ಅಕ್ರಮ ಮರಳು ಗಣಿಗಾರಿಕೆ! 100 ಮೆಟ್ರಿಕ್ ಟನ್ ವಶಪಡಿಸಿಕೊಂಡ ಪೊಲೀಸರು
ದಾವಣಗೆರೆ: ಅಕ್ರಮವಾಗಿ ತುಂಗಾಭದ್ರಾ ನದಿಯಿಂದ ಮರಳನ್ನು ಸಾಗಿಸಿ ತಂದು ಸಂಗ್ರಹಿಸಿದ್ದ ಸುಮಾರು 100 ಮೆಟ್ರಿಕ್ ಟನ್ ಮರಳನ್ನು ಕುಮಾರಪಟ್ಟಣಂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಲ್ಲಿನ ಅಜಯಕುಮಾರ ಒಬಜಹಳ್ಳಿ ಸಾ, ನಲುವಾಗಿಲು ಹಾಗೂ ಚಂದ್ರಪ್ಪ ನಿಟ್ಟವಳ್ಳಿ ಸಾ, ನಲವಾಗಿಲು ಎಂಬ ಆರೋಪಿತರು ಕವಲೆತ್ತು ಗ್ರಾಮದ ಭೀಮನಗೌಡ ಪಾಟೀಲ ಎಂಬುವರಿಗೆ ಸಂಬ0ಧಿಸಿದ ಖುಲ್ಲಾ ಜಾಗದಲ್ಲಿ ಸರ್ಕಾರದ ಯಾವುದೇ ಪೂರ್ವಾನುಮತಿ ಹಾಸ್ ಪಾಸ್, ಪರ್ಮಿಟ್ ಪಡೆಯದೆ ತುಂಗಾಭದ್ರಾ ನದಿಯಿಂದ ಮರಳನ್ನು ಕಳ್ಳತನ ಮಾಡಿಕೊಂಡು ತಂದು 100 ಮೆಟ್ರಿಕ್ ಟನ್ ಸುಮಾರು 1 ಲಕ್ಷ ಮೌಲ್ಯದ ಮರಳನ್ನು ಸಂಗ್ರಹಿಸಿದ್ದರು.
ಈ ಮಾಹಿತಿ ತಿಳಿದ ಕುಮಾರಪಟ್ಟಣಂ ಪೊಲೀಸರು ಸದರಿ ಸ್ಥಳಕ್ಕೆ ಧಾವಿಸಿ 100 ಮೆಟ್ರಿಕ್ ಟನ್ ಮರಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಈ ಹಿಂದೆ ಗರುಡವಾಯ್ಸ್ ನಲ್ಲಿ ಇಲ್ಲಿನ ಅಕ್ರಮ ಮರಳುಗಾರಿಕೆ ಕುರಿತು ಸಾಕಷ್ಟು ವರದಿ ಬಿತ್ತರಿಸಲಾಗಿತ್ತು.
garudavoice21@gmail.com 9740365719