hindu; ಸ್ಟಾಲಿನ್ ಹೇಳಿಕೆಗೆ ಬಿಜೆಪಿ ಜಿಲ್ಲಾ ಘಟಕ ಉಪಾಧ್ಯಕ್ಷ ಆಕ್ರೋಶ
ದಾವಣಗೆರೆ, ಸೆ.09: ಸನಾತನ ಹಿಂದು (hindu) ಧರ್ಮ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೋಮು ಪ್ರಚೋದನೆ ಹಾಗೂ ರಾಷ್ಟ್ರದ್ರೋಹದ ಹೇಳಿಕೆ ನೀಡಿದ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸನಾತನ ಹಿಂದು ಧರ್ಮದ ಬಗ್ಗೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ತನ್ನ ಹೆತ್ತ ತಾಯಿಯಿಂದ ಹಿಂದೂ, ಸಂಸ್ಕೃತಿ, ಸಂಸ್ಕಾರಗಳನ್ನು ಮೊದಲು ಕಲಿಯಲಿ. ಹಿಂದು ಧರ್ಮವನ್ನು ಅವಮಾನಿಸಿದರೆ ಹೆತ್ತ ತಾಯಿಯನ್ನೇ ಅವಮಾನಿಸಿದಂತೆ ಎಂಬುದನ್ನು ಉದಯನಿಧಿ ಅರಿಯಲಿ. ತಮಿಳುನಾಡಿನ ಮುಖ್ಯಮಂತ್ರಿ ಪುತ್ರ ಎಂ.ಕೆ.ಸ್ಟಾಲಿನ್ ಪುತ್ರ, ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ, ವಿಶೇಷ ಕಾಯ್ದೆ ಅನುಷ್ಠಾನ ಇಲಾಖೆ ಸಚಿವರು, ಡಿ.ಎಂ.ಕೆ. ಪಕ್ಷದ ಯುವ ಘಟಕದ ಅಧ್ಯಕ್ಷನೂ ಆದ ಉದಯ ನಿಧಿ ಸ್ಟಾಲಿನ್ ಓಲೈಕೆ ಮತ್ತು ಮತ ಬ್ಯಾಂಕ್ ರಾಜಕೀಯ ಬಿಡಲಿ ಎಂದು ಹೇಳಿದರು.
ಈ ರೀತಿಯ ಹೇಳಿಕೆಯನ್ನು ನೀಡಿದ್ದು, ನಮ್ಮ ಸನಾತನ ಧರ್ಮವನ್ನು ಡೆಂಗ್ಯೂ, ಕೊರೊನಾ, ಮಲೇರಿಯಾಕ್ಕೆ ಸಮಾನವಾದದ್ದು ಎಂಬ ಹೇಳಿಕೆ ನೀಡಿರುವುದು ಅಕ್ಷಮ್ಯ ಹಾಗೂ ಖಂಡನೀಯ. ಜವಾಬ್ದಾರಿಯುತ ಸ್ಥಾನದಲ್ಲಿರುವ ಉದಯನಿಧಿನಂಹವರು ಸಮಾಜದಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡಬಾರದು. ಕಾಂಗ್ರೆಸ್ ಮೈತ್ರಿಪಕ್ಷ ಡಿ.ಎಂ.ಕೆ ಹಾಗೂ ಐ.ಎನ್.ಡಿ.ಐ.ಎ ಮೈತ್ರಿಕೂಟ ಸನಾತನ ಧರ್ಮವಾದ ನಮ್ಮ ಹಿಂದುತ್ವದ ನಿರ್ಮೂಲನೆ ಬಗ್ಗೆ ಮಾತನಾಡುತ್ತಾ ದ್ವೇಷಿಸುತ್ತಿರುವುದು ಖಂಡನೀಯ.
Ksheera Bhagya; ’54 ಲಕ್ಷ ಮಕ್ಕಳಿಗೆ ಕ್ಷೀರ ಭಾಗ್ಯದಿಂದ ನೆರವಾಗಿದೆ’
ನಮ್ಮ ಸಂಸ್ಕೃತಿ, ಸಂಪ್ರದಾಯ, ಪರಂಪರೆಗಳ ವಿರುದ್ಧವಿರುವ ಇಂತಹ ಮೈತ್ರಿಕೂಟ ದೇಶದ 80% ಹಿಂದೂ ಸನಾತನ ಧರ್ಮದವರನ್ನು ಅವಮಾನಿಸಿದ್ದಲ್ಲದೆ, ಧರ್ಮ-ಧರ್ಮಗಳ ನಡುವೆ ಕಿತ್ತಾಟ ಹಚ್ಚಲು ಯತ್ನಿಸುತ್ತಿದ್ದಾರೆ. ಇದರ ಪರಿಣಾಮ ದೇಶದ ಕೋಮು ಸಾಮರಸ್ಯಕ್ಕೆ ಧಕ್ಕೆಯಾಗಬಹುದು ಕೋಮು ಪ್ರಚೋದನೆಗಾಗಿಯೇ ಉದಯನಿಧಿ ಈ ಹೇಳಿಕೆ ನೀಡಿದ್ದಾರೆಂಬುದು ಸ್ಪಷ್ಟವಾಗುತ್ತಿದೆ.
ಹಿಂದು ಧರ್ಮ ನಾಶ ಮಾಡಲು ಬಂದವರೆ ನಾಶವಾದ ಇತಿಹಾಸವನ್ನು ನಿರಂತರ ಕಾಣಬಹುದು. ಸನಾತನ ಧರ್ಮ ಅನಾದಿಯಿಂದಲೂ ಇರುವಂತಹದ್ದು. ಇಂತಹ ಆಲದ ಮರ ಸರ್ವೇ ಜನೋ ಸುಖಿನೋಭವಂತು ಅಂತಾ ಸಾರಿ ಕೊಂಡು ಬಂದಿದೆ. ಇಂತಹ ಸನಾತನ ಧರ್ಮದ ಬಗ್ಗೆ ಹಗುರ ಹೇಳಿಕೆ ಸಹಿಸಲಾಗದು.
ಹಿಂದೆ ತಮಿಳುನಾಡು ಸದನದಲ್ಲಿ ದಿವಂಗತ ಮಾಜಿ ಮುಖ್ಯಮಂತ್ರಿ ಕುಮಾರಿ ಜಯಲಲಿತಾ ಅವರನ್ನು ಅವಮಾನಿಸಿದ್ದ ನಿಮ್ಮ ತಾತನ ಪಕ್ಷ ಮತ್ತು ನಿಮ್ಮ ತಾತನ ಕಥೆಯನ್ನು ಕಾಲವೇ ಬರೆಯಿತು. ಕರ್ಮ ಯಾರನ್ನೂ ಬಿಡುವುದಿಲ್ಲ. ಸನಾತನ ಧರ್ಮದ ಬಗ್ಗೆ ಹಗುರ ಹೇಳಿಕೆ ನೀಡಿದ ಉದಯನಿಧಿಗೆ ಕಾಲವೇ ಪಾಠ ಕಲಿಸಲಿದೆ ಎಂದು ಅವರು ಹೇಳಿದ್ದಾರೆ.