ಜಿಡಿಎಸ್ 2ನೇ ಪಟ್ಟಿ ಬಿಡುಗಡೆ ಬೇರೆ ಪಕ್ಷದಿಂದ ಬಂದವರಿಗೆ ರೆಡ್ ಕಾರ್ಪೆಟ್
ಬೆಂಗಳೂರೂ: ಮೇ 10 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದ್ದು, ತೀವ್ರ ಕುತೂಹಲ ಕೆರಳಿಸಿದ್ದ ಹಾಸನ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಕೈತಪ್ಪಿದೆ.
ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು 49 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದರು.
ಕುಮಾರಸ್ವಾಮಿ ಅವರು ಹಾಸನ ಕ್ಷೇತ್ರದಲ್ಲಿ ತಾವು ಬಯಸಿದಂತೆ ಎಚ್.ಪಿ.ಸ್ವರೂಪ್ ಅವರಿಗೆ ಜೆಡಿಎಸ್ ಟಿಕೆಟ್ ನೀಡಿದ್ದಾರೆ. ಅಲ್ಲದೆ ಅಧಿಕೃತವಾಗಿ ಅಭ್ಯರ್ಥಿಗಳ ಎರಡನೇ ಪಟ್ಟಿ ಘೋಷಿಸುವ ಮುನ್ನವೇ ಕುಮಾರಸ್ವಾಮಿ ಅವರು ಸ್ವರೂಪ್ ಗೆ ಬಿ ಫಾರಂ ನೀಡಿದ್ದಾರೆ.
ಬಿಡುಗಡೆಯಾದ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಈ ಕೆಳಕಂಡಂತಿದೆ:
1.ಕುಡುಚಿ (ಎಸ್.ಸಿ)-ಆನಂದ ಮಾಳಗಿ
2 .ರಾಯಭಾಗ(ಎಸ್.ಸಿ)- ಪ್ರದೀಪ ಮಾಳಗಿ
3. ಸವದತ್ತಿ ಯಲ್ಲಮ್ಮ- ಸೌರಭ ಆನಂದ ಚೋಪ್ರಾ
4.ಅಥಣಿ- ಶ್ರೀ ಶಶಿಕಾಂತ ಪಡಸಲಗಿ ಗುರುಗಳು
5. ಹುಬ್ಬಳ್ಳಿ-ಧಾರವಾಡ ಪೂರ್ವ(ಎಸ್.ಸಿ)-ವೀರಭದ್ರಪ್ಪ ಹಾಲರವಿ
6.ಕುಮಟಾ-ಸೂರಜ್ ಸೋನಿ ನಾಯಕ
7. ಹಳಿಯಾಳ- ಎಸ್.ಎಲ್.ಘೋಟ್ನೇಕರ್
8. ಭಟ್ಕಳ- ನಾಗೇಂದ್ರ ನಾಯಕ್
9. ಶಿರಸಿ-ಸಿದ್ದಾಪುರ- ಉಪೇಂದ್ರ ಪೈ
10. ಯಲ್ಲಾಪುರ-ಡಾ.ನಾಗೇಶ ನಾಯಕ್
11. ಚಿತ್ತಾಪುರ (ಎಸ್.ಸಿ)- ಸುಭಾಷಚಂದ್ರ ರಾಥೋಡ
12.ಕಲ್ಬರ್ಗಿ ಉತ್ತರ-ನಾಸೀರ್ ಹುಸೇನ್ ಉಸ್ತಾದ್
13.ಬಳ್ಳಾರಿ ನಗರ-ಅಲ್ಲಾಭಕ್ಷ ಅಯಾಸ್ ಮುನ್ನಾ
