವಿಯ ಜಾತ್ರಾ ಮಹೋತ್ಸವದ 5ನೇ ದಿನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಐದು ದಿನಗಳ ಕಾಲ ಸಾಂಸ್ಕೃತಿ ಕಾರ್ಯಕ್ರಮ, ರಸಮಂಜರಿ ಕಾರ್ಯಕ್ರಮ, ಜಾದೂ ಹಾಗೂ ನಾಟಕ ಪ್ರದರ್ಶನ ತುಂಬಾ ಅಚ್ಚುಕಟ್ಟಾಗಿ ನೆರವೇರಿಸಿತು. ಇದಕ್ಕೆ ನಿಮ್ಮೆಲ್ಲರ ತಾಳ್ಮೆ, ಪ್ರೋತ್ಸಾಹ ಅತಿ ಮುಖ್ಯ. ಪ್ರತಿಯೊಬ್ಬರೂ ದೇವಿಯ ಕೃಪೆಗೆ ಪಾತ್ರರಾಗಿ ತನು-ಮನ-ಧನಕ್ಕೆ ಸಹಾಯ ನೀಡಿದ್ದಾರೆ. ಹಾಗೂ ಜಾತಿ, ಧರ್ಮ, ಬೇದಭಾವವಿಲ್ಲದೆ ಎಲ್ಲರೂ ಭಾವೈಕ್ಯತೆಯಿಂದ ಈ ಜಾತ್ರೆಯನ್ನು ನೆರವೇರಿಸಿದ್ದೀರಿ ನಿಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇವೆ ಎಂದು ಟಿ. ಬಸವರಾಜ್ ತಿಳಿಸಿದರು.
ಜಾತ್ರಾ ಮಹೋತ್ಸವ ಕಮಿಟಿಯ ಉಪಾಧ್ಯಕ್ಷ ಹೆಚ್. ತಿಮ್ಮಣ್ಣ ಮಾತನಾಡಿ, ನಮ್ಮ ನಗರದಲ್ಲಿ ದುರ್ಗಾಂಭಿಕಾ ದೇವಿ ಜಾತ್ರೆ ಮಾಡುವುದರಿಂದ ನಗರದಲ್ಲಿ ಶಾಂತಿ, ನೆಮ್ಮದಿ ಹಾಗೂ ಪ್ರತಿಯೊಬ್ಬರ ಮನೆಯಲ್ಲೂ ಸಹ ಯಾವುದೇ ಆರೋಗ್ಯ, ಶಾಂತಿ, ನೆಮ್ಮದಿ, ಯಾವುದೇ ದುಷ್ಟ ಶಕ್ತಿಗಳು ನಮ್ಮ ಗಡಿಯಲ್ಲಿ ಸುಳಿಯದಂತೆ ಹಾಗೂ ಮಕ್ಕಳ ಆರೋಗ್ಯ, ವಿದ್ಯಾಭ್ಯಾಸ ದೇವರು ಅವರಿಗೆ ಕರುಣಿಸಲಿ ಎಂದು ತಿಳಿಸಿದರು.
ಇಪ್ಟಾ ಕಲಾವಿದ ಹೆಗ್ಗೆರೆ ರಂಗಪ್ಪ ಮಾತನಾಡಿ, ಈ ಭಾಗದಲ್ಲಿ ಎಲ್ಲರೂ ಒಟ್ಟಾಗಿ ದುರ್ಗಾಂಭಿಕಾ ಜಾತ್ರೆಯನ್ನು ಅಚ್ಚುಕಟ್ಟಾಗಿ ನೇರಿವೇರಿಸಿದ್ದೀರಿ. ನಿಮ್ಮ ಪ್ರೋತ್ಸಾಹ ಸದಾ ಹೀಗೇ ಇರಲಿ. ನಮ್ಮಲ್ಲಿ ಯಾವುದೇ ಜಾತಿ-ಬೇಧವಾಗಲಿ ಇಲ್ಲ, ಇದು ಭಾವೈಕ್ಯತೆಯ ಸಂಕೇತದ ಹಬ್ಬವಾಗಿದೆ. ಮುಂದಿನ ದಿನಗಳಲ್ಲಿ ಜಾತ್ರಾ ಕಮಿಟಿಯ ಮುಖ್ಯಸ್ಥರಿಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡುವುದರ ಮೂಲಕ ದೇವಸ್ಥಾನ ಅಭಿವೃದ್ದಿಗೊಳಿಸುವುದಕ್ಕೆ ಶ್ರಮಸಲಿ ಎಂದು ಹೇಳಿದರು. ಸಿದ್ದೇಶಿ ನಾಗನೂರು ಅವರು ಶ್ರೀ ದುರ್ಗಾಂಭಿ ದೇವಿಗೆ 1 ಕೆ.ಜಿ. ಬೆಳ್ಳಿಯನ್ನು ಕಾಣಿಕೆಯಾಗಿ ನೀಡಿದರು.
ಟಿ. ಬಸವರಾಜ್, ಹೆಚ್. ತಿಮ್ಮಣ, ಕೆ.ವಿ. ಚಂದ್ರಶೇಖರ್, ಹೆಗ್ಗೆರೆ ರಂಗಪ್ಪ, ಅಂಜಿನಪ್ಪ ಮಾಳಗಿ, ದುರುಗೋಜಪ್ಪ, ಬಾತಿ ಶಿವಣ್ಣ, ಮಾರುತಿ, ಜಯಣ್ಣ, ನಾಗಣ್ಣ (ಗಟ್ಟಿ), ಗುರುಶಾಂತಪ್ಪ, ಮಡಿವಾಳ ನಿಂಗಪ್ಪ, ಟ್ರಾಕ್ಟರ್ ನಾಗಣ್ಣ, ಬಾಲಪ್ಪ, ಪಾಂಡು, ರಂಗಜ್ಜ, ಸಿದ್ದನೂರು ಸಿದ್ದು, ಅನುಸೂಯಮ್ಮ, ಶಿವಕುಮಾರ್, ಶಿವು, ಅಂಜಿನಿ, ನರಸಿಂಹ, ರಾಖಿ, ಮಂಜು, ಸಂತೋಷ್ ಆಚಾರಿ ಮತ್ತಿತರರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.