ಡಾ. ಶಾಮನೂರು ಶಿವಶಂಕರಪ್ಪ ನವರ ಜನ್ಮ ದಿನದ ಅಂಗವಾಗಿ ಯುವ ಕಾಂಗ್ರೆಸ್ ಸಮಿತಿಯಿಂದ ಪರಿಸರ ಜಾಗೃತಿ

ದಾವಣಗೆರೆ: ವೃಕ್ಷೋ ರಕ್ಷತಿ ರಕ್ಷಿತಃ ಎಂಬ ನಾಣ್ಣುಡಿಯಂತೆ ಗಿಡ ಮರಗಳನ್ನು ನಾವು ಸಾಕಿ ಸಲುಹಿದರೆ, ಮುಂದೆ ಅವು ನಮ್ಮನ್ನು ಸಾಕಿ ಸಲಹುತ್ತವೆ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಹೇಳಿದರು.

ಶಾಸಕ ಡಾ. ಶಾಮನೂರು ಶಿವಶಂಕರಪ್ಪ ನವರ ಜನ್ಮ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಆಮ್ಲಜನಕದ ಕೊರತೆಗೆ ಮರಗಳ ಮಾರಣಹೋಮವೇ ಕಾರಣವಾಗಿದೆ‌. ಪರಿಸರ ರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕಿದೆ ಇಲ್ಲವಾದರೆ ಮುಂದಿನ ದಿನಗಳಲ್ಲಿ ಘೋರ ಘಳಿಗೆಗಳನ್ನು ಎದುರಿಸಬೇಕಾಗಬಹುದು ಎಂದು ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ, ನಮ್ಮ ಹೆಮ್ಮೆಯ ಶಾಸಕರ ಜನ್ಮ ದಿನವನ್ನು ಪರಿಸರ ಜಾಗೃತಿ ದಿನವನ್ನಾಗಿ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಕೇವಲ ಜಾಗೃತಿ ಮುಡಿಸುವುದಷ್ಟೇ ಅಲ್ಲದೇ ಎಲ್ಲರೂ ಪರಿಸರವನ್ನು ಕಾಪಾಡುವ ಹಾಗೂ ಎಲ್ಲರೂ ತಮ್ಮ ಮನೆಯ ಮುಂದೆ ಒಂದೊಂದು ಗಿಡ ನೆಟ್ಟು ಅದನ್ನು ಪೋಷಿಸುವ ಪ್ರಮಾಣ ಮಾಡಿ ನಡೆದರೆ ಈ ಕಾರ್ಯಕ್ರಮವು ಅರ್ಥಪೂರ್ಣವಾಗುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದೆ ಸಂಧರ್ಭದಲ್ಲಿ ಗಿಡ ಮರಗಳ ನಾಶದಿಂದ ಆಮ್ಲಜನಕ ಕೊರತೆ ಉಂಟಾದಾಗ ಆಗುವ ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಯುವ ಮುಖಂಡರು ಬಾಟಲ್ ಗಳಲ್ಲಿ ಗಿಡಗಳನ್ನು ಬೆಳೆಸಿ ಅದನ್ನು ಬೆನ್ನಿಗೆ ತೂಗು ಹಾಕಿಕೊಂಡು ಅದರಿಂದ ಆಮ್ಲಜನಕವನ್ನು ಪಡೆಯುವ ಅಣುಕು ಪ್ರದರ್ಶನ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಕಿಸಾನ್ ಕಾಂಗ್ರೆಸ್ ನ ಮೊಹಮ್ಮದ್ ಜಿಕ್ರಿಯಾ, ಸುರೇಶ್.ಎಂ.ಜಾಧವ್, ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ವಾಜಿದ್ ದಕ್ಷಿಣ ಭಾಗದ ಅಧ್ಯಕ್ಷರಾದ ಇರ್ಫಾನ್, ಮಹಬೂಬ್ ಬಾಷಾ, ಫಜ್ಲೂರ್ ರೆಹಮಾನ್, ರಾಜಿಕ್, ಸಂತೋಷ್ ಇನ್ನಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!