ಶಾಮನೂರು ಹಾಗೂ ಶೀಬಾರ, ಬುದಾಳ್ ರೋಡ್ ಬಳಿ ಹಗಲಲ್ಲೇ ಇಸ್ಪೀಟ್ – ಜೂಜಾಟ.! ಕಣ್ಮುಚ್ಚಿ ಕುಳಿತ ದಾವಣಗೆರೆ ಪೊಲೀಸ್.!
ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಹಗಲಲ್ಲಿ ಜೂಜಾಟ ಹೆಚ್ಚುತ್ತಿದ್ದರೂ ಕೆಲ ಪೊಲೀಸರು ಮಾತ್ರ ಅದಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ಕಣ್ಮುಚ್ಚಿ ಕುಳಿತಿದ್ದಾರೆ.
ದಾವಣಗೆರೆಯ ಹೊಂಡದ ಸರ್ಕಲ್ ಮುಖಾಂತರ ಶಿಬಾರ ಬಳಿ 24*7 ದುಗ್ಗಮ್ಮ ಜಾತ್ರಯ ವಿಶೇಷ ಎಂಬಂತೆ ಬಾಕ್ಸ್ ಒಳಗೆ ಬಾಲ್ ಹಾಕಿ ಜೂಜಾಟ ನಡೆಯುತ್ತಿದೆ.
ಕೆಂಪು ಗುಂಡಿಯಲ್ಲಿ ಬಾಲ್ ಬಿದ್ದರೆ 50 ರೂಪಾಯಿಗೆ 50 ರೂಪಾಯಿ, ಬಿಳಿ ಗುಂಡಿಯಲ್ಲಿ ಬಾಲ್ ಬಿದ್ದರೆ 50 ರೂಪಾಯಿಗೆ 150 ರೂಪಾಯಿ ಹಳದಿ ಗುಂಡಿಗೆ ಬಿದ್ದರೆ ಇಂತಿಷ್ಟು ಎಂಬಂತೆ ಜೂಜಾಟ ನಡೆಯುತ್ತಿದೆ. ಶಿಬಾರ ಬಳಿ ಹಾಗೂ ಬುದಾಳ್ ರಸ್ತೆ ಬಳಿ ಇದೇ ರೀತಿ ಒಟ್ಟು 15 ರಿಂದ 20 ಕಡೆ ಹಗಲಿರುಳು ಜೂಜಾಟ ನಡೆಯುತ್ತಿದೆಯಂತೆ.
ಇನ್ನೂ ಶಾಮನೂರು ಬಳಿಯ ಅಂಬೇಡ್ಕರ್ ಭವನ ಸುತ್ತಮುತ್ತಲಿನ ಪ್ರದೇಶದಲ್ಲಿ ಇದೀಗ ಜೂಜಾಟದ ಅಡ್ಡೆಯಾಗಿ ಮಾರ್ಪಟ್ಟಿದೆ.
ಶಾಮನೂರು ಆಂಜನೇಯ ಸ್ವಾಮಿಯ ಜಾತ್ರೆ ನಿಮಿತ್ತವಾಗಿ ಇಲ್ಲಿ ಜೂಜಾಟ ನಡೆಯುತ್ತಿದೆ. ಇಲ್ಲಿಗೆ ಬಂದವರೇ ಹೇಳುವ ಪ್ರಕಾರ ಹಗಲು ರಾತ್ರಿ ಸಾಕಾಷ್ಟು ರೂಪಾಯಿ ವಹಿವಾಟು ಇಲ್ಲಿನ ಪ್ರದೇಶದ ಸ್ಥಳದಲ್ಲಿ ಜೂಜಾಟ ನಡೆಯುತ್ತದೆಯಂತೆ.
ಅಂದ ಹಾಗೆ ಈ ಮಾಹಿತಿ ಗಾಂಧಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಾಗೂ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಪೊಲೀಸರಿಗರ ಗೊತ್ತಿಲ್ಲವಂತೇನೂ ಇಲ್ಲ. ಆದರೂ ಜಾಣ ಕುರುಡು ಪ್ರದರ್ಶನ ಏಕೆ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.
ಆದಷ್ಟು ಬೇಗ ಸಂಬಂಧಿಸಿದವರು ನಿಯಂತ್ರಿಸುವಂತೆ ಸ್ಥಳೀಯರು ಕೋರಿದ್ದಾರೆ.