ವಿಜ್ಞಾನವೆಂದರೆ ಸತ್ಯದ ಅನ್ವೇಷಣೆ–ಶ್ರೀಮತಿ ಎಸ್ ಜಿ ಹುಣಸಿಕಾಯಿ

ವಿಜ್ಞಾನ

ಬಾಗಲಕೋಟೆ :ವಿಜ್ಞಾನ ವಿಷಯ ಹಲವಾರು ಪ್ರಯೋಗಗಳ ಮೂಲಕ ಪರಿಕಲ್ಪನೆಗಳನ್ನು ಮತ್ತು ಸಿದ್ಧಾಂತಗಳನ್ನು ರೂಪಿಸುವುದರ ಮೂಲಕ ಸತ್ಯದ ಅನ್ವೇಷಣೆಗೆ ಸಹಕಾರಿಯಾಗಿದೆ ಎಂದು ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಎಸ್ ಜಿ ಹುಣಸಿಕಾಯಿ ಅಭಿಪ್ರಾಯಪಟ್ಟಿದ್ದಾರೆ.

ವಿಜ್ಞಾನ
ಬಾಗಲಕೋಟೆ ತಾಲೂಕಿನ ಶಿರೂರು ಪಟ್ಟಣದ ಶ್ರೀ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಹಮ್ಮಿಕೊಂಡ ರಾಷ್ಟ್ರೀಯ ವಿಜ್ಞಾನ ದಿನಾಚರಣೆ- 2024 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲಿಯೇ ವಿಜ್ಞಾನದ ಕಡೆಗೆ ಆಸಕ್ತಿ ವಹಿಸಿ ಸಂಶೋಧನಾ ಪ್ರವೃತ್ತಿ ಬೆಳೆಸಿಕೊಂಡು ಭವಿಷ್ಯದ ವಿಜ್ಞಾನಿಗಳಾಗಬೇಕೆಂದು ಕರೆ ನೀಡಿದ ಅವರು ಶಿಕ್ಷಕರಾದವರು ಮಕ್ಕಳಿಗೆ ಅಂತಹ ಸಂಶೋಧನಾ ಪ್ರವೃತ್ತಿಗೆ ಸಹಾಯಕವಾಗುವ ಹಲವಾರು ಪ್ರಯೋಗಗಳನ್ನು ಶಾಲಾ ಹಂತದಲ್ಲಿ ಮಾಡಿ ತೋರಿಸುವುದರ ಮೂಲಕ ಅವರಲ್ಲಿ ವಿಜ್ಞಾನ ಕಲಿಕೆಗೆ ಬಗೆಗೆ ಆಸಕ್ತಿ ಮೂಡಿಸಲು ಶ್ರಮವಹಿಸಬೇಕೆಂದರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಬಾಲ ವಿಜ್ಞಾನಿ ಕುಮಾರಿ ಸಹನ ಕೊಣ್ಣೂರ್ ಕುಮಾರಿ ರೇಣುಕಾ ಹಿರೇ ಕುಂಬಿ ಹಾಗೂ ಕುಮಾರ್ ಕಾರ್ತಿಕ್ ಚೊಳಚಗುಡ್ಡ ಕುಮಾರಿ ಸಂಗಮ್ಮ ಪಟ್ಟೇದ್ ಮತ್ತು ಮಾರ್ಗದರ್ಶನ ಮಾಡಿದ ಶಿಕ್ಷಕ ಸಂಜಯ ನಡುವಿನಮನಿ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಿದರು ಮುಖ್ಯ ಅತಿಥಿಗಳಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕ ಕಾರ್ಯದರ್ಶಿಗಳಾದ ಪತ್ರಕರ್ತ ಶಂಕರ್ ಹೂಗಾರ್ ಮಾತನಾಡಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ವಿಜ್ಞಾನ ದಿನಾಚರಣೆ ಅಂಗವಾಗಿ ಮಾಡಿರುವ ವಿವಿಧ ಚಟುವಟಿಕೆಗಳನ್ನ ಪ್ರಶಂಶಿಸಿ ವಿದ್ಯಾರ್ಥಿಗಳು ಸದಾ ಕಾಲ ಅಧ್ಯಯನ ನಿರತರಾಗಿ ಹೊಸ ಸಂಶೋಧನೆಗಳ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಬೇಕೆಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಗುರುಮಾತೆ ಶ್ರೀಮತಿ ಎಲ್ ಟಿ ಪೂಜಾರ ಮಾತನಾಡಿ ಸರ್ ಸಿ ವಿ ರಾಮನ್ ಬೆಳಕಿನ ಚದುರುವಿಕೆ ಪರಿಣಾಮ ಕಂಡುಹಿಡಿದ ಈ ಶುಭದಿನ ನಿಜಕ್ಕೂ ಹೆಮ್ಮೆಯ ವಿಷಯ ಆ ನಿಟ್ಟಿನಲ್ಲಿ ವರ್ಷದುದ್ದಕ್ಕೂ ವಿಜ್ಞಾನ ವಿಷಯದಲ್ಲಿ ವಿದ್ಯಾರ್ಥಿಗಳು ಮಾಡಿದ ಸಾಧನೆಯನ್ನು ಕೊಂಡಾಡಿ ಅವರಿಗೆ ಶುಭ ಹಾರೈಸಿದರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಶಿಕ್ಷಕ ವೆಂಕಟೇಶ ಮ. ಪೂಜಾರ ಹಾಗೂ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಶ್ರೀ ರವಿಕುಮಾರ್ ಗಿರಿಜಾ ಅವರು ವಿದ್ಯಾರ್ಥಿಗಳಿಗೆ ನಗದು ಬಹುಮಾನ, ನೋಟ್ ಬುಕ್ ಪೆನ್ನುಗಳನ್ನು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ವೇದಿಕೆ ಮೇಲೆ ವಿಜ್ಞಾನ ಶಿಕ್ಷಕರಾದ ಸಂಜಯ್ ನಡುವಿನಮನಿ ಎಸ್ ಎಸ್ ಕೊಣ್ಣೂರ್ ಎಸ್ ಹೆಚ್ ಬಾರಡ್ಡಿ ಹಾಗೂ ಶ್ರೀ ಎಂ ಎಂ ಮಾಚಾ ಶ್ರೀ ಎಚ್ ಎನ್ ತಳವಾರ್ ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು ವಿದ್ಯಾರ್ಥಿಗಳು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ವಿಜ್ಞಾನ ಚಿತ್ರಗಳನ್ನು ರಂಗೋಲಿಯಲ್ಲಿ ಅರಳಿಸುವುದರ ಮೂಲಕ ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಿದರು ಹಾಗೆಯೇ ಸುಮಾರು 50ಕ್ಕೂ ಹೆಚ್ಚು ವಿಜ್ಞಾನಿಗಳ ಜೀವನ ಚರಿತ್ರೆಯನ್ನು ಹೇಳಿ ಎಲ್ಲರ ಮೆಚ್ಚುಗೆಯನ್ನು ಗಳಿಸಿ ವಿಜ್ಞಾನ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ  ಆಚರಿಸಿದರು.

ವಿಜ್ಞಾನ

Leave a Reply

Your email address will not be published. Required fields are marked *

error: Content is protected !!