ಚುನಾವಣಾ ಹೊತ್ತಿನಲ್ಲಿ 1,800 ಕೋಟಿ ರೂ.ಗೆ ಚಾಲನೆ ನೀಡಲಿರುವ ಸಿಎಂ.! ರೇಣುಕಾಚಾರ್ಯ ಕ್ಷೇತ್ರದಲ್ಲಿ ಕಮಲ ಕಲರವ

ರೇಣುಕಾಚಾರ್ಯ ಕ್ಷೇತ್ರದಲ್ಲಿ ಕಮಲ ಕಲರವ
ಹೊನ್ನಾಳಿ: ಹೊನ್ನಾಳಿಗೆ ಸಿಎಂ ಬರಲು ಒಂದೇ ದಿನ ಬಾಕಿ ಇದ್ದುಘಿ, ಪಟ್ಟಣಕ್ಕೆ ಮಾ.17ರಂದು ಹೊನ್ನಾಳಿ -ನ್ಯಾಮತಿ ಅವಳಿ ತಾಲೂಕಿನ 1,800 ಕೋಟಿ ರೂ.ಗೂ ಅಧಿಕ ವೆಚ್ಚದ ನಾನಾ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ.
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಎದುರಿನ ಖಾಸಗಿ ಲೇಔಟ್‌ನಲ್ಲಿ ಮಾ.17 ರಂದು ಕಾರ್ಯಕ್ರಮ ನಡೆಯಲಿದ್ದು, ಮಾಜಿ ಸಿ.ಎಂ. ಬಿ.ಎಸ್.ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಸೇರಿ ಹತ್ತಕ್ಕೂ ಹೆಚ್ಚು ಸಚಿವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
1,800 ಕೋಟಿ ರೂ. ವೆಚ್ಚದಲ್ಲಿ 975 ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಮಾಡಲಿದ್ದು ಆಯಾ ಇಲಾಖೆಯ ಅಧಿಕಾರಿಗಳು ಶಿಲಾನಾಸ್ಯ ಸಿದ್ಧ ಪಡಿಸಿಕೊಂಡಿದ್ದಾರೆ. ಪಿಡಿಓಗಳು ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳ ಸಮಗ್ರ ಮಾಹಿತಿಯ ಜತೆಗೆ, ಅರ್ಹ ಲಾನುಭವಿಗಳು ಹಾಗೂ 2,116 ಮನೆಗಳ ಲಾನುಭವಿಗಳ ಕರೆ ತರುವಂತೆ ಈಗಾಗಲೇ ತಾಪಂ ಇಓ ರಾಮಬೋವಿ ತಿಳಿಸಿದ್ದಾರೆ.
ಕಾಮಗಾರಿಗಳ ಉದ್ಘಾಟನೆ : ನಗರದ ಪಟ್ಟಣ ಶೆಟ್ಟಿ ಲೇಹೌಟ್‌ನಲ್ಲಿ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ 1800 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದುಘಿ, ಶಾಸಕ ರೇಣುಕಾಚಾರ್ಯ ಬುಧವಾರ ಸ್ಥಳ ಪರಿಶೀಲನೆ ಮಾಡಿದರು.
ಶಾಸಕ ರೇಣುಕಾಚಾರ್ಯ ಹುಟ್ಟು ಹಬ್ಬದೊಂದಿಗೆ ಸುಮಾರು ಗ್ರಾಮಗಳಿಗೆ ಈಗಾಗಲೇ ಭೇಟಿ ನೀಡಿದ್ದುಘಿ, ಸಿಎಂ ಕಾರ್ಯಕ್ರಮಕ್ಕೆ ಹೆಚ್ಚಿನ ಜನರು ಬರಲು ಆಹ್ವಾನಿಸಿದ್ದಾರೆ. ಅಲ್ಲದೇ ಪ್ರತಿಯೊಂದು ಊರಿನಲ್ಲಿ ಕಾರ್ಯಕರ್ತರು ಗ್ರಾಮಸ್ಥರು ಬರಲು ವ್ಯವಸ್ಥೆ ಮಾಡಿದ್ದಾರೆ. ಚುನಾವಣೆ ಹೊತ್ತು ಇದಾಗಿರುವುದರಿಂದ ಶಾಸಕ ರೇಣುಕಾಚಾರ್ಯ ತಮ್ಮ ಬಲಾಬಲ ತೋರಿಸಬೇಕಿದೆ.