14. ಹಗರಿಬೊಮ್ಮನಹಳ್ಳಿ (ಎಸ್.ಸಿ)-ಪರಮೇಶ್ವರಪ್ಪ
15.ಹರಪನಹಳ್ಳಿ- ಎನ್. ಎಂ. ನೂರ್ ಅಹ್ಮದ್
16. ಸಿರಗುಪ್ಪ (ಎಸ್.ಟಿ)- ಪರಮೇಶ್ವರ ನಾಯಕ
17. ಕಂಪ್ಲಿ (ಎಸ್.ಟಿ)- ರಾಜು ನಾಯಕ್
18.ಕೊಳ್ಳೇಗಾಲ (ಎಸ್.ಸಿ)-ಪುಟ್ಟಸ್ವಾಮಿ
19. ಗುಂಡ್ಲುಪೇಟೆ- ಕಡಬೂರು ಮಂಜುನಾಥ
20. ಕಾಪು- ಸಬೀನಾ ಸಮದ್
21. ಕಾರ್ಕಳ- ಶ್ರೀಕಾಂತ ಕೊಚ್ಚೂರ್
22. ಉಡುಪಿ- ದಕ್ಷತ್ ಆರ್. ಶೆಟ್ಟಿ
23.ಬೈಂದೂರು-ಮನ್ಸೂರ್ ಇಬ್ರಾಹಿಂ
24. ಕುಂದಾಪುರ-ರಮೇಶ್ ಕುಂದಾಪುರ
25. ಮಂಗಳೂರು ದಕ್ಷಿಣ- ಸುಮತಿ ಹೆಗಡೆ
26. ಕನಕಪುರ- ನಾಗರಾಜ
27. ಯಲಹಂಕ- ಎಂ.ಮುನೇಗೌಡ
28. ಸರ್ವಜ್ಞನಗರ- ಮೊಹ್ಮದ್ ಮುಸ್ತಾಫ್
29.ಯಶವಂತರ- ಜವರಾಯಿಗೌಡ
30.ತಿಪಟೂರು- ಶಾಂತಕುಮಾರ
31. ಶಿರಾ- ಆರ್. ಉಗ್ರೇಶ್
32. ಹಾನಗಲ್-ಮನೋಹರ್ ತಹಸೀಲ್ದಾರ್
33. ಸಿಂದಗಿ- ವಿಶಾಲಾಕ್ಷಿ ಶಿವಾನಂದ
34. ಗಂಗಾವತಿ-ಹೆಚ್.ಆರ್.ಚನ್ನಕೇಶವ
35. ಹೆಚ್.ಡಿ. ಕೋಟೆ (ಎಸ್.ಟಿ)- ಜಯಪ್ರಕಾಶ್ ಸಿ.
36.ಜೇವರ್ಗಿ-ದೊಡ್ಡಪ್ಪಗೌಡ ಶಿವಲಿಂಗಪ್ಪಗೌಡ
37. ಶಹಾಪೂರ-ಗುರುಲಿಂಗಪ್ಪಗೌಡ
38. ಕಾರವಾರ- ಚೈತ್ರಾ ಕೋಟಕಾರ್
39. ಪುತ್ತೂರು- ದಿವ್ಯಾ ಪ್ರಭಾ
40. ಕಡೂರು- ವೈ.ಎಸ್.ವಿ ದತ್ತ
41. ಹೊಳೆನರಸೀಪುರ- ಹೆಚ್.ಡಿ. ರೇವಣ್ಣ
42. ಬೇಲೂರು- ಕೆ.ಎಸ್.ಲಿಂಗೇಶ್
43. ಸಕಲೇಶಪುರ- ಹೆಚ್. ಕೆ. ಕುಮಾರಸ್ವಾಮಿ
44. ಅರಕಲಗೂಡು- ಎ. ಮಂಜು
45. ಹಾಸನ- ಸ್ವರೂಪ್ ಪ್ರಕಾಶ್
46. ಶ್ರವಣಬೆಳಗೊಳ- ಸಿ.ಎನ್. ಬಾಲಕೃಷ್ಣ
47. ಮಹಾಲಕ್ಷ್ಮಿಲೇಔಟ್- ರಾಜಣ್ಣ
48. ಹಿರಿಯೂರು- ರವೀಂದ್ರಪ್ಪ
49. ಮಾಯಕೊಂಡ (ಎಸ್.ಸಿ)- ಆನಂದಪ್ಪ
50.ಸೊರಬ- ಚಂದ್ರೇಗೌಡ