ದಾವಣಗೆರೆಯ ಸಾವಿರಾರು ಬಡ ಬೀದಿಬದಿ ವ್ಯಾಪಾರಸ್ಥರು ನೆಮ್ಮದಿಯಿಂದ ವ್ಯಪಾರ ಮಾಡುವಂತೆ ಮಾಡಿದ್ದು ಶಿವಾನಂದ ಕಾಪಶಿ – ಮಂಜುನಾಥ್ ಕೈದಾಳೆ-

ದಾವಣಗೆರೆ:  ನಾ ಕಂಡಂತಹ ಜಿಲ್ಲಾಧಿಕಾರಿ ಅಧಿಕಾರ ವಹಿಸಿಕೊಂಡ ಮೊದಲನೆಯ ಕೆಲಸ ಜಗಳೂರು ತಾಲೂಕಿನ ಕಡುಬಡತನದ ಒಂದು ಅಂಗವಿಕಲ ಕುಟುಂಬದ ಮನೆಗೆ ಬೇಟಿ ನೀಡಿ ಅವರಿಗೆ ಮಾಸಾಷನ ಪತ್ರ ನೀಡಿದ್ದು ಪತ್ರಿಕೆಯಲ್ಲಿ ಸಣ್ಣದಾಗಿ ವರದಿಯಾಯಿತು.

ನಾನು ಕೂತುಹಲ ಮತ್ತು ಇಷ್ಟು ದಿವಸ ಈ ಕುಟುಂಬಕ್ಕೆ ಅಂಗವಿಕಲ ಮಾಸಾಶನ ಸಿಗುತ್ತಿರಲಿಲ್ಲವೇ ಎನ್ನುವ ಪ್ರಶ್ನೆಯು ಮೂಡಿತು. ಆಗ ಮಾಹಿತಿಗಾಗಿ ಜಗಳೂರಿನ ನನಗೆ ಪರಿಚಯ ವಿರುವವರನ್ನು ವಿಚಾರಿಸಿದಾಗ ತಿಳಿದದ್ದು ತುಂಬಾ ಬೇಸರವಾಯಿತು ಅಲ್ಲಿಯವರೆಗೂ ಆ ಕುಟುಂಬಕ್ಕೆ ಆ ಸೌಲಭ್ಯವೇ ದೊರಕಿಲ್ಲ ಎನ್ನುವುದು ಇಂತಹ ಸಾಮಾಜಿಕ ದುರ್ಬಲರ ಪರವಾಗಿ ಕೆಲಸ ಪ್ರಾರಂಭಿಸಿದ ಜಿಲ್ಲಾಧಿಕಾರಿಗಳು ಪ್ರಚಾರದಿಂದ ದೂರ ಎಂಬಂತೆ ಎಲೆ ಮರೆಯ ಕಾಯಿಯಂತೆ ಕೆಲಸ ನಿರ್ವಹಿಸದ್ದರು ಯಾಕೆ ಹೀಗೆ ಹೇಳುತ್ತಿದ್ದೇನೆಂದರೆ ನಮ್ಮ ಜಿಲ್ಲೆ ಕೆಲಸ ಮಾಡುವ ಜಿಲ್ಲಾಧಿಕಾರಿಗಳನ್ನು ಕಂಡಿದಿಯೋ ಇಲ್ಲವೋ ಗೊತ್ತಿಲ್ಲ ಆದರೆ ಹೀರೋ ತರಹ ಡೈಲಾಗ್ ಹೊಡೆದು ರಾಜಕಾರಣಿಗಳಿಗಿಂತಲೂ ಹೆಚ್ಚು ಪ್ರಚಾರ ಗಿಟ್ಟಿಸಿಕೊಳ್ಳುವವರನ್ನು ಕಂಡಿದೆ ಅದಕ್ಕೆ ಶಿವಾನಂದ ಕಾಪಶಿಯವರು ಅಪವಾದದಂತೆ ಕಾರ್ಯನಿರ್ವಹಿಸಿದ್ದು ಶ್ಲಾಘನೀಯ.

