ಸಮಾಜದಲ್ಲಿ ನಡೆಯುವ ತಪ್ಪುಗಳನ್ನು ಎತ್ತಿ ತೋರಿಸುವ ಮಾದ್ಯಮಗಳನ್ನು‌ ನಾವು ಗೌರವದಿಂದ ಕಾಣಬೇಕು – ಬಿ ಎಸ್ ಯಡಿಯೂರಪ್ಪ

ಶಿವಮೊಗ್ಗ: ಪ್ರಶಸ್ತಿ ಪಡೆದ ಪತ್ರಕರ್ತರ ಜವಬ್ದಾರಿ ಹೆಚ್ಚಾಗಿದೆ, ಅವರು ಸಮಾಜಕ್ಕೂ ಇನ್ನು ಒಳಿತು ಮಾಡುವ ಹೆಚ್ಚಿನ ಕೆಲಸ ಮಾಡಲಿ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ದತ್ತಿ ನಿಧಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಯಡಿಯೂರಪ್ಪ ಮಾತನಾಡಿದರು.

ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮಗಳು ಸಮಾಜದ ಕುಂದುಕೊರತೆಗಳ ಮೇಲೆ ಬೆಳಕು ಚಲ್ಲುತ್ತಿದೆ. ಸಮಾಜದಲ್ಲಿನ ಆಗುಹೋಗುಗಳನ್ನು ಆಳುವವರಿಗೆ ತಿಳಿಸುವ ಕೆಲಸಗಳನ್ನು ಪತ್ರಿಕಾರಂಗ ಮಾಡುತ್ತಿವೆ ಎಂದು ತಿಳಿಸಿದರು.

ಸಮಾಜದಲ್ಲಿ ನಡೆಯುವ ತಪ್ಪುಗಳನ್ನು ಎತ್ತಿ ತೋರಿಸುವ ಮಾದ್ಯಮಗಳನ್ನು‌ ನಾವು ಗೌರವದಿಂದ ಕಾಣಬೇಕು, ಪತ್ರಿಕೆಗಳಿಗೆ ಓದುಗರು ನಿಜವಾದ ಮಾಲೀಕರು ಎಂದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವೃತ್ತಿ ಹಿರಿಮೆ ಕಾಪಾಡಿಕೊಳ್ಳವ ನಿಟ್ಟಿನಲ್ಲಿ ಪತ್ರಕರ್ತರು ಹೆಚ್ಚಿನ
ಹರಿಸಬೇಕು ಎಂದು ಸಲಹೆ‌ ನೀಡಿದರು.

ಇದೇ ವೇಳೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ ದೃಶ್ಯ ಮಾದ್ಯಮಗಳ ವೈಭವೀಕರಣದಿಂದ ಮುದ್ರಣ ಮಾದ್ಯಮ ನೇಪತ್ಯಕ್ಕೆ ಸರಿಯುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ‌ ಮುದ್ರಣ ಮಾದ್ಯಮ ತನ್ನ ಓದುಗರನ್ನು ಹೆಚ್ಚಿಸಿಕೊಂಡಿರುವುದು ಶ್ಲಾಘನೀಯ ಎಂದರು.

ಇನ್ನು ಯಡಿಯೂರಪ್ಪ ನವರು ಪತ್ರಕರ್ತರಿಗೆ ಸಾಕಷ್ಟು ಯೋಜನೆಗಳನ್ನು ತಂದಿದ್ದಾರೆ. ಅವರಿಗೆ ಹೆಚ್ಚಿನ ಅನುಕೂಲಗಳನ್ನು ಮಾಡಿಕೊಟ್ಟಿದ್ದಾರೆ ಎಂದರು.

ಹೆಚ್.ಎಸ್.ದೊರೆಸ್ವಾಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಹನೀಫ್ ಮಾತನಾಡಿ, ಕೋವಿಡ್ ನಂತಹ ಸಂಕಷ್ಟದ‌ ಸಮಯದಲ್ಲಿ ಪತ್ರಕರ್ತರ ನೆರವಿಗೆ ಬಂದಿರುವ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯ ಶ್ಲಾಘನೀಯ ಎಂದರು.

ಪ್ರಶಸ್ತಿ ಪಡೆದ ಪತ್ರಕರ್ತರು.

ವಾರ್ಷಿಕ ದತ್ತಿ ಪ್ರಶಸ್ತಿ ಪಡೆದವರು

ಡಿವಿಜಿ ಪ್ರಶಸ್ತಿಯನ್ನು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಸಂಪಾದಕರಾದ ರವಿ ಹೆಗಡೆ.

ಎಚ್. ಎಸ್.ದೊರೆಸ್ವಾಮಿ ಪ್ರಶಸ್ತಿ: ಬಿ.ಎಂ ಹನೀಫ್, ಪ್ರಜಾವಾಣಿ ಪತ್ರಿಕೆ.

