ಪುಟ್ಟ ಪೋರನ ಪ್ರತಿಭೆ ಅಪಾರ.! ಇತನಿಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಫುಲ್ ಖುಷ್.!

ದಾವಣಗೆರೆ: ಜೆಸಿಬಿ ಯಂತ್ರವನ್ನು ಕಟ್ಟಿಗೆ ಮತ್ತು ರದ್ದಿಯಾದ ಪ್ಲಾಸ್ಟಿಕ್ ಬುಟ್ಟಿಯಿಂದ ಹಳ್ಳಿಯ ಬಾಲಕನೋರ್ವ ತಯಾರಿಸಿದ್ದು ಆ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ಹುಡುಗನ ಜಾಣ್ಮೆಗೆ ಮೆಚ್ಚುಗೆಯ ಮಹಾಪೂರವೆ ಹರಿದುಬಂದಿದೆ!
ಈ ಬಾಲಕ ಯಾರು, ಎಲ್ಲಿಯವನು ಎಂಬುದು ಇದುವರೆಗೂ ತಿಳಿದುಬಂದಿಲ್ಲ. ಆದರೆ, ಆತನ ಬುದ್ಧಿವಂತಿಕೆಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಈಗಿನ ಮಕ್ಕಳೊ ಮೂರೊತ್ತು ಮೊಬೈಲ್ ದಾಸರಾಗಿರುತ್ತಾರೆ. ಇಲ್ಲವೇ ಕ್ರಿಕೇಟ್, ಸೇರಿದಂತೆ ಇತರೆ ಕ್ರೀಡೆಗಳಲ್ಲಿ ತೊಡಗಿಕೊಂಡಿರುತ್ತಾರೆ. ಆದರೆ, ಈ ಬಾಲಕ ಕೇವಲ ಕಟ್ಟಿಗೆಯನ್ನು ಉಪಯೋಗಿಸಿ, ಜೆಸಿಬಿ ಮಾದರಿಯ ಯಂತ್ರವನ್ನು ತಯಾರಿಸಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಈ ಪುಟ್ಟ ಪೋರ ಸುಮಾರು ಹತ್ತು ವರುಷಕ್ಕೆ ಈ ತರಹದ ಜ್ಞಾನ ಹೊಂದಿದ್ದು, ಮುಂದೆ ಈತನಿಂದ ದೇಶಕ್ಕೆ ಕೊಡುಗೆ ನೀಡುವ ಉಪಕರಣಗಳನ್ನು ತಯಾರಿಸುತ್ತಾನೆಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತದೆ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತದೆ. ಒಟ್ಟಿನಲ್ಲಿ ಈ ಪೋರನ ಉಜ್ವಲ ಭವಿಷ್ಯಕ್ಕಾಗಿ ಗರುಡಾವಾಯ್ಸ್ ಶುಭಕೋರುತ್ತದೆ.