ಲೋಕಲ್ ಸುದ್ದಿ

ಅಧಿಕ ಶ್ರಾವಣ ಮಾಸದ ೩೩ ಮುತ್ತೈದೆಯರಿಗೆ ಉಡಿ ತುಂಬಿದ ಕಲಾಕುಂಚ ಮಹಿಳಾ ತಂಡ

ಅಧಿಕ ಶ್ರಾವಣ ಮಾಸದ ೩೩ ಮುತ್ತೈದೆಯರಿಗೆ ಉಡಿ ತುಂಬಿದ ಕಲಾಕುಂಚ ಮಹಿಳಾ ತಂಡ

ದಾವಣಗೆರೆ: ಅಧಿಕ ಶ್ರಾವಣ ಮಾಸದ ಪವಿತ್ರ ದಿನವಾದ ೨೩ ಜುಲೈ ಭಾನುವಾರದಂದು ನಗರದ ಶ್ರೀ ಸುಕೃತೀಂದ್ರ ಕಲಾಮಂದಿರದಲ್ಲಿ ಶ್ರೀ ಗಾಯತ್ರಿ ಮಹಾಯಜ್ಞ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ವಿಶೇಷ ಸಂದರ್ಭದಲ್ಲಿ ೩೩ ಕೋಟಿ ದೇವತೆಗಳನ್ನು ಸ್ಮರಿಸಿ ೩೩ ಮುತ್ತೈದೆಯರಿಗೆ ಶಾಸ್ತ್ರೊಕ್ತವಾಗಿ ಕಂಕಣಕಟ್ಟಿ, ಅರಸಿನ ಕುಂಕುಮ, ಹಸಿರು ಗಾಜಿನ ಬಳೆ, ಶ್ರೀ ಗಾಯತ್ರಿ ಶ್ಲೋಕದ ಪುಸ್ತಕ, ರವಿಕೆ ಬಟ್ಟೆಯ ಜತೆಗೆ ತೆಂಗಿನಕಾಯಿ ಉಡುಗೊರೆ ಕೊಟ್ಟು ಗೌರವಿಸಿದ ಅವಿಸ್ಮರಣೀಯ ಮಧುರ ಕ್ಷಣ ಎಂದು ಶ್ರೀ ಗಾಯತ್ರಿ ಪರಿವಾರದ ಅಧ್ಯಕ್ಷೆ ಡಾ|| ಸುಶೀಲಮ್ಮ ತಮ್ಮ ಅಂತರಾಳದ ಭಾವನೆ ವ್ಯಕ್ತಪಡಿಸಿದರು.

ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಶ್ರೀಮತಿ ಜ್ಯೋತಿ ಗಣೇಶ್ ಶೆಣೈಯವರ ನೇತೃತ್ವದಲ್ಲಿ ನಡೆದ ಈ ಸಂಪ್ರದಾಯಿಕ ಪರಂಪರೆಯ ವೇದಿಕೆಯಲ್ಲಿ ಕಲಾಕುಂಚ ಮಹಿಳಾ ವಿಭಾಗದ ಗೌರವ ಅಧ್ಯಕ್ಷರಾದ ಶ್ರೀಮತಿ ವಸಂತಿ ಮಂಜುನಾಥ, ಅಧ್ಯಕ್ಷರಾದ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ, ಕಲಾಕುಂಚ ಸಿದ್ದವೀರಪ್ಪ ಬಡಾವಣೆ ಶಾಖೆ ಅಧ್ಯಕ್ಷರಾದ ಶ್ರೀಮತಿ ಲಲಿತಾ ಕಲ್ಲೇಶ್, ಹಿರಿಯ ಗಾಯಕಿ ವಿದುಷಿ ಶ್ರೀಮತಿ ಸಾವಿತ್ರಮ್ಮ ಶಂಕರನಾರಾಯಣ ಶಾಸ್ತ್ರಿಜತೆಗೆ ಕಲಾಕುಂಚ ವಿವಿಧ ಬಡಾವಣೆ ಶಾಖೆಗಳ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

Most Popular

To Top