ಗೊಮ್ಮಟ ಮಾಧ್ಯಮ ಪ್ರಶಸ್ತಿ: ಎಸ್. ಎನ್.ಅಶೋಕ್ ಕುಮಾರ್, ಸಂಪಾದಕರು, ಗೊಮ್ಮಟವಾಣಿ ಪತ್ರಿಕೆ.

ಪಾಟೀಲ್ ಪುಟ್ಟಪ್ಪ ಪ್ರಶಸ್ತಿ : ಎಸ್.ಕೆ.ಶೇಷಚಂದ್ರಿಕ.

ಎಸ್.ವಿ.ಜಯಶೀಲರಾವ್ ಪ್ರಶಸ್ತಿ: ಅ.ಚ.ಶಿವಣ್ಣ ಅವರಿಗೆ ನೀಡಿ ಗೌರವಿಸಲಾಯಿತು.

ಪಿ.ಆರ್.ರಾಮಯ್ಯಪ್ರಶಸ್ತಿ: ಯು.ಎಸ್. ಶೆಣೈ, ಸಂಪಾದಕರು, ಕುಂದಪ್ರಭ,

ಗರುಡನಗಿರಿ ನಾಗರಾಜ್ ಪ್ರಶಸ್ತಿ: ಕೆ.ಆರ್.ಮಂಜುನಾಥ್, ಸಂಪಾದಕರು, ಮಲೆನಾಡ ಮಂದಾರ ಪತ್ರಕೆ.

ಎಚ್.ಕೆ.ವೀರಣ್ಣಗೌಡ ಪ್ರಶಸ್ತಿ :ಕೋಡಿ ಹೊಸಳ್ಳಿ ರಾಮಣ್ಣ ರಿಗೆ ನೀಡಿ ಗೌರವಿಸಲಾಯಿತು.

ಕಿಡಿ ಶೇಷಪ್ಪ ಪ್ರಶಸ್ತಿ: ಕೆ.ಎಂ. ರೇಖಾ, ಸಂಪಾದಕರು, ಹೊಸಪೇಟೆ ಟೈಮ್ಸ್.

ಪಿ.ರಾಮಯ್ಯ ಪ್ರಶಸ್ತಿ: ರೇವಣ್ಣಸಿದ್ದಯ್ಯ ಮಹಾನುಭವಿಮಠ, ಸಂಪಾದಕರು, ಶಿಡ್ಲು ಪತ್ರಿಕೆ,

ಯಶೋಧಮ್ಮ ಜಿ ನಾರಾಯಣ ಪ್ರಶಸ್ತಿ: ರಶ್ಮಿ, ಪ್ರಜಾವಾಣಿ, ಹುಬ್ಬಳ್ಳಿ ,

ಎಂ. ನಾಗೇಂದ್ರರಾವ್ ಪ್ರಶಸ್ತಿ : ಎನ್.ಡಿ.ಶಾಂತಕುಮಾರ್ ವಿಜಯವಾಣಿ, ಶಿವಮೊಗ್ಗ,

ಮಿಂಚು ಶ್ರೀನಿವಾಸ್ ಪ್ರಶಸ್ತಿ: ರಾಮಸ್ವಾಮಿ ಹುಲಕೋಡು, ವಿಜಯಕರ್ನಾಟಕ,

ಹೆಚ್.ಎಸ್ ರಂಗಸ್ವಾಮಿ ಪ್ರಶಸ್ತಿ : ಪಿ.ಸುನೀಲ್ ಕುಮಾರ್ ಸಂಪಾದಕರು ‘ಸಿಟಿ ಹೈಲೈಟ್ಸ್’ ಬೆಂಗಳೂರು ಇವರಿಗೆ ಪ್ರಶಸ್ತಿ ವಿತರಿಸಿ ಸನ್ಮಾನಿಸಲಾಯಿತು.

ಸಂಘದ ವಿಶೇಷ ಪ್ರಶಸ್ತಿಗಳು

ಪ್ರಹ್ಲಾದಗುಡಿ, ವರದಿಗಾರರು, ಕನ್ನಡ ಪ್ರಭ, ರಾಯಚೂರು, ಮುನಿವೆಂಕಟೇಗೌಡ, ಹಿರಿಯ ಪತ್ರಕರ್ತರು ಕೋಲಾರ ,ಪ್ರಕಾಶ್ ರಾಮಜೋಗಿಹಳ್ಳಿ, ವಾರ್ತಾಭಾರತಿ, ಬೆಂಗಳೂರು,ಎಂ.ಕೆ. ರಾಘವೇಂದ್ರ ಮೇಗರವಳ್ಳಿ ವಿಜಯ ಕರ್ನಾಟಕದ ತೀರ್ಥಹಳ್ಳಿ ಇವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರು ಪ್ರಶಸ್ತಿ ಪ್ರಧಾನ ಮಾಡಿದರು.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ‌ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!