ಹಿಂದೆ ಸರಿದ ಸಮುದ್ರ ಹೀಗೊಂದು ವಿಚಿತ್ರ ಘಟನೆ ಕೇರಳದಲ್ಲಿ…….

ಕೇರಳದ ಪುರಕ್ಕಾಡ್‍ನಲ್ಲಿ ಸಮುದ್ರವು ಏಕಾಏಕಿ ತೀರದಿಂದ ಸುಮಾರು 50 ಮೀಟರ್ ಸಮುದ್ರ ಹಿಂದೆ ಸರಿದು ಅಚ್ಚರಿ ಉಂಟು ಮಾಡಿದೆ. ಈ ಬೆಳವಣಿಗೆಯಿಂದ ಯಾವುದೇ ಅಪಾಯ ಉಂಟಾಗಿಲ್ಲವಾದರೂ, ತೀರದ ನಿವಾಸಿಗಳಿಗೆ ನಿದ್ದೆಯಿಲ್ಲದಂತೆ ಮಾಡಿದೆ.

ರಾತ್ರಿ ವೇಳೆ ಅಲೆಗಳ ಅಬ್ಬರ ಜೋರಾಗಿರುತ್ತದೆ. ಮುಂಜಾನೆ ವೇಳೆ ಇಂತಹ ವಿದ್ಯಮಾನ ಕಂಡು ಬಂದಿದೆ. ಈ ಹಿಂದೆ ಎರಡು ಬಾರಿ ಇದೇ ರೀತಿ ನಡೆದಿತ್ತು ಎಂದು ಸ್ಥಳೀಯ ಮೀನುಗಾರರು ತಿಳಿಸಿದ್ದಾರೆ.

ಪುರಕ್ಕಾಡ್‍ನಿಂದ ದಕ್ಷಿಣಕ್ಕೆ 300 ಮೀಟರ್ ದೂರದಲ್ಲಿ ಈ ಘಟನೆ ನಡೆದಿದ್ದು, ಸಮುದ್ರ ಹಿಂದಕ್ಕೆ ಸರಿದಿರುವ ಕಾರಣ ದಡದಲ್ಲಿ ಹೂಳು ತುಂಬಿರುವುದರಿಂದ ಪುರಕ್ಕಾಡ್ ಕರಾವಳಿಗೆ ಮೀನುಗಾರಿಕಾ ದೋಣಿಗಳು ಬರಲು ಸಾಧ್ಯವಾಗುತ್ತಿಲ್ಲ.

Leave a Reply

Your email address will not be published. Required fields are marked *

error: Content is protected !!