ಸ್ವಾಮೀಜಿಯವರ ಮೂರನೇ ಪುಣ್ಯ ಸ್ಮರಣೆ: ಸಿ ಎಂ ರಿಂದ ಸಿದ್ದಗಂಗಾ ಮಠದಲ್ಲಿ ‘ದಾಸೋಹ ದಿನ’ ಉದ್ಘಾಟನೆ.

ತುಮಕೂರು: ತ್ರಿವಿಧ ದಾಸೋಹಿ ಕರ್ನಾಟಕ ರತ್ನ ಡಾ ಶಿವಕುಮಾರ್ ಮಹಾ ಸ್ವಾಮೀಜಿ ರವರ ಮೂರನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸರಳವಾಗಿ ನಡೆಸಲು ನಿರ್ಧರಿಸಲಾಗಿದ್ದು

ಈ ದಿನವನ್ನು ದಾಸೋಹ ದಿನವನ್ನಾಗಿ ಆಚರಿಸಲು ಕೋಟ್ಯಾಂತರ ಭಕ್ತರ ಆಶ್ರಯ ದಂತೆ ದಾಸೋಹವನ್ನು ಸನ್ಮಾನ್ಯ ಮುಖ್ಯಮಂತ್ರಿಯವರು ಉದ್ಘಾಟನೆ ಮಾಡಲಿದ್ದಾರೆ.

ತ್ರಿವಿಧ ದಾಸೋಹಿ ಡಾಕ್ಟರ್ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ ರಾಗಿ ಇಂದಿಗೆ ಮೂರು ವರ್ಷ ತುಂಬಲಿದ್ದು ಈ ದಿನವನ್ನು ದಾಸೋಹ ದಿನವನ್ನಾಗಿ ಆಚರಿಸಲು ಕಳೆದ ವರ್ಷ ಕೋಟ್ಯಾಂತರ ಭಕ್ತರ ಅಶ್ರಯದಂತೆ ಸರ್ಕಾರ ತೀರ್ಮಾನ ಕೈಗೊಂಡಿತ್ತು .

ಆದರೆ ಈ ಬಾರಿ ಕೋವಿಡ್ ನಿಯಮಾವಳಿ ಹಿನ್ನೆಲೆಯಲ್ಲಿ ಡಾಕ್ಟರ್ ಶಿವಕುಮಾರ ಸ್ವಾಮೀಜಿ ಅವರ ಮೂರನೇ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಸಿದ್ದಗಂಗಾಮಠದಲ್ಲಿ ಸರಳವಾಗಿ ಆಚರಣೆ ಮಾಡಲು ನಿರ್ಧರಿಸಿದ್ದು ಭಕ್ತರಿಗೆ ನಿರಾಸೆ ಮೂಡಿದೆ

ಮಠಕ್ಕೆ ಬರುವ ಭಕ್ತರಿಗೆ ಎಂದಿನಂತೆ ದಾಸೋಹ ನಡೆಯಲಿದೆ

Leave a Reply

Your email address will not be published. Required fields are marked *

error: Content is protected !!