ಗೃಹಲಕ್ಷ್ಮಿ ಯೋಜನೆ, ನೋಂದಣಿ ಕೇಂದ್ರಕ್ಕೆ ಡಾ. ಪ್ರಭಾ ಮಲ್ಲಿಕಾರ್ಜುನ್ ಭೇಟಿ.
ದಾವಣಗೆರೆ: ಕಾಂಗ್ರೆಸ್ ಪಕ್ಷದ ಮಹತ್ವಕಾಂಕ್ಷಿ ಯೋಜನೆಯಾದ, ಕುಟುಂಬದ ಯಜಮಾನಿಕೆ ಪ್ರತಿ ತಿಂಗಳು 2000 ನೀಡುವ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಕೇಂದ್ರಗಳಿಗೆ ಡಾ. ಪ್ರಭಾ ಮಲ್ಲಿಕಾರ್ಜುನ್ ಭೇಟಿ ನೀಡಿ, ನೋಂದಣಿ ಕಾರ್ಯವನ್ನು ವೀಕ್ಷಿಸಿ ನೆರೆದಿದ್ದ ಮಹಿಳೆಯರಿಗೆ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.
ನೋಂದಣಿ ಕೇಂದ್ರಗಳು ಕಡಿಮೆ ಇರುವ ಕಾರಣ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಲು ತೊಂದರೆಯಾಗುತ್ತಿದ್ದು, ಶೀಘ್ರದಲ್ಲಿಯೇ ನೋಂದಣಿ ಕೇಂದ್ರಗಳ ಹೆಚ್ಚಳ ಹಾಗೂ ಪ್ರಜಾ ಪ್ರತಿನಿಧಿಗಳನ್ನು ನೇಮಿಸುವ ಮೂಲಕ ಅರ್ಜಿದಾರರು ತಮ್ಮ ಮನೆಯಲ್ಲಿಯೇ ಅರ್ಜಿ ಸಲ್ಲಿಸುವ ವ್ಯವಸ್ಥೆ ಮಾಡಲಾಗುತ್ತಿದ್ದು, ಅರ್ಜಿ ಸಲ್ಲಿಕೆ ಉಚಿತವಾಗಿದೆ, ಯಾರು ಹಣ ನೀಡಬಾರದಾಗಿ ತಿಳಿಸಿ, ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ಈ ಯೋಜನೆ ದೊರಕಿಸುವುದು ಸರ್ಕಾರದ ಉದ್ದೇಶವಾಗಿದ್ದು, ಯಾರು ಭಯಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.