street play ಜಾಗೃತಿ ನಾಟಕ ಕಲಾ ತಂಡಗಳಿಂದ ಅರ್ಜಿ ಆಹ್ವಾನ

ದಾವಣಗೆರೆ, ಆ. 25: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮ ಕುರಿತು ಜನಜಾಗೃತಿ ಮೂಡಿಸಲು ಕೇಂದ್ರ ಸರ್ಕಾರದ ಸಂಗೀತ ಮತ್ತು ನಾಟಕ ವಿಭಾಗ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇಲ್ಲಿ ನೋಂದಣಿಯಾಗಿರುವ ಬೀದಿ ನಾಟಕ (street play) ಜಾನಪದ ಕಲಾತಂಡಳಿಂದ ಅರ್ಜಿ (application) ಆಹ್ವಾನಿಸಲಾಗಿದೆ.
ಒಂದು ತಂಡದಲ್ಲಿ ಕನಿಷ್ಠ 8 ಜನ ಕಲಾವಿದರು ಮಾತ್ರ ಇರಬೇಕು. ಅದರಲ್ಲಿ ಇಬ್ಬರು ಮಹಿಳೆಯರಲ್ಲಿ ಒಬ್ಬ ಮಹಿಳೆ ಪ.ಜಾ ಅಥವಾ ಪ.ಪಂಕ್ಕೆ ಸೇರಿದವರಾಗಿರಬೇಕು. ಇಲಾಖೆಯ ಯೋಜನೆಗಳ ಬಗ್ಗೆ ಬೀದಿನಾಟಕ ಪ್ರದರ್ಶಿಸಿದ ಅನುಭವ ಹಾಗೂ ಸಂಸ್ಥೆ ನೊಂದಣಿಯಾಗಿ ಪ್ರತಿ ವರ್ಷ ನವೀಕರಣಗೊಂಡಿರಬೇಕು.
ನಿರುದ್ಯೋಗ ಯುವಕ, ಯುವತಿಯರಿಂದ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಜಿ ಆಹ್ವಾನ
ಅರ್ಹ ಬೀದಿ ನಾಟಕ ಕಲಾತಂಡಗಳು ತಂಡದ ಸಂಪೂರ್ಣ ವಿವರ ಮತ್ತು ದಾಖಲೆಗಳೊಂದಿಗೆ ಸೆಪ್ಟಂಬರ್ 2 ರಂದು ಮಧ್ಯಾಹ್ನ 3 ಗಂಟೆಯೊಳಗಾಗಿ ಖುದ್ದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಐ,ಇ.ಸಿ ವಿಭಾಗ. ರೂಂ. ನಂ. 3 ರಲ್ಲಿ ದಾವಣಗೆರೆ ಸಲ್ಲಿಸಬೇಕು. ಆಯ್ಕೆ ಪ್ರಕ್ರಿಯೆ ಕುರಿತು ಕಚೇರಿ ಫಲಕದಲ್ಲಿ ತಿಳಿಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ, ನಾಗರಾಜ ತಿಳಿಸಿದ್ದಾರೆ.