renukacharya; ಡಿ.ಜಿ.ಶಾಂತಗೌಡರ ವಿರುದ್ಧ ಕೆಂಡ ಕಾರಿದ ರೇಣುಕಾಚಾರ್ಯ
ಹೊನ್ನಾಳಿ( ದಾವಣಗೆರೆ)-ಶಾಸಕರಾಗಿ ಆರು ತಿಂಗಳಿಂದ ಹೊನ್ನಾಳಿ-ನ್ಯಾಮತಿ ಅವಳಿ ಕ್ಷೇತ್ರಕ್ಕೆ ಎಷ್ಟು ಅನುದಾನವನ್ನು ತಂದಿದ್ದೀರಿ ಎಂಬುದನ್ನು ಕುರಿತು ಬಹಿರಂಗ ಚರ್ಚೆಗೆ ಬರುವಂತೆ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ (Renukacharya) ಅವರು ಶಾಸಕ ಡಿ.ಜಿ.ಶಾಂತನಗೌಡರಿಗೆ ಸವಾಲು ಹಾಕಿದ್ದಾರೆ.
ಕ್ಷೇತ್ರದಲ್ಲಿ ಬರ ಆಧ್ಯಯನ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಶಾಸಕನಾಗಿದ್ದ ವೇಳೆ ಅವಳಿ ಕ್ಷೇತ್ರಕ್ಕೆ ನಾಲ್ಕೂವರೆ ಸಾವಿರ ಕೋಟಿ ಅನುದಾಣ ತಂದಿದ್ದೆಘಿ. ಉಳಿದಿರುವ ಒಂದು ಸಾವಿರ ಕೋಟಿ ಅನುದಾನದಲ್ಲಿ ಮುಂದುವರೆದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಕ್ಷೇತ್ರಕ್ಕೆ ನೀವು ತಂದಿರುವ ಅನುದಾನ ಎಷ್ಟು ಎಂದು ಪ್ರಶ್ನಿಸಿದರು.
ರಾಜ್ಯದ 224 ಕ್ಷೇತ್ರಗಳಿಗೆ ಮುಖ್ಯಮಂತ್ರಿಯವರು 50 ಲಕ್ಷ ಅನುದಾನ ಬಿಡುಗಡೆ ಮಾಡಿದ್ದಾರೆ. ನನ್ನ ಬಗ್ಗೆ ಮಾತನಾಡುವ ಶಾಂತನಗೌಡರು ಕ್ಷೇತ್ರಕ್ಕೆ ಅನುದಾನವನ್ನು ತಂದಿರುವುದರ ಕುರಿತು ದಾಖಲೆಗಳನ್ನು ಜನತೆ ಮುಂದಿಡಲಿ ಎಂದು ಒತ್ತಾಯಿಸಿದರು.
ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು, ಕ್ಷೇತ್ರಕ್ಕೆ ಬರಪೂರ ಅನುದಾನ ಬಿಡುಗಡೆ ಮಾಡಿದ್ದರು. ನಾನು ಶಾಸಕನಾಗಿದ್ದ ಅವಧಿಯಲ್ಲಿ ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೆಘಿ. ಈಗ ನೀವು ಮಾಡುತ್ತಿರುವುದು ಮುಂದುವರೆದ ಕಾಮಗಾರಿ ಅಷ್ಟೇ ಎಂದು ತಿರುಗೇಟು ನೀಡಿದರು.
drought; ಭೀಕರ ಬರ; ರಾಜ್ಯ ಸರ್ಕಾರದ ನಡೆಗೆ ಬಿಜೆಪಿ ಮುಖಂಡ ಖಂಡನೆ
ನಬಾರ್ಡ್ ಯೋಜನೆಯಡಿ ಕ್ಷೇತ್ರಗಳಿಗೆ ನೀರು ತುಂಬಿಸಲು 515 ಕೋಟಿ ಅನುದಾನ ತಂದಿದ್ದು ನಾವು, ಪದವಿಪೂರ್ವ ಕಾಲೇಜುಗಳು, ಪ್ರಾಥಮಿಕ ಶಾಲೆಗಳ ಕಟ್ಟಡ, ಸಿಮೆಂಟ್ ರಸ್ತೆಘಿ ನಮ್ಮ ಅಧಿಕಾರ ಅವಧಿಯಲ್ಲೇ ನಡೆದಿದೆ ಎಂದು ಹೇಳಿದರು.
ನಾನೇನು ಅರ್ಜಿ ಹಾಕಿದ್ದೇನೆಯೇ?
