sand; ಗಣಿ ಸಚಿವರ ತವರಲ್ಲಿ ಮರಳು ರಾಯಲ್ಟಿ ಲೂಟಿ.! ಮೌನವಹಿಸಿದ ಟಾಸ್ಕ್ ಫೊರ್ಸ್
ದಾವಣಗೆರೆ; sand ದಾವಣಗೆರೆ ಜಿಲ್ಲೆಯು ತುಂಗಭದ್ರಾ ನದಿಯ ಮರಳು ರಾಜ್ಯದಲ್ಲಿ ತನ್ನದೇ ಆದ ಹೆಸರನ್ನು ಗಳಿಸಿದೆ, ಅದರಲ್ಲೂ ತುಂಗಭದ್ರಾ ನದಿಯ ಮರಳಿಗೆ ಭಾರಿ ಬೇಡಿಕೆ ಇದೆ.
ಕಳೆದ ಹಲವು ತಿಂಗಳಿನಿಂದ ಅಕ್ರಮ ಮರಳುಗಾರಿಕೆ, ಸಾಗಾಣಿಕೆ, ಕೊಂಚ ಮಟ್ಟಿಗೆ ತಹಬಂದಿಗೆಯಲ್ಲಿತ್ತು ಕಾರಣ ಈ ಹಿಂದೆ ಇದ್ದ ದಾವಣಗೆರೆ ಜಿಲ್ಲೆಯಲ್ಲಿ ಎಸ್ ಪಿ ಡಾ ಅರುಣ್ ಕೆ. ಇವರ ಹೆಸರು ಕೇಳಿ ಹಲವು ಮರಳು ದುರುಳರು ದಂಧೆ ಬಿಟ್ಟು ಬೇರೆ ವ್ಯವಹಾರ ನಡೆಸುತ್ತಿದ್ದರು ಆದರೆ ಯಾವಾಗ ಎಸ್ ಪಿ ಅರುಣ್ ವರ್ಗಾವಣೆ ಆಗಿದ್ದೆ ತಡ ಮರಳು ದುರುಳರು ತಮ್ಮ ಹಳೆ ವರಸೆಯ ಟ್ರ್ಯಾಕಿಗೆ ಬಂದಿದ್ದಾರೆ.
https://garudavoice.com/illigal-activities-functioning-at-ranebennuru-taluk-officers-support/
ಚುನಾವಣೆ ನಂತರ ದಾವಣಗೆರೆ ಜಿಲ್ಲೆಯವರಾದ ಎಸ್ ಎಸ್ ಮಲ್ಲಿಕಾರ್ಜುನ ಅವರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವರಾಗಿ ಆಯ್ಕೆಯಾಗಿದ್ದಾರೆ. ಗಣಿ ಇಲಾಖೆಯಲ್ಲಿ ಹಲವು ಸುಧಾರಣೆ ತರುತ್ತೆನೆ ಹಾಗೂ ಅಕ್ರಮ ಗಣಿಗಾರಿಕೆಯನ್ನು ತದಬಮದಿಗೆ ತರುತ್ತೆನೆ ಅಂತಾ ಹೇಳಿದ್ದರೂ, ಜಿಲ್ಲೆಯಲ್ಲಿ ಅಕ್ರಮವಾಗಿ ಅಥವಾ ಕೆಲವರ ಒತ್ತಡದಿಂದಾಗಿ ಕಣ್ಣು ಮುಚ್ಚಿ ಕುಳಿತುಕೊಳ್ಳಲು ಅನಿವಾರ್ಯತೆ ಅಧಿಕಾರಿಗಳದ್ದಾಗಿದೆ ಎನ್ನಲಾಗಿದೆ. ಅದರಲ್ಲೂ ಹೊನ್ನಾಳಿಯ ಶಾಸಕರು ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಮರಳು ವಿಚಾರವಾಗಿ ಎಸ್ ಪಿ ಅವರನ್ನು ವರ್ಗಾವಣೆ ಮಾಡಿ ಎಂದು ಸಭೆಯಲ್ಲಿ ಮನವಿ ಮಾಡಿಕೊಂಡಿದ್ದರು. ಅದರಂತೆ ಎಸ್ ಪಿಡಾ ಅರುಣ್ ವರ್ಗಾವಣೆ ಮಾಡಲಾಯಿತು.
ಸದ್ದಿಲ್ಲದ ಕಾನೂನು ಚೌಕಟ್ಟಿನಲ್ಲಿ ನಡೆಯುತ್ತಿದ್ದ ಎಲ್ಲಾ ರೀತಿಯ ಚಟುವಟಿಕೆಗಳು ಇದೀಗ ಅಂಬೆಗಾಲಿನಂತೆ ಗರಿ ಬಿಚ್ಚಿಕೊಂಡು ತಮ್ಮ ಹಳೆಯ ವರದಿಗಳನ್ನು ಪ್ರಾರಂಭಿಸಲು ಆರಂಭಿಸಿದ್ದಾರೆ ಈ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುವ ದುರುಳರು. ಉದಾಹರಣೆಗೆ ಇತ್ತೀಚೆಗೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನಲ್ಲಿ ಜುಜಾಟ ಆಟವಾಡುತ್ತಿದ್ದ 18 ಜನರನ್ನ ಬಂಧಿಸಿ 1 ಲಕ್ಷಕ್ಕೂ ಹೆಚ್ಚು ಹಣವನ್ನ ವಶಕ್ಕೆ ಪಡೆಯಲಾಯಿತು.
