ರಾಜ್ಯಾದ್ಯಂತ ಶನಿವಾರ ಪೂರ್ಣ ದಿನದ ಶಾಲೆ! ಯಾಕೆ ಗೊತ್ತಾ?
ದಾವಣಗೆರೆ: ರಾಜ್ಯದಾದ್ಯಂತ ಜೂನ್ 21ರ ಮಂಗಳವಾರ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿರುವ ಪ್ರಯುಕ್ತ ಎಲ್ಲಾ ಶಾಲೆಗಳಲ್ಲಿ ಅಂದು ಯೋಗ ದಿನಾಚರಣೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ರಾಜ್ಯದ ಎಲ್ಲಾ ಶಾಲೆಗಳಲ್ಲಿ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಎಸ್.ಡಿ.ಎಂ.ಸಿ ಸದಸ್ಯರು, ಶಿಕ್ಷಕರು ಹಾಗೂ ಸ್ಥಳೀಯ ಯೋಗ ಸಂಸ್ಥೆಗಳ ಸಹಕಾರದೊಂದಿಗೆ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ರಾಜ್ಯ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಜ್ಞಾಪನ ಹೊರಡಿಸಿದೆ.
ಜೂನ್ 21ರ ಮಂಗಳವಾರದ0ದು ಯೋಗ ದಿನಾಚರಣೆ ಪ್ರಯುಕ್ತ ಶನಿವಾರದ ವೇಳಾಪಟ್ಟಿಯಂತೆ ಅರ್ಧ ದಿನದ ಶಾಲೆಯನ್ನು ನಡೆಸುವಂತೆ ಹಾಗೂ ಸದರಿ ದಿನದ ಮೊದಲ ಒಂದೂವರೆ ಗಂಟೆಯ ಅವಧಿಯಲ್ಲಿ ವಿದ್ಯಾರ್ಥಿಗಳ ವಯಸ್ಸಿಗೆ ಅನುಗುಣವಾಗಿ ಯೋಗಾಸನಗಳ ಅಭ್ಯಾಸಗಳನ್ನು ಹಾಗೂ ಪ್ರದರ್ಶನಗಳನ್ನು ಹಮ್ಮಿಕೊಳ್ಳಲು ಸೂಚಿಸಲಾಗಿದೆ. ಜೂನ್ 21ರ ಮಂಗಳವಾರದ ಪಾಠಗಳನ್ನು ಸರಿದೂಗಿಸುವ ಸಲುವಾಗಿ ಜೂನ್ 25ರ ಮಂಗಳವಾರದ0ದು ಪೂರ್ಣ ದಿನದ ಶಾಲೆಯನ್ನು ನಡೆಸಲು ಅಗತ್ಯ ಕ್ರಮ ವಹಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರು (ಪ್ರೌಢಶಿಕ್ಷಣ) ಜೂನ್ 17ರ ಜ್ಞಾಪನ ಪತ್ರದಲ್ಲಿ ತಿಳಿಸಿದ್ದಾರೆ.
garudavoice21@gmail.com 9740365719