ಈ ಕ್ಷೇತ್ರದಲ್ಲಿ ಶಾಸಕ ರೇಣುಕಾಚಾರ್ಯ ಹಾಗೂ ಮಾಜಿ ಶಾಸಕ ಶಾಂತನಗೌಡಗೆ ಮೊದಲಿನಿಂದಲೂ ಸ್ಪರ್ಧೆ ಇದ್ದುಘಿ, ಮಾಜಿ ಶಾಸಕ ಶಾಂತನಗೌಡ ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಕರೆಸಿ ರೋಡ್ ಶೋ ಸೇರಿದಂತೆ ಪ್ರಜಾಧ್ವನಿ ಯಾತ್ರೆ ಮಾಡಿದ್ದಾರೆ. ಅಲ್ಲದೇ ಬೃಹತ್ ಸಂಖ್ಯೆಯಲ್ಲಿ ಜನ ಸೇರಿದ್ದರು. ಅಲ್ಲದೇ ಈ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಶಾಸಕ ರೇಣುಕಾಚಾರ್ಯ ವಿರುದ್ಧ ಗುಡುಗಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ರೇಣುಕಾಚಾರ್ಯರು ಸಹ ತಮ್ಮ ಬಲಾಬಲ ಪ್ರದರ್ಶನ ಮಾಡಬೇಕಿದೆ. ಇದಕ್ಕಾಗಿ ಸಾವಿರಾರು ಜನ ಸೇರಿಸಬೇಕಾಗಿದೆ. ಇದು ಕೂಡ ಕೊಂಚ ಕಷ್ಟವಾದರೂ ಹೆಚ್ಚಿನ ಜನ ಸೇರುವ ನಿರೀಕ್ಷೆ ಇದೆ.
ಸಿಎಂ ಬೊಮ್ಮಾಯಿ ಬರುವ ಹಿನ್ನೆಲೆಯಲ್ಲಿ ಗಾಯಕ ವಿಜಯಪ್ರಕಾಶ್ ಸೇರಿದಂತೆ ಇನ್ನಿತರ ಸಹನಟರು ಬರಲಿದ್ದಾರೆ. ಪೊಲೀಸ್ ಬಿಗಿ ಬಂದೋ ಬಸ್ತ್ ಕೂಡ ಇದ್ದುಘಿ, ಸಿಎಂ ಹೋಗುವ ತನಕ ಪಹರೆ ಬಿಟ್ಟು ಹೋಗುವ ಹಾಗಿಲ್ಲಘಿ. ಒಟ್ಟಾರೆ ಶಾಸಕ ರೇಣುಕಾಚಾರ್ಯ ತನ್ನ ಹಿಂಬಾಲಕರು, ಬಿಜೆಪಿ ಕಾರ್ಯಕರ್ತರನ್ನು ಒಟ್ಟುಗೂಡಿಸಿದ್ದುಘಿ, ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇದೆ.
ಚುನಾವಣೆ ಹೊತ್ತಲ್ಲಿ ಗಿಮಿಕ್ : ಚುನಾವಣಾ ಹೊತ್ತಾಗಿರುವ ಕಾರಣ ಮತದಾರರನ್ನು ಆಕರ್ಷಿಸುವ ತಂತ್ರ ಇದಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಇಲ್ಲಿಗೆ ಬರುತ್ತಿದ್ದಾರೆ. ಇವುಗಳು ಆರಂಭವಾದರೆ ಇವುಗಳನ್ನು ಇಟ್ಟುಕೊಂಡು ಮತ ಕೇಳಬಹುದು ಎಂಬ ಲೆಕ್ಕಾಚಾರವು ಇದೆ. ರಾಜಕೀಯ ತಂತ್ರವೂ ಇದ್ದು ಶಾಸಕ ರೇಣುಕಾಚಾರ್ಯ ಇದರಲ್ಲಿ ಜಯಗಳಿಸುತ್ತಾರಾ ಎಂದು ಕಾದು ನೋಡಬೇಕಾಗಿದೆ.