ಉದಾಹರಣೆ ಗೆ ತಮ್ಮ ಕಛೇರಿಯ ಮುಂಬಾಗ ಅಂಟಿಸಿದ ಸೂಚನಾ ಫಲಕ ಸಾರ್ವಜನಿಕರು ಹಾಗೂ ಸಂಘಸಂಸ್ಥೆಗಳ ಖಾಸಗಿ ಕಾರ್ಯಕ್ರಮಗಳಿಗೆ ರಜಾ ದಿನಗಳನ್ನು ಹೊರತುಪಡಿಸಿ ಕೆಲಸದ ಅವಧಿಯಲ್ಲಿ ಭಾಗವಹಿಸುವುದಿಲ್ಲ ಎಂದು. ನಾನು ಇನ್ನೊಂದು ಗಮನಿಸಿದ್ದು ಕೆಲವು ಜಿಲ್ಲಾಧಿಕಾರಿಗಳು ಸಾಮಾನ್ಯರನ್ನು ಒಂದುತರಹ ಶ್ರೀಮಂತರನ್ನು ಒಂದು ತರಹ ಕಾಣುತ್ತಾರೆ ಆದರೆ ಶಿವಾನಂದ ಕಾಪಶಿಯವರು ಎಲ್ಲರನ್ನು ಅವರಿರುವ ಕಡೆಯೇ ಬಂದು ಮನವಿ ಸ್ವೀಕರಿಸಿ ಅದರಲ್ಲೂ ಬಡವರು ಹಳ್ಳಿಯವರೆಂದರೆ ವಿಶೇಷವಾಗಿ ಕಾಳಜಿವಹಿಸಿ ಬಗೆಹರಿಸಿದ್ದನ್ನು ನಾನು ನಮ್ಮ ಕಾರ್ಮಿಕರ ಸಮಸ್ಯೆಗಳಿಗಾಗಿ ಮನವಿ ನೀಡಲು ತೆರಳಿದಾಗ ಗಮನಿಸಿದ್ದೇನೆ.

ಇನ್ನೊಂದು ದಿವಸ ನಾವು ಬೀದಿ ಬದಿ ವ್ಯಾಪಾರಸ್ಥರ ಸಮಸ್ಯೆಗಳನ್ನು ತೆಗೆದುಕೊಂಡು ಹೋಗಿದ್ದೆವು ಆ ಸಂದರ್ಭದಲ್ಲಿ ಒಬ್ಬ ಗುತ್ತಿಗೆದಾರ ಅನ್ನಿಸುತ್ತದೆ ಒಳಗೆ ಹೋಗಲು ಪ್ರಯತ್ನಿಸುತ್ತಿದ್ದರು ಅಲ್ಲಿರುವ ಅಟೆಂಡರ್ ಹೇಳಿದರು ಸಾಹೇಬರು ಪ್ರತ್ಯೇಕವಾಗಿ ಈ ತರಹ ಬೇಟಿ ಮಾಡುವುದಿಲ್ಲ ಅದು ಗುತ್ತಿಗೆದಾರರು ಎಂದರೆ ದೂರನೆ ಇಡುತ್ತಾರೆ ಎಂದರೂ ಕೇಳದೆ ಪ್ರಭಾವ ಬಳಸಿ ಒಳಗೆ ನಗ್ಗಿದರು ಹೋದಷ್ಟೆ ವೇಗವಾಗಿ ಮರಳಿ ಬಂದರು ಗುತ್ತಿಗೆದಾರ ಆಗ ಅಟೆಂಡರ್ ಹೇಳಿದ್ದು ನಿಜವೆಂದು ಸಾಬೀತು ಆಯಿತು,

ತುಂಬಾ ಮುಖ್ಯವಾದ ವಿಷಯವೆಂದರೆ ನಾವು ಯುಬಿಡಿಟಿ ಕಾರ್ಮಿಕರ  ಹೋರಾಟದ ಮೆರವಣಿಗೆ ಮೂಲಕ ತೆರಳಿ ಮನವಿ ಸಲ್ಲಿಸಿದ್ದೆವು ಮನವಿ ಆಲಿಸಿ ಸಂಬಂಧ ಪಟ್ಟವರನ್ನು ಕರೆಸಿ ಸಂಜೆ ಮಾತನಾಡುತ್ತೇನೆ ಎಂದಿದ್ದರು ನಾನೂ ಕೂಡ ಎಲ್ಲಾ ಅಧಿಕಾರಿಗಳಂತೆ ಸಾಗು ಹಾಕುವ ಕೆಲಸವೆಂದು ಅಂದುಕೊಂಡೆ ಆದರೆ ಅದು ಆಶ್ಚರ್ಯ ಎಂಬಂತೆ ತುಂಬಾ ತಿಂಗಳಾದರೂ ಈಗಲೂ ನನಗೆ ಚೆನ್ನಾಗಿ ಜ್ಞಾಪಕವಿದೆ ಸಂಜೆ 5:46 ನಿಮಿಷಕ್ಕೆ ಸ್ವತಃ ಅವರೇ DC Davanagere ಎನ್ನುವ ಕರೆ ಬಂತು ಪ್ರಾಂಶುಪಾಲರ ಬಳಿ ಮತ್ತು ವಿಟಿಯು ಗೆ ನಿರ್ದೇಶನ ನೀಡಿರುವ ಕುರಿತು ತಿಳಿಸಿದರು.

