ದಾವಣಗೆರೆಯಲ್ಲಿ ಜೂನ್ 21ಕ್ಕೆ ಜಲಯೋಗ ಪ್ರದರ್ಶನ!

ದಾವಣಗೆರೆ : ಜೂನ್ 21ರಂದು ನಗರದ ಆಫೀಸರ್ಸ್ ಕ್ಲಬ್‌ನ ಈಜುಕೊಳದಲ್ಲಿ ಬೆಳಗ್ಗೆ 11ಕ್ಕೆ ಜಲಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸುದೇವ ರಾಯ್ಕರ್ ಸುದ್ದಿಗೋಷ್ಟಿಯಲ್ಲಿ ಹೇಳಿದರು.

8ನೇ ಅಂತರಾಷ್ಟಿಯ ವಿಶ್ವ ಯೋಗ ದಿನದ ಪ್ರಯುಕ್ತ ಆಫೀಸರ್ಸ್ ಕ್ಲಬ್ ಈಜುಕೊಳದಲ್ಲಿ ಜಲಯೋಗ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ಜಲಯೋಗದಲ್ಲಿ ಅದ್ಬುತ ಪ್ರದರ್ಶನ ನೀಡುವ ಸಾಗರದ ಹರೀಶ್ ಡಿ. ನವಾತೆ ಜಲಯೋಗ ಪ್ರದರ್ಶನ ನೀಡಲಿದ್ದಾರೆ. ಸಾಗರದ ಹರೀಶ್ ಸುಮಾರು ನಾಲ್ಕು ಸಾವಿರ ಜನರಿಗೆ ಜಲಯೋಗ ಹೇಳಿ ಕೊಟ್ಟಿದ್ದಾರೆ. ದಾವಣಗೆರೆಯಲ್ಲಿ ನಡೆಯಲಿರುವ ಜಲಯೋಗದಲ್ಲಿ ಸುಮಾರು 28 ಜನರು ಜಲಯೋಗ ಮಾಡಲಿದ್ದಾರೆಂದರು.

ಜೂನ್ 21ಕ್ಕೆ ಸಂತೇಬೆನ್ನೂರಿನ ಪುಷ್ಕರಣಿಯಲ್ಲಿ ನಡೆಯಲಿರುವ ಯೋಗ ದಿನಾಚರಣೆಗೆ ದಾವಣಗೆರೆಯಿಂದ ಬೆಳಗ್ಗೆ 5ಕ್ಕೆ ನಗರದ ಮೋತಿ ವೀರಪ್ಪ ಕಾಲೇಜಿನಿಂದ 10 ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಭಾಗವಹಿಸುವವರಿಗೆ ಟೀ ಶರ್ಟ್, ಉಪಹಾರ ವ್ಯವಸ್ಥೆ ಮಾಡಲಾಗಿದೆ. ಯೋಗ ದಿನಾಚರಣೆಯಲ್ಲಿ ಸಂಸದ ಜಿ.ಎಂ ಸಿದ್ದೇಶ್ವರ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಶಾಸಕರಾದ ಮಾಡಾಳು ವಿರೂಪಾಕ್ಷಪ್ಪ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆಂದರು. ಸುದ್ದಿಗೋಷ್ಠಿಯಲ್ಲಿ ರಾಜುಬದ್ದಿ, ವೆಂಕಟೇಶ್, ಪ್ರಕಾಶ್ ಉತ್ತಂಗಿ, ಎನ್. ಪರಶುರಾಮ್, ಸಂಪದ, ಮಹಾಂತೇಶ್, ಇಂದಿರಾ ಗಂಗಾಧರ್ ಎನ್.ಸಿ., ಜಯಣ್ಣ ಬಾದಾಮಿ, ಮಾದೇಗೌಡ್ರು ಮತ್ತಿತರರು ಉಪಸ್ಥಿತರಿದ್ದರು.

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!