ಶ್ರೀರಾಮ ಸೇನೆಯಿಂದ ಸಾರ್ವಜನಿಕವಾಗಿ ಗಣೇಶ ಹಬ್ಬ ಆಚರಣೆಗೆ ಅವಕಾಶ ನೀಡುವಂತೆ ಉಪವಿಭಾಗಾಧಿಕಾರಿಗೆ ಮನವಿ

IMG-20210821-WA0012

 

ದಾವಣಗೆರೆ: ಸಾರ್ವಜನಿಕ ಗಣೇಶ ಚತುರ್ಥಿ ಆಚರಣೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಶ್ರೀರಾಮ ಸೇನೆಯಿಂದ ಶನಿವಾರ ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಕೋವಿಡ್ ಹಿನ್ನಲೆಯಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ ನಿಷೇಧ ವಿಧಿಸಿದ್ದು, ನಿಯಮ ಪಾಲನೆಗೆ ಸೂಚಿಸಿ ಮಾಲ್, ಚಿತ್ರಮಂದಿರ, ಚುನಾವಣೆ, ರಾಜಕೀಯ ಸಮಾವೇಷ, ಶಾಲಾ-ಕಾಲೇಜು ಮುಂತಾದವುಗಳು ಪ್ರಾರಂಭಕ್ಕೆ ಸರ್ಕಾರ ಅನುಮತಿಸಿದ ರೀತಿಯಲ್ಲಿಯೇ ಸಾರ್ವಜನಿಕ ಗಣೇಶ ಉತ್ಸವ ಆಚರಿಸಲು ಅನುಮತಿ ನೀಡಬೇಕೆಂದು ಶ್ರೀರಾಮ ಸೇನೆಯ ಕಾರ್ಯಕರ್ತರು ಆಗ್ರಹಿಸಿದರು.

ನೂರಾರು ವರ್ಷಗಳಿಂದ ಗಣೇಶೋತ್ಸವ ಆಚರಣೆಯಲ್ಲಿದ್ದು, ಇದನ್ನು ಸಾರ್ವಜನಿಕವಾಗಿ ಆಚರಿಸಲು ನಿರ್ಬಂದಿಸಿದರೆ ನಮ್ಮ ಧಾರ್ಮಿಕ ನಂಬಿಕೆಗೆ ಧಕ್ಕೆಯುಂಟಾಗಲಿದೆ. ಅಲ್ಲದೇ, ಈಗಾಗಲೇ ಕೋವಿಡ್ ಇಳಿಮುಖ ಕಂಡಿದ್ದು, ಜನ-ಜೀವನ ಸಾಮಾನ್ಯ ಸ್ಥಿತಿಗೆ ಮರಳಿದೆ. ಹೀಗಿದ್ದರೂ ನಿರ್ಬಂಧ ವಿಧಿಸಿರುವುದು ತರವಲ್ಲ. ಇದರಿಂದ ಹಬ್ಬವನ್ನೇ ನೆಚ್ಚಿಕೊಂಡು ವ್ಯಾಪಾರ ನಡೆಸುವ ಹಲವರ ಹೊಟ್ಟೆಯ ಮೇಲೆ ಹೊಡೆದಂತಾಗಲಿದೆ ಎಂದು ರಾಜ್ಯ ಸೇನೆ ಸಂಪರ್ಕ ಪ್ರಮುಖ ಪರಶುರಾಮ ನಡುಮನಿ ಹೇಳಿದರು.

ಹಬ್ಬ ಆಚರಣೆಗೂ ನಾಲ್ಕೈದು ತಿಂಗಳ ಮುಂಚಿತವಾಗಿಯೇ ಮೂರ್ತಿಕಾರರು ಗಣೇಶಮೂರ್ತಿಗಳನ್ನು ತಯಾರಿಸಿರುತ್ತಾರೆ. ಶಾಮಿಯಾನ, ವಿದ್ಯುತ್ ದ್ವೀಪ, ವಾದ್ಯವೃಂದ ಮುಂತಾದವರು ಈ ವೇಳೆ ವ್ಯಾಪಾರ ಚುರುಕರಾಗಿರುತ್ತದೆ. ಸರ್ಕಾರದ ಇಂತಹ ದಿಢೀರ್ ನಿರ್ಧಾರದಿಂದ ಅವರ ಸ್ಥಿತಿ ಏನಾಗಬಹುದು ಎಂದು ಪ್ರಶ್ನಿಸಿದರು.

ಆದ್ದರಿಂದ, ಕೋವಿಡ್ ನಿಯಮ ಉಲ್ಲಂಘನೆ ಆಗದಂತೆ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡುವಂತೆ ಕೋರಿದರು.

ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಮಣಿಸರ್ಕಾರ, ಪ್ರಧಾನ ಕಾರ್ಯದರ್ಶಿ ಸಾಗರ ಸೇರಿದಂತೆ ಪದಾಧಿಕಾರಿಗಳಾದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮತ್ತು ಮಾಧ್ಯಮ ಪ್ರಮುಖ್ ಡಿ.ಬಿ ವಿನೂದರಾಜ್, ಆಲೂರು ರಾಜಶೇಖರ್, ಶ್ರೀಧರ ಕರಾಟೆ ರಮೇಶ್, ಸುನೀಲ್ ವಾಲಿ, ರಾಜು, ಮಾರ್ಕಂಡಯ್ಯ, ರಘು ಶಿಬಾರ, ರಮೇಶ್ ಮತ್ತಿತರರು ಪಾಲ್ಗೊಂಡಿದ್ದರು

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!