ರೇಣುಕಾಚಾರ್ಯ ಅವರು ಕಾಂಗ್ರೆಸ್ ಸೇರಲು ನನ್ನ ವಿರೋಧವಿದೆ ಎಂಬ ಶಾಂತನಗೌಡರ ಹೇಳಿಕೆಗೆ ತಿರುಗೇಟು ನೀಡಿದ ರೇಣುಕಾಚಾರ್ಯ ,ನಾನೇನು ಅರ್ಜಿ ಹಾಕಿಕೊಂಡು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆಯೇ ? ಎಂದು ಪ್ರಶ್ನೆ ಮಾಡಿದರು.
ನಾನು ಬಿಜೆಪ ಬಿಡುತ್ತೇನೆಂದು ಎಲ್ಲಿಯೂ ಹೇಳಿಲ್ಲಘಿ. ಅದೇ ರೀತಿ ಕಾಂಗ್ರೆಸ್ ಸೇರುತ್ತೇನೆಂದು ಹೇಳಿಲ್ಲಘಿ.ಬಿಜೆಪಿಯಲ್ಲಿ ಈಗಲೂ ನಾನು ಸಾಮಾನ್ಯ ಕಾರ್ಯಕರ್ತ. ಕಾಂಗ್ರೆಸ್ ಸೇರಲು ನಾನು ಅರ್ಜಿ ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ , ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವರಾದ ಕೃಷ್ಣಭೈರೇಗೌಡ, ಎಸ್.ಎಸ್.ಮಲ್ಲಿಕಾರ್ಜುನ್, ಚೆಲುವರಾಯ ಸ್ವಾಮಿ ಅವರುಗಳನ್ನು ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಭೇಟಿ ಮಾಡಿದ್ದೆ. ರಾಜ್ಯದ ಮುಖ್ಯಮಂತ್ರಿಯನ್ನು ಯಾರು ಬೇಕಾದರೂ ಭೇಟಿ ಮಾಡಬಹುದು ಎಂದು ಹೇಳಿದರು.
lingayat; ಲಿಂಗಾಯತ ಉಪ ಪಂಗಡಗಳ ಕೇಂದ್ರ ಓಬಿಸಿ ಪಟ್ಟಿಗೆ ಸೇರಿಸುವಂತೆ ಒತ್ತಾಯ
ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಎಂದಿಗೂ ರಾಜಕಾರಣ ಮಾಡಿಲ್ಲ. ಈ ಹಿಂದೆ ಶಾಂತನಗೌಡರು ಎರಡು ಬಾರಿ ಶಾಸಕರಾಗಿದ್ದಾಗಲೂ ನಾನು ಸಂಪೂರ್ಣ ಸಹಕಾರ ಕೊಟ್ಟಿನೆ. ಕ್ಷೇತ್ರದಲ್ಲಿ ಬರಗಾಲ ಇರುವುದರಿಂದ ಅನುದಾನ ಬಿಡುಗಡೆ ಮಾಡುವಂತೆ ಸಿಎಂ ಅವರನ್ನು ಭೇಟಿ ಮಾಡಿದರೆ ಶಾಂತನಗೌಡರಿಗೆ ಏಕೆ ಸಿಟ್ಟು ಎಂದು ಪ್ರಶ್ನಿಸಿದರು.
ನನ್ನ ಬಗ್ಗೆ ಹಗರುವಾಗಿ ಮಾತನಾಡುವುದನ್ನು ನಿಲ್ಲಿಸಿ. ಶಾಸಕರಾಗಿ ಆರು ತಿಂಗಳಾಗಿದ್ದರೂ ಎಷ್ಟು ಬಾರಿ ಕ್ಷೇತ್ರದಲ್ಲಿ ಬರ ಅಧ್ಯಯನ ನಡೆಸಿದ್ದೀರಿ ಅಭಿವೃದ್ದಿ ಮತ್ತು ಬರಗಾಲದಲ್ಲಿ ರಾಜಕೀಯ ಮಾಡಬಾರದೆಂದು ಸುಮ್ಮನಿz?ದÉ?ನೆ. ಇದು ನನ್ನ ದೌರ್ಬಲ್ಯವಲ್ಲಘಿ.ನಿಮಗಿಂತ 10 ಪಟ್ಟು ಮಾತನಾಡಲು ನನಗೂ ಬರುತ್ತದೆ ಎಂದು ವಾಗ್ದಾಳಿ ನಡೆಸಿದರು.
ಪದೇ ಪದೇ ಹಗುರವಾಗಿ ಮಾತನಾಡಿದರೆ ಸುಮ್ಮನಿರುವುದಿಲ್ಲ. ನಾನು ಜನರ ಪರವಾಗಿ ಅದಿಕಾರ ಇರಲಿ ಇಲ್ಲದೆ ಇರಲಿ ಹೋರಾಟ ಮಾಡುತ್ತೇನೆ. ಇದಕ್ಕೆಯಾರ ಅಪ್ಪಣೆಯೂ ಬೇಕಿಲ್ಲ ಎಂದು ಅಬ್ಬರಿಸಿದರು.