ಡಿಡಿ ಪ್ರತಿಮಾ ಹತ್ಯೆ ಪ್ರಕರಣ: ತನಿಖೆ ಬಳಿಕ ಸತ್ಯ ಬಹಿರಂಗ: ಎಸ್ ಎಸ್ ಮಲ್ಲಿಕಾರ್ಜುನ
ದಾವಣಗೆರೆ, ನ.04: ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಡಿಡಿ ಪ್ರತಿಮಾ ಹತ್ಯೆ ಪ್ರಕರಣದ ಬಗ್ಗೆ ಹಲವು ಅನುಮಾನಗಳು ಮೂಡಿದ್ದು, ತನಿಖೆ ನಡೆಯುತ್ತಿದೆ. ಹೀಗಾಗಿ ಈ ಸಾವಿನ ಬಗ್ಗೆ ತನಿಖೆ ಆದ ಮೇಲೆ ಸ್ಪಷ್ಟವಾಗಿ ಹೇಳಲಾಗುವುದು ಎಂದು ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ (ss mallikarjun) ಹೇಳಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಪ್ರತಿಮಾ ಪ್ರಕರಣದ ಬಗ್ಗೆ ಹತ್ತಾರ ಸಂಶಯಗಳಿವೆ. ಕೆಲವರು ಕೌಟುಂಬಿಕ ಕಾರಣ, ಹಲವರು ಇಲಾಖೆ ವಿಚಾರ, ಮತ್ತೆ ಕೆಲವರು ಇಲಾಖೆ ಕಾರ್ ಚಾಲಕನನ್ನ ಸೇವೆಯಿಂದ ಬಿಡುಗಡೆ ಗೊಳಿಸಿದ್ದರು ಎನ್ನುತ್ತಾರೆ. ಹೀಗೆ ಹಲವಾರು ವಿಚಾರಗಳು ಇವೆ. ಈ ಎಲ್ಲ ವಿಚಾರಗಳ ಬಗ್ಗೆ ತನಿಖೆ ನಡೆಯುತ್ತಿದೆ. ಅಕ್ರಮ ಗಣಿಗಾರಿಕೆ ಬಗ್ಗೆ ಆರೋಪ ಕೇಳಿ ಬಂದಿದೆ. ಹೀಗಾಗಿ ಈ ಸಾವಿನ ಬಗ್ಗೆ ತನಿಖೆ ಆದ ಮೇಲೆ ಸ್ಪಷ್ಟವಾಗಿ ಹೇಳಲಾಗುವುದು ಎಂದು ಹೇಳಿದರು.
ಅಧಿಕಾರಿಗಳಿಗೆ ಭದ್ರತೆ ಇಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಎಲ್ಲರಿಗೂ ಪೊಲೀಸ್ ಭದ್ರತೆ ಕೊಡಲು ಆಗಲ್ಲ, ಈ ಪ್ರಕರಣವೇ ಬೇರೆ ತನಿಖೆ ಆಗಲಿ ಎಂದು ಹೇಳಿದರು.
ದಾವಣಗೆರೆಯಲ್ಲಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಪ್ರತಿಕ್ರಿಯಿಸಿ ಹೆಚ್ ಡಿಕೆ ಗೆ ಟಾಂಗ್ ನೀಡಿದ್ದು, ನಿನ್ನೇ ನಡೆದ ಮೀಟಿಂಗ್ ಗೆ ನಾನು ಹೋಗಿರಲಿಲ್ಲ ನಾಳೆ ಕ್ಯಾಬಿನೆಟ್ ಇದೆ ಹೋಗ್ತಿನಿ ನಿಮಗೆ ಯಾಕ್ ಬೇಕು ಅದೆಲ್ಲ ನಮ್ ಫ್ಯಾಮಿಲಿ(ಪಕ್ಷ) ಮ್ಯಾಟರ್, ಡಿಕೆಶಿ ಸಿಎಂ ಆದ್ರೆ ಜೆಡಿಎಸ್ ಶಾಸಕರು ಬೆಂಬಲ ಕೊಡ್ತಿವಿ ಅಂತ ಈಗ ಹೇಳ್ತಾರೆ. ಬಿಜೆಪಿಯವರು ಕೂಡ ಹೇಳ್ತಾರೆ ಅದೆಲ್ಲ ಅಲ್ಲ ನಮ್ಮ ಫ್ಯಾಮಿಲಿ ವಿಚಾರ ನಾವು ಸರಿ ಮಾಡಿಕೊಳ್ಳುತ್ತೇವೆ ಇವರ್ಯಾರು ಎಂದು ಪ್ರಶ್ನಿಸಿದರು.
renukacharya; ಡಿ.ಜಿ.ಶಾಂತಗೌಡರ ವಿರುದ್ಧ ಕೆಂಡ ಕಾರಿದ ರೇಣುಕಾಚಾರ್ಯ
ಗ್ಯಾರೆಂಟಿಯಿಂದ ಯಾವುದೇ ಅನುದಾನ ಬರುತ್ತಿಲ್ಲ ಎಂಬುದು ಸುಳ್ಳು. ನಾವು ಡಿಸೆಂಬರ್ ವರೆಗೂ ಸ್ವಲ್ಪ ನಿಧಾನವಾಗಿ ಹೋಗುತ್ತಿದ್ದೇವೆ ಅಷ್ಟೇ ಎಂದು ಹೇಳಿದರು.
ಸಂಸದ ಜಿಎಂ ಸಿದ್ದೇಶ್ವರ್ ವಿರುದ್ದ ಕಿಡಿಕಾರಿದ ಅವರು, ಬಿಜೆಪಿ ಬರ ಅಧ್ಯಯನ ತಂಡ ರಚನೆ ಹಿನ್ನಲೆಗೆ ಪ್ರತಿಕ್ರಿಯಿಸಿದ್ದು, ಬಿಜೆಪಿಗರಿಗೆ ಕೆಲಸ ಇಲ್ಲ ಅನ್ಸುತ್ತೆ. ಕೇಂದ್ರಕ್ಕೆ ಹೋಗಿ ಬರ ಪರಿಹಾರ ತೆಗೆದುಕೊಂಡು ಬರಲಿ. ಇವರು ತೆಗೆದುಕೊಂಡು ಬಂದರೆ ದಾವಣಗೆರೆಯ ಹೈಸ್ಕೂಲ್ ಫಿಲ್ಡ್ ನಲ್ಲಿ ದೊಡ್ಡದಾಗಿ ಸನ್ಮಾನ ಮಾಡ್ತಿವಿ ಎಂದ ಅವರು, ಕೇಂದ್ರ ಸರ್ಕಾರದ ವೈಫಲ್ಯವನ್ನು ನಮ್ಮ ಮೇಲೆ ಹಾಕ್ತಾರೆ, ನಮ್ಮ ಸಂಸದರು ಮೋದಿ ಮುಂದೆ ಮಂಡಿಯೂರಿ ಕೂರುತ್ತಾರೆ. ಕೈ ಕಟ್ಟಿ ನಿಂತು ಪರಿಹಾರದ ಹಣ ಕೇಳಲಿ ಎಂದು ಹೇಳಿದರು.