ರಾಜ್ಯ ಸರ್ಕಾರದ 2023-24 ನೇ ಸಾಲಿನ ಬಜೆಟ್ ನಿರರ್ಥಕ ಮತ್ತು ನಿರ್ಗಮದ ಬಜೆಟ್ – ಬಾತಿ ಶಂಕರ್

State Government's Budget 2023-24 is a Void and Exit Budget - Bathi Shankar

ಬಜೆಟ್ - ಬಾತಿ ಶಂಕರ್

ದಾವಣಗೆರೆ: ಚುನಾವಣೆಯ ಹೊಸ್ತಿಲಿನಲ್ಲಿ ಇರುವ ಸಂದರ್ಭದಲ್ಲಿ ಮಂಡಿಸಿರುವ ಈ ಬಜೆಟ್ ಕಿಮ್ಮತ್ತಿಲ್ಲದ ಬಜೆಟ್ ಆಗಿದೆ ಎಂದು ಜೆಡಿಎಸ್ ಉತ್ತರ ವಲಯದ ಅಧ್ಯಕ್ಷರಾದ ಬಾತಿ ಶಂಕರ್ ತಿಳಿಸಿದ್ದಾರೆ.
ಕಳೆದ ಸಲ ನೀಡಿರುವ ಬಜೆಟ್ ನ 2.65 ಲಕ್ಷ ಕೋಟಿಯಲ್ಲಿ 50% ಅಷ್ಟು ಕಾರ್ಯಕ್ರಮಗಳು ಜಾರಿಯಾಗಿಲ್ಲ.15 ಪರ್ಸೆಂಟ್ ಅಷ್ಟು ಕಾರ್ಯಕ್ರಮಗಳು ಸಹ ಅನುಷ್ಠಾನ ಇಲ್ಲ.
ಈಗ 3 ಲಕ್ಷದ 9 ಕೋಟಿ ಬಜೆಟ್ ಮಂಡನೆಯಾಗಿರುವುದು ಇದು ಕೇವಲ ಅಂಕಿ ಅಂಶಗಳಲ್ಲಿ ಮಾತ್ರ ಸಿಗುವಂತಾಗಿದೆ.ಡಬಲ್ ಇಂಜಿನ್ ಸರ್ಕಾರವಾಗಿರುವ ಬಿಜೆಪಿ ಸರ್ಕಾರದ ಬಜೆಟ್ ಜನಗಳಿಗೆ ಭ್ರಮನಿರಸನ ವಾಗಿದೆ.
ಹಚ್ ಡಿ ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ರೈತರ ಸಾಲ ಮನ್ನಾ ಮಾಡಿದರೆ ಬಿಜೆಪಿ ಸರ್ಕಾರದಲ್ಲಿ ರೈತರಿಗೆ ಸಾಲ ಕೊಡುತ್ತಿರುವುದೇ ದೊಡ್ಡ ಸಹಾಯ ಎಂದು ಬಿಂಬಿಸಿದ.
ವಿಶೇಷವಾಗಿ ದಾವಣಗೆರೆಗೆ ಸಂತ ಸೇವಾಲಾಲ್ ಸ್ಥಳವಾದ ಸೂರಗೊಂಡನ ಕೊಪ್ಪ ಮತ್ತು ಹೊದಗಿರಿಯ ಶಾಜಿ ಮಹಾರಾಜ್ ಸಮಾಧಿಗೆ 5 ಕೋಟಿಬಿಟ್ಟರೆ … ಯಾವುದೇ ವಿಶೇಷವಾದ ಶಾಶ್ವತ ಯೋಜನೆಗಳಿಲ್ಲ.
ಒಟ್ಟಾರೆಯಾಗಿ ನಿರಾಶದಾಯಕ ಮತ್ತು ನಿರ್ಗಮಿತ ಬಜೆಟ್ ಆಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!