ನೂರು ಮಂದಿ ಆಟೋ ಚಾಲಕರಿಗೆ ತಹಶೀಲ್ದಾರ್ ಗಿರೀಶ್ ರಿಂದ ದಿನಸಿ ಕಿಟ್ ವಿತರಣೆ

ದಾವಣಗೆರೆ: ಕರೋನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೊಳಗಾದ ನೂರು ಮಂದಿ ಆಟೋ ಚಾಲಕರಿಗೆ ತಹಶೀಲ್ದಾರ್ ಗಿರೀಶ್ ಶುಕ್ರವಾರ ನಗರದ ಪ್ರೌಢಶಾಲಾ ಮೈದಾನದಲ್ಲಿ ಆಹಾರ ಧಾನ್ಯಗಳ ಕಿಟ್ ವಿತರಿಸಿದರು.
ಇದೇ ವೇಳೆ ಮಾತನಾಡಿದ ಅವರು, ಜಿಲ್ಲಾ ಆಟೋ ಚಾಲಕರ ಸಂಘದ ಅಧ್ಯಕ್ಷರು ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಆಟೋ ಚಾಲಕರಿಗೆ ಸ್ಪಂದಿಸುವಂತೆ ಮನವಿ ಸಲ್ಕಿಸಿದ್ದರಿಂದ, ಜಿಲ್ಲಾಧಿಕಾರಿಗಳು ತಮಗೆ ದಾನಿಗಳಿಂದ ಚಾಲಕರಿಗೆ ದಿನಸಿ ಕಿಟ್ ಗಳ ವಿತರಿಸಲು ಅನುವು ಮಾಡಿಕೊಡುವಂತೆ ತಿಳಿಸಿದ್ದರು.
ಅದರಂತೆ, ಶಶಿ ಸೋಪ್ ಮಾಲೀಕರಾದ ರವಿರಾಜ್ ಅವರು ಆಟೋ ಚಾಲಕರಿಗೆ ದಿನಸಿ ಕಿಟ್ ಗಳನ್ನು ಒದಗಿಸಲು ಮುಂದೆ ಬಂದಿದ್ದು, ಅವರ ಸಹಕಾರದಲ್ಲಿ ಚಾಲಕರಿಗೆ ಫುಡ್ ಕಿಟ್ ವಿತರಿಸಲಾಗಿದೆ ಎಂದರು.
ಕೋವಿಡ್ ನ ಈ ಸಮಯದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಮತ್ತು ಗುಣಮುಖರಾದವರನ್ನು ಮನೆಗೆ ಕರೆತಂದು ಬಿಡುವಂತ ಕೆಲಸ ಮಾಡಿರುವ ಚಾಲಕರ ಸೇವೆ ಅನನ್ಯ ಅವರ ಸಂಕಷ್ಟ ಕಾಲದಲ್ಲಿ ಸ್ಪಂದಿಸಿ, ಅವರಿಗೆ ಸಹಾಯ ಮಾಡುವ ಅಗತ್ಯವಿದೆ ಎಂದು ಹೇಳಿದರು.