sand; ಅಧಿಕ ಮರಳು ಸಾಗಿಸುತ್ತಿದ್ದವರಿಗೆ ಬಿಸಿ ಮುಟ್ಟಿಸಿದ ಅಧಿಕಾರಿಗಳು, ಖಡಕ್ ವಾರ್ನಿಂಗ್
ದಾವಣಗೆರೆ, ಸೆ.09: ಅನುಮತಿ ಪಡೆದಿರುವುದಕ್ಕಿಂತ ಹೆಚ್ಚು ತೂಕದ ಮರಳನ್ನು (sand) ಸಾಗಾಣೆ ಮಾಡುತ್ತಿರುವವರಿಗೆ ಹರಿಹರ ಪೊಲೀಸರು, ದಾವಣಗೆರೆ ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಹಿರಿಯ ಗಣಿ & ಭೂ ವಿಜ್ಞಾನ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ರಾಣೆಬೆನ್ನೂರಿನ ನಾಗೇನಹಳ್ಳಿ & ಮುದೇನೂರು ಮರಳು ಪಾಯಿಂಟ್ ನಿಂದ ಬರುವ ಲಾರಿಗಳಲ್ಲಿ ಮರಳನ್ನು ಅನುಮತಿ ಪಡೆದ ತೂಕಕ್ಕಿಂತ ಹೆಚ್ಚಿನ ತೂಕದ ಮರಳನ್ನು ಸಾಗಿಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಹರಿಹರ ಪೊಲೀಸರು ಲಾರಿಗಳನ್ನು ತಡೆದು ಪರಿಶೀಲನೆ ನಡೆಸಿದಾಗ ನಿಜಾಂಶ ಬೆಳಕಿಗೆ ಬಂದಿದೆ.
ಅನುಮತಿ ಪಡೆದಿದ್ದಕ್ಕಿಂತ ಹೆಚ್ಚು ಮರಳನ್ನು ತುಂಬಿಕೊಂಡು ಸಾಗಾಟ ಮಾಡುತ್ತಿರುವುದು ಗಮನಕ್ಕೆ ಬಂದ ತಕ್ಷಣ ಹರಿಹರ ಪೊಲೀಸರು ದಾವಣಗೆರೆ ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಹಿರಿಯ ಗಣಿ & ಭೂ ವಿಜ್ಞಾನ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಬಳಿಕ ಎರಡು ಲಾರಿಗಳಲ್ಲಿ ತುಂಬಿಕೊಂಡು ಸಾಗಾಟ ಮಾಡುತ್ತಿದ್ದ ಲಾರಿಗಳನ್ನು ವಶಕ್ಕೆ ಪಡೆದ ಹಿರಿಯ ಗಣಿ & ಭೂ ವಿಜ್ಞಾನ ಅಧಿಕಾರಿಗಳು ಒಂದು ಲಾರಿಗೆ 21560 ರೂ.ಗಳು ಹಾಗೂ ಮತ್ತೊಂದು ಲಾರಿಗೆ 24640 ರೂ.ಗಳ ದಂಡ ವಿಧಿಸಿದರು.
sand; ಗಣಿ ಸಚಿವರ ತವರಲ್ಲಿ ಮರಳು ರಾಯಲ್ಟಿ ಲೂಟಿ.! ಮೌನವಹಿಸಿದ ಟಾಸ್ಕ್ ಫೋರ್ಸ್
ಪೊಲೀಸ್ ಅಧೀಕ್ಷಕರ ಎಚ್ಚರಿಕೆ
ಎಲ್ಲಾ ಮರಳು ಸಾಗಟ ಮಾಡುವವರು ಅನುಮತಿ ಪಡೆದಿದ್ದಕ್ಕಿಂತ ಹೆಚ್ಚು ಮರಳನ್ನು ತುಂಬಿಕೊಂಡು ಸಾಗಟ ಮಾಡುತ್ತಿರುವುದು ಕಂಡು ಬಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ ಐಪಿಎಸ್ ಎಚ್ಚರಿಕೆ ನೀಡಿದ್ದಾರೆ.