ಶೀಘ್ರದಲ್ಲಿ ಹೊಸ ಬಡಾವಣೆ ನಿರ್ಮಿಸಿ ನಿವೇಶನ ರಹಿತರಿಗೆ ಕಡಿಮೆ ಬೆಲೆಯಲ್ಲಿ ನಿವೇಶನ ನೀಡಲಾಗುವುದು: ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್

ದಾವಣಗೆ ರೆ: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ದಾವಣಗೆರೆ ಮತ್ತು ಹರಿಹರದಲ್ಲಿ ಉತ್ತಮ ಬಡಾವಣೆ ನಿರ್ಮಿಸಿ ಕಡಿಮೆ ಬೆಲೆಯಲ್ಲಿ ನಿವೇಶನ ರಹಿತರಿಗೆ ಕೆಲವೇ ತಿಂಗಳಲ್ಲಿ ನೀಡಲಾಗುವುದಾಗಿ ದೂಡಾ ನೂತನ ಅಧ್ಯಕ್ಷ ದೇವರಮನಿ ಶಿವಕುಮಾರ್ ಭರವಸೆ ನೀಡಿದ್ದಾರೆ.
ದೂಡಾ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಸುದ್ದಿಗೋಷ್ಟಿ ಕರೆದು ಮಾತನಾಡಿರುವ ಅವರು, ಕುಂದವಾಡ ಬಳಿ 53 ಎಕರೆ ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿಯೇ ಅನುಮೋದನೆ ಸಿಗುವ ನಿರೀಕ್ಷೆ ಇದೆ. ನಂತರ ನಿವೇಶನ ರಹಿತರಿಗೆ ಹಂಚಿಕೆ ಮಾಡಲಾಗುವುದು ಎಂದರು.
ಹಲವು ವರ್ಷಗಳ ಹಿಂದೆ ಜೆ.ಹೆಚ್. ಪಟೇಲ್ ಬಡಾವಣೆ ಬಳಿಕ ಈಗ ಕುಂದುವಾಡ ಬಳಿ ಭೂಮಿ ಗುರುತಿಸಲಾಗಿದೆ. ಅದೇ ರೀತಿ ಇನ್ನೂ ಹೆಚ್ಚು ಭೂಮಿ ಖರೀದಿಸಿ ಹೊಸ ಬಡಾವಣೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಭರವಸೆ ಕೊಟ್ಟರು.
ಸಮೀಕ್ಷೆ ಅರ್ಜಿ ಸಲ್ಲಿಸಲು ಹಣ ನಿಗದಿಪಡಿಸಿರುವ ಬಗ್ಗೆ ಪ್ರಯಿಕ್ರಿಯಿಸಿದ ಅವರು, ಈಗಷ್ಟೇ ಅಧಿಕಾರ ಸ್ವೀಕರಿಸಿದ್ದೇನೆ. ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿ ಹಣ ಹಿಂತಿರುಗಿಸಲು ಅವಕಾಶವಿದ್ದರೆ ಅರ್ಜಿದಾರರಿಗೆ ಮರಳಿ ನೀಡಲಾಗುವುದು ಎಂದರು.