Ss Dandiya Dance:ಯುವತಿಯರೊಂದಿಗೆ ದಾಂಡಿಯಾ ನೃತ್ಯದಲ್ಲಿ ಭಾಗಿಯಾದ ಶಾಮನೂರು ಶಿವಶಂಕರಪ್ಪ

Shamanuru Shivashankarappa dandiya dance with girls

ದಾವಣಗೆರೆ: ದಾವಣಗೆರೆ ದಣಿ, ಕೊಡುಗೈ ದಾನಿಯೆಂದೇ ಹೆಸರು ಮಾಡಿರುವ ಶಾಸಕ ಶಾಮನೂರು ಶಿವಶಂಕರಪ್ಪ ಈ ವಯಸ್ಸಲ್ಲೂ ಬತ್ತದ ಉತ್ಸಾಹ ಹೊಂದಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ ಇಂದು ಯುವತಿಯರೊಂದಿಗೆ ಕೋಲಾಟದಲ್ಲಿ ಹೆಜ್ಜೆ ಹಾಕಿರುವ ವೀಡಿಯೋ ಈಗ ಫುಲ್ ವೈರಲ್ ಆಗಿದೆ.

ದಸರಾ ಪ್ರಯುಕ್ತ ನಗರದಲ್ಲಿ ಆಯೋಜಿಸಲಾಗಿರುವ ದಾಂಡಿಯಾ ರಾಸ್ ಕಾರ್ಯಕ್ರಮಕ್ಕೆ ಯುವತಿಯರೊಂದಿಗೆ ಸೇರಿ ಕೋಲಾಟವಾಡುವ ಮೂಲಕ ಚಾಲನೆ‌ ನೀಡಿರುವ ಶಾಮನೂರು ಹೆಜ್ಜೆ ಹಾಕಿದ್ದಾರೆ.

87 ರ ಈ ಇಳಿ ವಯಸ್ಸಲ್ಲೂ ಶಾಮನೂರು ಯುವಕರಂತೆ ಉತ್ಸಾಹ ಹೊಂದಿದ್ದು, ಕ್ಷೇತ್ರದ ತುಂಬೆಲ್ಲಾ ಓಡಾಡುತ್ತಾರೆ. ಅವರ ಉತ್ಸಾಹ‌ ಕಂಡು ಶಾಮನೂರು ಶಿವಶಂಕರಪ್ಪ ಅಭಿಮಾನಿಗಳ ಮತ್ತು ಪಕ್ಷದ ಕಾರ್ಯಕರ್ತದಲ್ಲಿ ಅವರ ಬಗ್ಗೆ ಮತ್ತಷ್ಟು ಅಭಿಮಾನ ಮೂಡಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!