ಗಣಿ ಇಲಾಖೆಗೆ ದಾವಣಗೆರೆ ಜಿಲ್ಲೆಯ ಸಚಿವರಾಗಿದ್ದರೂ ಕೆಲ ದಿನಗಳಿಂದ ಗಣಿ ಇಲಾಖೆಗೆ ದಾವಣಗೆರೆ ಜಿಲ್ಲೆ ಹಾಗೂ ಹಾವೇರಿ ಜಿಲ್ಲೆಯಿಂದ ಮರಳು ಸಾಗಾಣಿಕೆ ಮಾಡುವವರು ರಾಯಲ್ಟಿಯಲ್ಲಿ ಮೋಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಗಣಿ ಇಲಾಖೆಯ ಕಾನೂನು ಮೀರಿ ರಾಯಲ್ಟಿ ಲೂಟಿ ಮಾಡಲು ಪ್ರಾರಂಭಿಸಿರುವುದು ಮತ್ತೆ ಮುನ್ನೆಲೆಗೆ ಬಂದಿದೆ.
https://garudavoice.com/illegal-sand-mining-cops-seized-100/
ಹಾವೇರಿ ಜಿಲ್ಲೆಯಿಂದ ದಾವಣಗೆರೆ ಜಿಲ್ಲೆಗೆ ಬರುವ ಮರಳು ತುಂಬಿದ ಲಾರಿಗಳಲ್ಲಿ sand lorry ಅಧಿಕೃತ ಪರ್ಮಿಟ್ ಅನ್ನು ಮರಳು ಪಾಯಿಂಟ್ ನಿಂದ ಬರುತ್ತಾರೆ, ಗಡಿಯಲ್ಲಿ ಮರಳಿನ ಪಾಸ್ ಚೆಕ್ ಮಾಡಿ ಸಹಿ ಹಾಕಲಾಗುತ್ತೆ, ಇದೆಲ್ಲದರ ನಡುವೆ ಗೊತ್ತಿದ್ದೊ ಅಥವಾ ಗೊತ್ತಿಲ್ಲದಂತೋ ಕಣ್ಣಿಗೆ ಕಾಣುವ ಅಪರಾಧವನ್ನ ತಡೆಯಲು ಕಾರಣರಾದ ಟಾಸ್ಕ್ ಫೋರ್ಸ್ ಅಧಿಕಾರಗಳು ಗಮನಿಸುತ್ತಿಲ್ಲ.
ಅಧಿಕೃತ ಹೆಸರಲ್ಲಿ ಅನಧಿಕೃತವಾಗಿ ಮರಳನ್ನ ಲಾರಿ ಯಲ್ಲಿ ತುಂಬಿಕೊಂಡು ಬಂದು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡುವ ಉದ್ದೇಶವನ್ನು ಹೊಂದಿರುವುದು ಕಾಣಸಿಗುತ್ತದೆ. ಮರಳಿನ ಪಾಯಿಂಟ್ ನಲ್ಲಿ ಸಂಬಂಧಿಸಿದ ಅಧಿಕಾರಿಗಳು ಪರ್ಮಿಟ್ ನೀಡುವ ದಿನ ಇರಬೇಕು ಹಾಗೂ ಕಾನೂನು ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು, ಆದರೆ ಇದ್ಯಾವುದು ನಡೆಯುತ್ತಿಲ್ಲ ಎಂಬುದು ಗರುಡವಾಯ್ಸ್ ಮಾಧ್ಯಮಕ್ಕೆ ಸಿಕ್ಕಿರುವ ದಾಖಲೆಗಳಲ್ಲಿ ಬಹಿರಂಗವಾಗಿದೆ. ಪರ್ಮಿಟ್ ನೀಡಿದ ದಿನ ಒಂದರಲ್ಲಿಯೇ ಲಕ್ಷಾಂತರ ರೂಪಾಯಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದ್ದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ದಾವಣಗೆರೆ ಜಿಲ್ಲೆಯ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ ಗಮನ ಹರಿಸಬೇಕಾಗಿದೆ.
ಒಟ್ಟಾರೆ ತುಂಗಭದ್ರಾ ನದಿ ಪಾತ್ರದಲ್ಲಿ ಇರುವ ಮರಳು ಗಣಿಗಾರಿಕೆಯ ಪಾಯಿಂಟ್ ಗಳಲ್ಲಿ ನಡೆಯುತ್ತಿರುವ ಅಧಿಕೃತ ಹೆಸರಿನಲ್ಲಿ ಅನಧಿಕೃತವಾಗಿ ಮಾರಳು ಸಾಗಾಟವನ್ನ ತಡಯಬೇಕೆಂದು ಅವಳಿ ಜಿಲ್ಲೆಯ ಸಾರ್ವಜನಿಕರ ಒತ್ತಾಯವಾಗಿದೆ.