ಸೊರಬ :ಉಳವಿ ಕೆಇಬಿ ಲೈನ್‌ಮ್ಯಾನ್ ರವಿ ಚೌವ್ಹಾಣ್ ವಿದ್ಯುತ್ ಅವಘಡದಲ್ಲಿ ಸಾವು! ಉಳವಿ ಸೆಕ್ಷನ್ ಅಧಿಕಾರಿಗಳಿಂದ ಗಿರೀಶ್ ಡಿ.ಆರ್ ಉಪಸ್ಥಿತಿಯಲ್ಲಿ ಧನಸಹಾಯ

1..

ದಾವಣಗೆರೆ: ಯಾಕಾದ್ರೂ ನಿನ್ನನ್ನ ಕೆಲಸಕ್ಕೆ ಕಳುಹಿಸಿದ್ನೋ ಮಗ, ಕೂಲಿ ನಾಲಿ ಮಾಡಿ ಹೊಟ್ಟೆ ತುಂಬಿಸ್ಕೋ ಬಹುದಿತ್ತು. ನಿನ್ನನ್ನು ಇನ್ಮುಂದೆ ಎಲ್ಲಿ ಹುಡುಕಲೋ ಮಗನೇ… ಹೀಗೆಂದು ಬಿಕ್ಕಿ ಬಿಕ್ಕಿ ಅಳುವ ಆ ಆರ್ತನಾದ ನೋಡುಗರ ಜೀವ ಹಿಂಡುವಂತಿತ್ತು. ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕು ವ್ಯಾಪ್ತಿಯ ಉಳವಿಯಲ್ಲಿ ಸುಮಾರು ಆರು ವರ್ಷಗಳಿಂದ ಕೆಇಬಿ ಲೈನ್‌ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಗಜೇಂದ್ರಗಡ ತಾಲೂಕಿನ ರಾಜೂರು ತಾಂಡಾದ ರವಿ ಚೌವ್ಹಾಣ್ ಎಂಬುವರು ಮಾ. 25ರ ಮಧ್ಯಾಹ್ನ 1.30ಕ್ಕೆ ಸೊರಬ ತಾಲ್ಲೂಕಿನ ಭದ್ರಾಪುರ ಗ್ರಾಮದಲ್ಲಿ ವಿದ್ಯುತ್ ಕೆಲಸದಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಮಗನನ್ನು ಕಳೆದುಕೊಂಡ ತಾಯಿಯ ಮಾತುಗಳಿವು.

ಈ ವಿಚಾರವನ್ನು ತಿಳಿದು ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಗಿರೀಶ್ ಡಿ.ಆರ್ ಸಾಗರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥ ರಿಗೆ ಆತ್ಮಸ್ಥೆರ್ಯ ತುಂಬುವ ಕೆಲಸ ಮಾಡಿದರು. ರವಿ ಚೌವ್ಹಾಣ್ ಅವರ ಸಾವು ಇಡೀ ಕುಟುಂಬ ವರ್ಗದವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಉಳವಿ ಸೆಕ್ಷನ್ ಅಧಿಕಾರಿಗಳಾದ ಪ್ರವೀಣ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಉಮೇಶ್, ಕೆಇಬಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀಧರ್ ಹಾಗೂ ಕೆಇಬಿ ನೌಕರರ ವರ್ಗದವರು ಸೇರಿ ಸ್ಥಳದಲ್ಲಿಯೇ 2 ಲಕ್ಷ ರೂಪಾಯಿಗಳನ್ನು ಹೊಂದಿಸಿ ಕುಟುಂಬ ವರ್ಗದವರಿಗೆ ನೀಡಿದರು.

ಅಷ್ಟೇಅಲ್ಲದೆ ಮೃತರಾದ ರವಿ ಚೌಹಾಣ್ ಅವರ ಪತ್ನಿಗೆ ಸರ್ಕಾರಿ ಉದ್ಯೋಗ ಮತ್ತು ಸರ್ಕಾರದ ವತಿಯಿಂದ ಪರಿಹಾರಧನವನ್ನು ತಕ್ಷಣವೇ ನೀಡುವಂತೆ ರಾಜ್ಯ ಸರ್ಕಾರದ ಇಂಧನ ಸಚಿವರಾದ ಸುನಿಲ್ ಕುಮಾರ್ ಅವರಿಗೆ ದೂರವಾಣಿ ಸಂಪರ್ಕದ ಮೂಲಕ ತಿಳಿಸಿ ಘಟನೆಯ ಬಗೆಗೆ ಮಾಹಿತಿ ನೀಡುವ ಕಾರ್ಯವನ್ನು ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಗಿರೀಶ್ ಡಿ.ಆರ್ ಮಾಡಿದರು. ಆನಂತರ ಮೃತರ ಗ್ರಾಮವಾದ ಗಜೇಂದ್ರಗಡದ ರಾಜೂರು ತಾಂಡಾಕ್ಕೆ ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡಿ ಮೃತದೇಹವನ್ನು ಕಳುಹಿಸಿಕೊಡಲಾಯಿತು.

ಈ ಸಂದರ್ಭದಲ್ಲಿ ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷರಾದ ಗಿರೀಶ್ ಡಿ.ಆರ್, ಶಿವಮೊಗ್ಗ ಮೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮಂಜಾನಾಯ್ಕ, ಶಿವಮೊಗ್ಗ ಬಿಟಿವಿ ನ್ಯೂಸ್ ವರದಿಗಾರರಾದ ಅನಿಲ್ ಕುಮಾರ್ ನಾಯಕ್, ಬಂಜಾರ ರಕ್ಷಣಾ ವೇದಿಕೆಯ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಉಮಾಮಹೇಶ್ವರ ನಾಯಕ್, ಬಂಜಾರ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾದ ಬಾಲು, ಸುನಿಲ್ ನಾಯಕ್ ಹಾಗೂ ಬಂಜಾರ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಹನಿ ಹನಿ ಗೂಡಿದರೆ ಹಳ್ಳ ಎಂಬಂತೆ ಉಳವಿ ಸೆಕ್ಷನ್ ಅಧಿಕಾರಿಗಳು, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಕೆಇಬಿ ನೌಕರರ ಸಂಘದ ಅಧ್ಯಕ್ಷರು, ಕೆಇಬಿ ನೌಕರರ ವರ್ಗದವರು ಸೇರಿ ಸ್ಥಳದಲ್ಲಿಯೇ 2 ಲಕ್ಷ ರೂಪಾಯಿಗಳನ್ನು ಹೊಂದಿಸಿ ಕುಟುಂಬ ವರ್ಗದವರಿಗೆ ನೀಡಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!