6ನೇ ದಿನ ಚಿತ್ರದುರ್ಗ ತಲುಪಿದ “ಸಂಕಲ್ಪ ಪಾದ ಯಾತ್ರೆ” ಹೋರಾಟ

6ನೇ ದಿನ ಚಿತ್ರದುರ್ಗ ತಲುಪಿದ "ಸಂಕಲ್ಪ ಪಾದ ಯಾತ್ರೆ" ಹೋರಾಟ

ಬೆಂಗಳೂರು: ಸನ್ಮಾನ್ಯ ಮುಖ್ಯ ಮಂತ್ರಿಗಳು ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಬೇಡಿಕೆಗಳ ಬಗ್ಗೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಕಡತ ಮಂಡಿಸಲು ಸೂಚಿಸಿ ಆದೇಶ ಹೊರಡಿಸಿದ್ದಾರೆ. ಈಗ ಆರೋಗ್ಯ ಇಲಾಖೆ ಮಾನ್ಯ ಆಯುಕ್ತರು ಮತ್ತು MD – NHM ಬೇಡಿಕೆಗಳ ಈಡೇರಕೆಗಾಗಿ ಸಂಬಂಧಿಸಿದ ಮಾಹಿತಿಯೊಂದಿಗೆ ಕಡತ ಸಲ್ಲಿಸುವ ಪ್ರಕ್ರಿಯೆಯಲ್ಲಿ ಇರುವುದು ತಿಳಿದು ಬಂದಿದೆ.


KSHCOEA – BMS ಆಗ್ರಹಿಸುವ ಪ್ರಮುಖ ಬೇಡಿಕೆಗಳಿಗೆ ಕೂಡಲೇ ಲಿಖಿತ ರೂಪದಲ್ಲಿ ಆದೇಶಗಳನ್ನು ಹೊರಡಿಸಲು ಸರಕಾರಕ್ಕೆ ಆಗ್ರಹಿಸುತ್ತೇವೆ (ವಿವರವಾದ ಮಾಹಿತಿ ಲಗತ್ತಿಸಿದೆ) ಮತ್ತು ದಿ. ಮಾರ್ಚ್ 6, 2023 ರಿಂದ ಹುಬ್ಬಳ್ಳಿಯ “ಇಂದಿರಾ ಗಾಂಧಿ ಉದ್ಯಾನವನ (Glass House)” ಬೆಳಿಗ್ಗೆ 10.30ಕ್ಕೆ ಮುಂದುವರೆದ 2ನೇಯ ಹಂತದ ಹೋರಾಟ.


1ನೇ ದಿನ ಹುಬ್ಬಳ್ಳಿಯಿಂದ ಪ್ರಾರಂಭವಾದ “ಪಾದ ಯಾತ್ರೆ” ಶಿಗ್ಗಾಂವ ಮೂಲಕ ಸಮೀಪದ ಬಸನಳ್ಳಿ ಗ್ರಾಮ – “ಕಾಶಿ ಜಗದ್ಗುರು ಸಂಸ್ಕೃತಿ ಶಾಲೆ” ಮಾರ್ಚ್ 6, 2023 ತಲುಪಿತು, ಅಲ್ಲಿಂದ ಶುರುವಾದ 2ನೇ ದಿನ “ಪಾದ ಯಾತ್ರೆ” ಶಿಗ್ಗಾಂವಯಿಂದ “ಹುಕ್ಕೇರಿಮಠ ಹಾವೇರಿಗೆ” ತಲುಪಿತು, 3ನೇ ದಿನ “ಪಾದ ಯಾತ್ರೆ” ಹಾವೇರಿ ಯಿಂದ ರಾಣೆಬೆನ್ನರು ಮರಳಸಿದ್ದೇಶ್ವರ ದೇವಸ್ಥಾನ/ ಸಭೆ ಭವನ ತಲುಪಿತು ಮತ್ತು 4ನೇ ದಿನ “ಪಾದ ಯಾತ್ರೆ” ರಾಣೆಬೆನ್ನರು ಯಿಂದ ಶ್ರೀ. ಗುರು ಪಂ. ಪಂಚಾಕ್ಷರಿ ಗವಿಗಳ ಆಶ್ರಮ ದಾವಣಗೆರೆ ತಲುಪಿತು, 5ನೇ ದಿನ ಶುರುವಾದ “ಸಂಕಲ್ಪ ಪಾದ ಯಾತ್ರೆ” ದಾವಣಗೆರೆ ಯಿಂದ ಶ್ರೀ ಮುರುಗ ಮಠ ಚಿತ್ರದುರ್ಗ ತಲುಪಿತು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಹಾಜರಿದ್ದರು, ನಾಳೆಗೂ ಹೋರಾಟ ಮುಂದುವರೆಸುತ್ತೇವೆ ಮುರುಗ ಮಠ ಚಿತ್ರದುರ್ಗ ಸ್ಥಳದಿಂದ ಪ್ರಾರಂಭವಾಗಿ ಹಿರಿಯೂರು ತಲುಪಲಿದೆ.


15% ವೇತನ ಹೆಚ್ಚಳವನ್ನು ಎಲ್ಲರಿಗೂ ಅನ್ವಯ ಮಾಡುವಂತೆ ಹಾಗೂ 60 ವರ್ಷದವರೆಗೂ ಸೇವಾ ಭದ್ರತೆ, ಹೊರಗುತ್ತಿಗೆ ನೌಕರರಿಗೆ ನೇರ ಪಾವತಿ, ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆ, ವಿಮೆ ಮತ್ತು ಕೃಪಾಂಕ ಹೆಚ್ಚಳ ಸಹಿತ ವಿವಿಧ ಪ್ರಮುಖ ಬೇಡಿಕೆಗಳ ಬಗ್ಗೆ ಕೂಡಲೇ ಆದೇಶ ಹೊರಡಿಸಬೇಕು ಎಂದು ಸಂಘದ (KSHCOEA) ರಾಜ್ಯಾಧ್ಯಕ್ಷರಾದ ವಿಶ್ವರಾಧ್ಯ ಎಚ್. ಯಮೋಜಿ ರವರು ಸರ್ಕಾರಕ್ಕೆ ಆಗ್ರಹಿಸಿದರು. ತಿಳಿಸಿದ್ದಾರೆ.


ಎಲ್ಲರೂ ಹೆಚ್ಚಿನ ನೌಕರರು ಸ್ವಯಂಪ್ರೇರಣೆಯಿಂದ ಭಾಗವಹಿಸಿ ಯಶಸ್ವಿ ಗೊಳಿಸಬೇಕೆಂದು ಗುತ್ತಿಗೆ – ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ವಿನಂತಿಸಿದೆ ಎಂದು ಸಂಘದ (KSHCOEA) ರಾಜ್ಯಾಧ್ಯಕ್ಷರಾದ ವಿಶ್ವರಾಧ್ಯ ಎಚ್. ಯಮೋಜಿ ರವರು ತಿಳಿಸಿದ್ದಾರೆ. ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!