ಇದೇ ತರಹ ಇನ್ನೆರಡು ಆಗಿದೆ ನನ್ನ ಹೋರಾಟದ ಇತಿಹಾಸದಲ್ಲಿ ಒಬ್ಬ ಜಿಲ್ಲಾಧಿಕಾರಿ ಸಂಬಂಧಿಸಿದವರನ್ನು ಕರೆದು ಮಾತನಾಡಿ ತಿಳಿಸುತ್ತೇವೆ ಎಂದು ಕರೆ ಮಾಡಿ ತಿಳಿಸಿದ್ದು ಇದೇ ಮೊದಲು. ವರ್ಗಾವಣೆ ಆಗುವ ಒಂದು ದಿನದ ಮೊದಲು ಪತ್ರಿಕೆಯಲ್ಲಿ ಬಂದಿದ್ದು ನೋಡಿದೆ,  ಹರಿಹರ ತಾಲೂಕಿನಲ್ಲಿ ಗೊಡೆಕುಸಿದು ಒಂದು ವರ್ಷದ ಹಸು ಕೂಸು ತೀರಿಹೋಗಿದ್ದಕ್ಕೆ ಖುದ್ದಾಗಿ ಶಿವಾನಂದ ಕಾಪಶಿ ಅವರು ತೆರಳಿ ಪರಿಹಾರ ನೀಡಿದ್ದು ಅವರ ಬಡ ಜನರ ಕಾಳಜಿಯ, ಜಿಲ್ಲೆಯ ಕೊನೆ ಸ್ಪಂದನೆ ಎಂದು, ಇಂತಹ ಒಬ್ಬ ಒಳ್ಳೆಯ ಅಧಿಕಾರಿ ಅವಧಿಗೂ ಮುನ್ನವೇ ವರ್ಗಾವಣೆ ಮಾಡಿದ್ದು ಹೊಸ ಸರ್ಕಾರಕ್ಕೆ ಒಳ್ಳೆಯ ಗೌರವವಲ್ಲ ಮತ್ತು ಇಂತಹ ಕಾಳಜಿಯುಳ್ಳ ಅಧಿಕಾರಿಗಳೇ ವಿರಳವಿರುವ ಇಂತಹ ಕಾಲದಲ್ಲಿ ಅವರ ನೈತಿಕತೆ ಕುಗ್ಗಿಸುವ ಕೆಲಸವಾಗಬಾರದು.

ದಾವಣಗೆರೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರಿಂದ ಗುತ್ತಿಗೆದಾರರ ಜಕಾತಿಯನ್ನು ಮನ: ಬಂದಂತೆ ವಸೂಲಿ ಮಾಡುತ್ತಿದ್ದರು ಗುತ್ತಿಗೆಯನ್ನು ನೀಡದೇ ನೇರವಾಗಿ ಪಾಲಿಕೆಯಿಂದಲೇ ಕನಿಷ್ಟ ಜಕಾತಿ ಪಡೆಯುವಂತೆ ಮಾಡಿ ದಾವಣಗೆರೆಯ ಸಾವಿರಾರು ಬಡ ಬೀದಿಬದಿ ವ್ಯಾಪಾರಸ್ಥರು ನೆಮ್ಮದಿಯಿಂದ ವ್ಯಪಾರ ಮಾಡುವಂತೆ ಮಾಡಿದ್ದು ಮಾನ್ಯ ಜಿಲ್ಲಾಧಿಕಾರಿಗಳು ಶಿವಾನಂದ ಕಾಪಶಿ ಹಾಗೂ ಮಹಾನಗರ ಪಾಲಿಕೆ ಆಯುಕ್ತೆ ರಣುಕಾ ಮೆಡಂ ರವರು.

ಧನ್ಯವಾದಗಳೊಂದಿಗೆ
ಮಂಜುನಾಥ್ ಕೈದಾಳೆ
ಸಾಮಾಜಿಕ ಹೋರಾಟಗಾರು

Leave a Reply

Your email address will not be published. Required fields are marked *

error: Content is protected !!