ಜನವರಿ 20,21 ಹಾಗೂ 22 ರವರೆಗೆ ಸೋಮೇಶ್ವರ ವಿದ್ಯಾಲಯದಲ್ಲಿ ಸೋಮೇಶ್ವರೋತ್ಸವ
ದಾವಣಗೆರೆ: ಇದೇ ಜನವರಿ 20,21ಹಾಗೂ 22ರವರೆಗೆ ನಗರದ ಸೋಮೇಶ್ವರ ವಿದ್ಯಾಲಯದ ಆವರಣದಲ್ಲಿ ಸಂಜೆ 5.45ಕ್ಕೆ ಸೋಮೇಶ್ವರರೋತ್ಸವ-2023 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲೆ ಎನ್.ಪ್ರಭಾವತಿ ತಿಳಿಸಿದರು.
ಸುದ್ದಿಗೋಷ್ಠಯಲ್ಲಿ ಮಾತನಾಡಿದ ಅವರು, ಜ.20ರ ಶುಕ್ರವಾರ ಸೋಮೇಶ್ವರರೋತ್ಸವಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಚಾಲನೆ ನೀಡಿಲಿದ್ದು, ಸಿದ್ಧರ ಬೆಟ್ಟದ ಶ್ರೀವೀರಭದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಮುಖ್ಯತಿಥಿಗಳಾಗಿ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್.ಶಿವಯೋಗಿಸ್ವಾಮಿ, ಸಾ.ಕಿ.ಇಲಾಖೆಯ ಉಪನಿರ್ದೇಶಕ ಜಿ.ಆರ್.ತಿಪ್ಪೇಶಪ್ಪ ಆಗಮಿಸಲಿದ್ದಾರೆ. ಕಕಾನಿಪ ಅಧ್ಯಕ್ಷ ಮಂಜುನಾಥ ಏಕಬೋಟೆ ಹಾಗೂ ವೈಧ್ಯರಾದ ಡಾ.ವಿದ್ಯಾವಿ.ಡಾ.ವಿ.ಸಿದ್ದೇಶ್ವರನ್ ಅವರಿಗೆ ಸೋಮೇಶ್ವರ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಜ. 21 ಶನಿವಾರ ಹಮ್ಮಿಕೋಂಡಿರುವ ಪ್ರಶಸ್ತಿ ಪ್ರಧಾನ. ಸಮಾರಂಭದ ಸಾನ್ನಿಧ್ಯವನ್ನು ಶ್ರೀರಾಮಕೃಷ್ಣಾಶ್ರಮದ ಅಧ್ಯಕ್ಷ ಶ್ರೀಶಾರದೇಶಾನಂದ ಸ್ವಾಮಿಗಳು ವಹಿಸಲಿದ್ದಾರೆ. ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಗೌರವ ಪುರಸ್ಕಾರ ಕಾರ್ಯಕ್ರಮವನ್ನು ನಡೆಸಿಕೊಳ್ಳಿಲಿದ್ದಾರೆ. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಪ್ರತಿಭಾ ಪುರಸ್ಕರ ಕಾರ್ಯಕ್ರಮವನ್ನು ನಡೆಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಧರ್ಮಸ್ಥಳದ ಅನ್ನ ದಾಸೋಹ ಭವನದ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಸಾದ್ ಆಗಮಿಸಲಿದ್ದು, ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ಉಪಸ್ಥಿತರಿರುವರು.
ನಿಟುವಳ್ಳಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಕೆ.ಟಿ.ಜಯಪ್ಪ ಅವರಿಗೆ ಶಿಕ್ಷಣ ಸಿರಿ ಪುರಸ್ಕಾರ, ಉದ್ಯಮಿ ಬಕ್ಕೇಶ್ ಹಾಗೂ ಸಾಮಾಜಿಕ ಕಾರ್ಯಕರ್ತೆ ಗೀತಾ ಬಾಲಚಂದ್ರ ಭಟ್ ಅವರಿಗೆ ಸೋಮೇಶ್ವರ ಸಿರಿ ಪುರಸ್ಕಾರ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿರುವ ನಿಧಿಎಸ್.ನಾರ‍್ಗೆ ಸಾಧನ ಸಿರಿ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು.
ಜ.22 ಭಾನುವಾರ ನಡೆಯಲಿರುವ ಸಂಗೀತೋತ್ಸವ ಸಂಗೀತೋತ್ಸವ ಮತ್ತು ಸಮಾರಂಭದ ಸಾನ್ನಿಧ್ಯವನ್ನು ಕಣ್ವಗುಪ್ಪಿ ಗವಿಮಠದ ಶ್ರೀಡಾ.ನಾಲ್ವಡಿ ಶಾಂತಲಿAಗ ಸ್ವಾಮಿಗಳು ವಹಿಸಲಿದ್ದಾರೆ. ಸಮಾರೋಪ ಭಾಷಣವನ್ನು ಮತ್ತೂರು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕ ಎಸ್.ಎ.ರವೀಂದ್ರನಾಥ್, ಅಂಕಣಕಾರ ಎಸ್.ಎ.ಮಣಿಕಾಂತ್, ಅಂತಾರಾಷ್ಟ್ರೀಯ ಈಜು ಪಟು ಕೆ.ಎಸ್.ವಿಶ್ವಾಸ್ ಆಗಮಿಸಲಿದ್ದಾರೆ. ಹಿರಿಯ ಪತ್ರಿಕಾ ಛಾಯಾಗ್ರಾಹಕ ಎಲ್.ವಿವೇಕಾನಂದ ಅವರಿಗೆ ಸೋಮೇಶ್ವರ ಸಿರಿ ಪುರಸ್ಕಾರ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 621 ಅಂಕ ಗಳಿಸಿದ ಡಿ.ಆರ್.ಧೀರಜ್‌ಗೆ ಸಾಧನ ಸಿರಿ ಪುರಸ್ಕಾರ ನೀಡಲಾಗುವುದು. ನಂತರ ಗಾಯಕರಾದ ರಾಜೇಶ್ ಕೃಷ್ಣನ್ ಹಾಗೂ ಎಂ.ಡಿ.ಪಲ್ಲವಿ ಅವರ ತಂಡದಿAದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.